• Home
  • »
  • News
  • »
  • sports
  • »
  • IND vs SL 2nd Test: ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಭಾರತಕ್ಕೆ ಆರಂಭಿಕ ಆಘಾತ! ಮಯಾಂಕ್ ಅಗರ್ವಾಲ್ ರನೌಟ್!

IND vs SL 2nd Test: ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಭಾರತಕ್ಕೆ ಆರಂಭಿಕ ಆಘಾತ! ಮಯಾಂಕ್ ಅಗರ್ವಾಲ್ ರನೌಟ್!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತದ ನಾಯಕ ರೋಹಿತ್ ಶರ್ಮಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಎಂಟ್ರಿ ಕೊಟ್ಟ ಕೂಡಲೇ ವಿಶೇಷ ಸಾಧನೆ ಮಾಡಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮಾದರಿಗಳಲ್ಲಿ 400 ಪಂದ್ಯಗಳನ್ನು ಪೂರ್ಣಗೊಳಿಸಲಿದ್ದು, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರಂತಹ ದಿಗ್ಗಜರ ಪಟ್ಟಿಗೆ ಸೇರಲಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium Bengaluru)  ಶನಿವಾರ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ (IND vs SL 2nd Test 1st Day) ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಹನುಮ ವಿಹಾರಿ  (Hanuma Vihari) ಪ್ರಸ್ತುತ ಆತಿಥೇಯರ ಪರ ಬ್ಯಾಟಿಂಗ್ ಮಾಡುತ್ತಿದ್ದು, ಬಲವಾದ ಜೊತೆಯಾಟವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಆರಂಭಿಕರಾಗಿ ಭರವಸೆಯಿಂದ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್ (Mayank Agarwal) ಕೇವಲ 4 ರನ್​ಗಳಿಗೆ ಫೆರ್ನಾಂಡೋ ಬೌಲಿಂಗ್ ನಲ್ಲಿ ದುರದೃಷ್ಟವಷಾತ್ ರನೌಟ್ ಆದರು. ಇದರಿಂದ ಭಾರತದ ಮೊದಲ ವಿಕೆಟ್ ಪತನವಾಯಿತು. ಈ ವರದಿ ಪ್ರಕಟವಾಗುವ ಸಮಯಕ್ಕೆ ಭಾರತ ತಂಡದ ಸ್ಕೋರ್ ಐದು ಓವರ್‌ಗಳಲ್ಲಿ 15 ರನ್ ಆಗಿದೆ. ಭಾರತದ ಒಂದು ವಿಕೆಟ್ ಪತನವಾಗಿದೆ.


ಭಾರತದ ನಾಯಕ ರೋಹಿತ್ ಶರ್ಮಾ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಎಂಟ್ರಿ ಕೊಟ್ಟ ಕೂಡಲೇ ವಿಶೇಷ ಸಾಧನೆ ಮಾಡಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಮಾದರಿಗಳಲ್ಲಿ 400 ಪಂದ್ಯಗಳನ್ನು ಪೂರ್ಣಗೊಳಿಸಲಿದ್ದು, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅವರಂತಹ ದಿಗ್ಗಜರ ಪಟ್ಟಿಗೆ ಸೇರಲಿದ್ದಾರೆ. 400 ಅಥವಾ ಅದಕ್ಕಿಂತ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಭಾರತದ 9ನೇ ಕ್ರಿಕೆಟಿಗನಾಗಲಿದ್ದಾರೆ.


ರೋಹಿತ್ ಇದುವರೆಗೆ 44 ಟೆಸ್ಟ್, 230 ODI ಮತ್ತು 125 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.ಈ ಡೇ-ನೈಟ್ ಟೆಸ್ಟ್ ಪಿಂಕ್ ಬಾಲ್‌ನೊಂದಿಗೆ ನಡೆಯಲಿದೆ. ಸದ್ಯ 2 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆಯಲ್ಲಿದೆ.


ಸಿಂಹಳೀಯರ ವಿರುದ್ಧ ಕಣಕ್ಕಿಳಿದಿರುವ ಭಾರತ ತಂಡ ಹೀಗಿದೆ: 


ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಹನುಮ ವಿಹಾರಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ರವೀಂದ್ರ ಜಡೇಜಾ, ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.


ಶ್ರೀಲಂಕನ್ ಪಡೆ ಹೀಗಿದೆ:
ದಿಮುತ್ ಕರುಣಾರತ್ನೆ, ಲಹಿರು ತಿರಿಮನ್ನೆ, ಕುಸಾಲ್ ಮೆಂಡಿಸ್, ಚರಿತ್ ಅಸ್ಲಂಕಾ, ಏಂಜೆಲೊ ಮ್ಯಾಥ್ಯೂಸ್, ಧನಂಜಯ್ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ, ಸುರಂಗ ಲಕ್ಮಲ್, ವಿಶ್ವ ಫೆರ್ನಾಂಡೋ, ಲಸಿತ್ ಎಂಬುಲ್ಡೆನಿಯಾ, ಮತ್ತು ಪಿ. ಜಯವಿಕ್ರಮ.


ಇತರ ದೇಶಘ ಸಾಧನೆ ಹೀಗಿದೆ
ಇದುವರೆಗೆ 10 ತಂಡಗಳು ಕನಿಷ್ಠ ಒಂದು ಹಗಲು-ರಾತ್ರಿ ಟೆಸ್ಟ್ ಆಡಿವೆ. ಆಸ್ಟ್ರೇಲಿಯಾ ಹೊರತುಪಡಿಸಿ ಉಳಿದೆಲ್ಲ ತಂಡಗಳು ಸೋತಿವೆ. ಆಸ್ಟ್ರೇಲಿಯಾ ಇದುವರೆಗೆ 10 ಹಗಲು-ರಾತ್ರಿ ಟೆಸ್ಟ್‌ಗಳನ್ನು ಆಡಿದೆ ಮತ್ತು ಎಲ್ಲವನ್ನೂ ಗೆದ್ದಿದೆ. ಉಳಿದಂತೆ ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡವು ಇದುವರೆಗೆ ಒಂದೇ ಒಂದು ಪಿಂಕ್ ಬಾಲ್ ಟೆಸ್ಟ್ ಅನ್ನು ಗೆದ್ದಿಲ್ಲ.


ಇದನ್ನೂ ಓದಿ: IND vs SL: ಭಾರತ -ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಟೆಸ್ಟ್, ದಾಖಲೆಗಳು ಏನು ಹೇಳುತ್ತವೆ ನೋಡಿ..!


ಭಾರತ ಮತ್ತು ಶ್ರೀಲಂಕಾದ ಡೇ-ನೈಟ್ ಟೆಸ್ಟ್‌ಗಳ ದಾಖಲೆಗಳನ್ನು ಗಮನಿಸಿದರೆ, ಎರಡೂ ತಂಡಗಳು ಇದುವರೆಗೆ 3-3 ಪಂದ್ಯಗಳನ್ನು ಆಡಿವೆ. ಇಬ್ಬರೂ 2-2 ಪಂದ್ಯಗಳನ್ನು ಗೆದ್ದಿದ್ದಾರೆ. ಅದೇ ವೇಳೆ ಇಬ್ಬರೂ ತಲಾ ಒಂದೊಂದು ಪಂದ್ಯದಲ್ಲಿ ಸೋತಿದ್ದಾರೆ. ಆದರೆ ಉಭಯ ತಂಡಗಳು ಇದೇ ಮೊದಲ ಬಾರಿಗೆ ಡೇ-ನೈಟ್ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ.


ಇದನ್ನೂ ಓದಿ: IPL ಇದ್ರೆ ಮನೋರಂಜನೆಗೆ ತೊಂದ್ರೆ ಇಲ್ಲಾ ಅಂತಿದ್ದಾರೆ Dhoni, ಇಂಥಾ ನಾಟಕ ಈಗಾ ನಾರ್ಮಲ್ ಅಂತೆ


ಭಾರತ ಇದುವರೆಗೆ ತವರಿನಲ್ಲಿ 2 ಡೇ-ನೈಟ್ ಟೆಸ್ಟ್ ಆಡಿದ್ದು, ಎರಡನ್ನೂ ಗೆದ್ದಿದೆ. 2019ರ ನವೆಂಬರ್‌ನಲ್ಲಿ ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ತಂಡವು ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಮತ್ತು 46 ರನ್‌ಗಳಿಂದ ಸೋಲಿಸಿತು. ಅಲ್ಲದೇ ಫೆಬ್ರವರಿ 2021 ರಲ್ಲಿ, ಟೀಂ ಇಂಡಿಯಾವು ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ಅನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಇದಲ್ಲದೆ, ಡಿಸೆಂಬರ್ 2020 ರಲ್ಲಿ ಅಡಿಲೇಡ್‌ನಲ್ಲಿ ತಂಡವು ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್‌ಗಳಿಂದ ಸೋತಿದೆ.

Published by:ಗುರುಗಣೇಶ ಡಬ್ಗುಳಿ
First published: