ಮುಂಬೈ (ಮಾರ್ಚ್. 12); ಭಾರತದ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಮಾಡಿಲ್ಲದ ಸಾಧನೆ ಹರ್ಮನ್ಪ್ರೀತ್ ಕೌರ್ ನಾಯಕತ್ವದ ತಂಡ ಮಾಡಿತ್ತು. ಆಸ್ಟ್ರೇಲಿಯಾ ನೆಲದಲ್ಲಿ ಆಯೋಜಿಸಲಾಗಿದ್ದ 7ನೇ ಆವೃತ್ತಿಯ ಟಿ-20 ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಪೈನಲ್ ತಲುಪುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿತ್ತು. ಅಲ್ಲದೆ, ಏಷ್ಯಾ ಖಂಡದ ಮಹಿಳಾ ತಂಡವೊಂದು ಮೊದಲ ಬಾರಿಗೆ ಟಿ-20 ವಿಶ್ವಕಪ್ ಫೈನಲ್ ತಲುಪಿದ ಅಪರೂಪದ ದಾಖಲೆ ಅದು.
ನಾಯಕಿ ಹರ್ಮನ್ಪ್ರೀತ್ ಕೌರ್ ಪಡೆ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲುಕಂಡರಾದರೂ, ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮಹಿಳಾ ತಂಡ ನೀಡಿದ್ದ ಶ್ರೇಷ್ಠ ಪ್ರದರ್ಶನ ಇದಾಗಿತ್ತು. ಎಲ್ಲಾ ಮಿತಿಗಳ ಆಚೆಗೂ ಈ ಟೂರ್ನಿಯಲ್ಲಿ ಭಾರತದ ವನಿತೆಯರು ನೀಡಿದ ಪ್ರದರ್ಶನ ಖಂಡಿತವಾಗಿಯೂ ಪ್ರಶಂಸೆಗೆ ಅರ್ಹ ಎಂಬುದರಲ್ಲಿ ಎರಡು ಮಾತಿಲ್ಲ.
Ind vs SA 1st ODI Live: ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ!
ಇಂತಹ ಪ್ರದರ್ಶನ ನೀಡಿ ತವರಿಗೆ ಮರಳಿದ ಆಟಗಾರ್ತಿಯರಿಗೆ ಅಷ್ಟೇ ಅದ್ದೂರಿ ಸ್ವಾಗತ ನೀಡಬೇಕಾದದ್ದು ನಮ್ಮ ಕರ್ತವ್ಯವೂ ಹೌದು..! ಆದರೆ, ದುರಾದೃಷ್ಟವಶಾತ್ ಕಾಂಗರೂಗಳ ನಾಡಿನಲ್ಲಿ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯನ್ನು ರನ್ನರ್ ಅಪ್ ಪ್ರಶಸ್ತಿಯೊಂದಿಗೆ ಮುಗಿಸಿ ವಿಶೇಷ ಸಾಧನೆ ಮಾಡಿ ಭಾರತಕ್ಕೆ ಹಿಂತಿರುಗಿದ ಮಹಿಳಾ ಕ್ರಿಕೆಟ್ ತಂಡಕ್ಕೆ ಕಿಂಚಿತ್ತು ಮರ್ಯಾದೆ, ಗೌರವ ಹಾಗೂ ಆದರಾಭಿಮಾನ ಸಿಗಲಿಲ್ಲ ಎಂಬುದೇ ದುರಾದೃಷ್ಟಕರ.
ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್ನಲ್ಲಿ ಸೋಲು ಕಂಡಿತಾದರೂ ನಡೆದು ಬಂದ ಹಾದಿ ಅಮೋಘವಾಗಿತ್ತು. ಇತಿಹಾಸ ಸೃಷ್ಟಿಸಿದ ಭಾರತ ಮಹಿಳಾ ತಂಡ ತವರಿಗೆ ಬರುತ್ತಿದ್ದಂತೆ ಅಭೂತಪೂರ್ವ ಸ್ವಾಗತ ಸಿಗಲಿದೆ ಎಂದು ಹರ್ಮನ್ಪ್ರೀತ್ ಕೌರ್ ಪಡೆ ನಂಬಿತ್ತು.
ಆದರೆ, ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಭಾರತ ಮಹಿಳಾ ಕ್ರಿಕೆಟಿಗರನ್ನು ಬರ ಮಾಡಿಕೊಳ್ಳಲು ಯಾರೆಂದರೆ ಯಾರೂ ಇರಲಿಲ್ಲ. ಚಪ್ಪಾಳೆ ಕೇಳಲಿಲ್ಲ, ಹರ್ಷೋದ್ಘಾರ ಮೊಳಗಲಿಲ್ಲ..! ಕನಿಷ್ಟ ಬಿಸಿಸಿಐ ಅಧಿಕಾರಿಗಳು ಬಂದು ನೆಪ ಮಾತ್ರಕ್ಕಾದರೂ ಕನಿಷ್ಟ ಒಂದು ಸ್ವಾಗತ ಕೋರಲಿಲ್ಲ.
ಐಪಿಎಲ್ ಅಭಿಮಾನಿಗಳಿಗೆ ಬಿಗ್ ಶಾಕ್; ಈಬಾರಿ ಎಬಿಡಿ ಸೇರಿದಂತೆ ವಿದೇಶಿ ಪ್ಲೇಯರ್ಸ್ ಆಡೋದೆ ಡೌಟ್
What if you achieve something big for the first time in history, you get applauded. But i can't see any welcome here. I think the disappointment on the players face is much greater today than the defeat in final. I m with the team #WeAreWithYouTeam 🇮🇳
pc- ig (tag visible) @BCCI pic.twitter.com/4NB02neUYp
— Kp sinha #VK79 (@kpsinha7) March 10, 2020
Asia XI vs World XI: ಏಷ್ಯಾ ಇಲೆವೆನ್ ಮತ್ತು ವಿಶ್ವ ಇಲೆವೆನ್ ಟೂರ್ನಿ ರದ್ದು..!
ಇಷ್ಟೇ ಅಲ್ಲ, ವಿದೇಶದಲ್ಲಿ ಗಮನಾರ್ಹ ಸಾಧನೆ ಮಾಡಿ ಫೈನಲ್ ಗೇರಿದ್ದ ಭಾರತ ಮಹಿಳಾ ತಂಡಕ್ಕೆ ಭಾರತ ಸರ್ಕಾರ ಈವರೆಗೆ ಒಂದು ಬಹುಮಾನವನ್ನೂ ಘೋಷಣೆ ಮಾಡಲಿಲ್ಲ. ಅಷ್ಟೇ ಏಕೆ, ಕನಿಷ್ಟ ಒಂದು ಪ್ರಶಂಸೆಯ ಮಾತುಗಳನ್ನೂ ಆಡಿಲ್ಲ. ಅತಿ ಕಿರಿಯ ವಯಸ್ಸಿನಲ್ಲಿ ವಿಶ್ವಕಪ್ ಪ್ರತಿನಿಧಿಸಿ ಶರವೇಗದಲ್ಲಿ ಬ್ಯಾಟ್ ಬೀಸುವ ಮೂಲಕ ರನ್ ಹೊಳೆ ಹರಿಸಿ ನೂತನ ದಾಖಲೆ ನಿರ್ಮಿಸಿದ 16ರ ಬಾಲಕಿ ಶಫಾಲಿ ವರ್ಮಾ ಅವರ ಸಾಧನೆಯೂ ಸಹ ಹಲವರ ಕಣ್ಣಿಗೆ ಕಾಣದಿರುವುದು ವಿಪರ್ಯಾಸವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ