Team India: ಟೀಮ್ ಇಂಡಿಯಾ ಇಂಗ್ಲೆಂಡ್​ಗೆ ತೆರಳಲು ಡೇಟ್ ಫಿಕ್ಸ್..!

ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ಆರ್​ ಅಶ್ವಿನ್, ರವೀಂದ್ರ ಜಡೇಜಾ.

WTC

WTC

 • Share this:
  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಜೂ. 2 ರಂದು ಇಂಗ್ಲೆಂಡ್​ನತ್ತ ಪ್ರಯಾಣ ಬೆಳೆಸಲಿದೆ. ಇದಕ್ಕೂ ಮುನ್ನ ಆಟಗಾರರಿಗೆ ಮುಂಬೈನಲ್ಲಿ 8 ದಿನಗಳ ಕ್ವಾರಂಟೈನ್​ ಇರಲಿದ್ದು, ಆ ಬಳಿಕ ಇಂಗ್ಲೆಂಡ್​ನಲ್ಲಿ 10 ದಿನಗಳ ಸಾಫ್ಟ್ ಕ್ವಾರಂಟೈನ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಉಳಿಯಲಿದ್ದಾರೆ.

  ಇತ್ತ ಇದೊಂದು ಸುದೀರ್ಘ ಸರಣಿಯಾಗಿರುವ ಕುಟುಂಬವರಿಗೂ ತೆರಳಲು ಆಟಗಾರರಿಗೆ ಅನುಮತಿ ನೀಡಲಾಗಿದೆ. ಅದರಂತೆ ಪತ್ನಿ ಹಾಗೂ ಮಕ್ಕಳು ಆಟಗಾರರೊಂದಿಗೆ ಇರಬಹುದಾಗಿದೆ. ಆದರೆ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಬಳಿಕವಷ್ಟೇ ತೆರಳಲು ಅನುಮತಿಸಲಾಗಿದೆ. ಅಂದರೆ ಆಗಸ್ಟ್ 4 ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ವೇಳೆ ಆಟಗಾರರು ತಮ್ಮ ಕುಟುಂಬದವರನ್ನು ಕರೆಸಿಕೊಳ್ಳಬಹುದಾಗಿದೆ.

  ಇನ್ನು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ವೀಕ್ಷಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್​ ಶಾ ಕೂಡ ಇಂಗ್ಲೆಂಡ್​ಪ್ರಯಾಣಿಸಲಿದ್ದಾರೆ. ಹಾಗೆಯೇ ಇಗ್ಲೆಂಡ್ ಸರಣಿಗೆ ತೆರಳಲಿರುವ ಆಟಗಾರರಿಗೆ ಮೊದಲ ಸುತ್ತಿನ ಕೋವಿಡ್ ವಾಕ್ಸಿನ್ ನೀಡಲಾಗುತ್ತದೆ. ಅಲ್ಲದೆ ಎರಡನೇ ಸುತ್ತಿನ ವಾಕ್ಸಿನ್ ಇಂಗ್ಲೆಂಡ್​ನಲ್ಲಿ ಹಾಕಿಸಿಕೊಳ್ಳಲು ಬಿಸಿಸಿಐ ವ್ಯವಸ್ಥೆ ಮಾಡಲಿದೆ.

  ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 18 ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿದೆ. ಆ ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಯು ಆಗಸ್ಟ್ 4 ರಿಂದ ನಾಟಿಂಗ್ಹ್ಯಾಮ್‌ನಲ್ಲಿ ಪ್ರಾರಂಭವಾಗಲಿದೆ. ಎರಡನೇ ಟೆಸ್ಟ್ ಆಗಸ್ಟ್ 12 ರಿಂದ ಲಾರ್ಡ್ಸ್​ನಲ್ಲಿ, ಮೂರನೆಯದು ಆಗಸ್ಟ್ 25 ರಿಂದ ಲೀಡ್ಸ್​ನಲ್ಲಿ, ನಾಲ್ಕನೆ ಟೆಸ್ಟ್​ ಸೆಪ್ಟೆಂಬರ್ 2 ರಿಂದ ಓವಲ್​ನಲ್ಲಿ ಮತ್ತು ಐದನೇ ಟೆಸ್ಟ್​ ಸೆಪ್ಟೆಂಬರ್ 10 ರಂದು ಮ್ಯಾಂಚೆಸ್ಟರ್​ನಲ್ಲಿ ನಡೆಯಲಿದೆ.

  ಟೀಮ್ ಇಂಡಿಯಾ ಟೆಸ್ಟ್ ತಂಡ ಹೀಗಿದೆ: ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ಮಯಾಂಕ್ ಅರ್ಗವಾಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್, ಆರ್​ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕುರ್, ಉಮೇಶ್ ಯಾದವ್ (ಕೆಎಲ್ ರಾಹುಲ್, ವೃದ್ಧಿಮಾನ್ ಸಾಹ ಫಿಟ್​ನೆಸ್ ಸಾಬೀತುಪಡಿಸಿ ತಂಡವನ್ನು ಸೇರಿಕೊಳ್ಳಲಿದ್ದಾರೆ)
  Published by:zahir
  First published: