U19 World Cup: ಕಿರಿಯರ ವಿಶ್ವಕಪ್ ವಾರ್ಮಪ್: ವಿಂಡೀಸ್, ಆಸೀಸ್ ಮಣಿಸಿದ ಟೀಮ್ ಇಂಡಿಯಾ

India U19 Cricket Team: ಜ. 14ರಂದು ಆರಂಭವಾಗಲಿರುವ ಕಿರಿಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಮುನ್ನ ಟೀಮ್ ಇಂಡಿಯಾ ಎರಡು ವಾರ್ಮಪ್ ಮ್ಯಾಚ್​ಗಳನ್ನ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಭಾರತದೆದುರು ಸೋತು ಸುಣ್ಣವಾಗಿವೆ.

ಭಾರತ ಜೂನಿಯರ್ ಕ್ರಿಕೆಟ್ ತಂಡ

ಭಾರತ ಜೂನಿಯರ್ ಕ್ರಿಕೆಟ್ ತಂಡ

  • Share this:
ಕೆರಿಬಿಯನ್ ಐಲೆಂಡ್ಸ್: ಕಿರಿಯರ ಏಷ್ಯಾ ಕಪ್ ವಿಜೇತರಾಗಿರುವ ಟೀಮ್ ಇಂಡಿಯಾ ಇದೀಗ ಕಿರಿಯ ವಿಶ್ವಕಪ್​ಗೆ ಭರ್ಜರಿಯಾಗಿ ಸಿದ್ಧಗೊಂಡಿದೆ. ಇದೇ 14ರಂದು ಪ್ರಾರಂಭವಾಗಲಿರುವ ಅಂಡರ್-19 ವಿಶ್ವಕಪ್​ಗೆ ಪೂರ್ವದಲ್ಲಿ ನಡೆದ ಎರಡೂ ಅಭ್ಯಾಸ ಪಂದ್ಯಗಳನ್ನ ಭಾರತದ ಹುಡುಗರು ಜಯಿಸಿ ಆತ್ಮವಿಶ್ವಾಸದಿಂದ ಮಹಾ ಟೂರ್ನಿಗೆ ಅಡಿ ಇಡುತ್ತಿದ್ದಾರೆ. ಗಯಾನ ದ್ವೀಪದ ಪ್ರಾವಿಡೆನ್ಸ್ ನಗರದಲ್ಲಿ ಇಂದು ನಡೆದ ತಮ್ಮ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 9 ವಿಕೆಟ್​ಗಳಿಂದ ನಿರಾಯಾಸವಾಗಿ ಗೆಲುವು ಪಡೆದರು. ಮೊನ್ನೆಯಷ್ಟೇ ಭಾರತೀಯ ತಂಡ ತನ್ನ ಮೊದಲ ವಾರ್ಮಪ್ ಮ್ಯಾಚ್​ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು 108 ರನ್​ಗಳಿಂದ ಮಣಿಸಿತ್ತು.

ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ವಾರ್ಮಪ್ ಮ್ಯಾಚ್​ನಲ್ಲಿ ಗೆಲುವಿಗೆ 269 ರನ್ ಗುರಿ ಪಡೆದ ಭಾರತೀಯರು 48ನೇ ಓವರ್​ನಲ್ಲಿ ಗೆಲುವು ಸಾಧಿಸಿದರು. ಈ ಹಂತದಲ್ಲಿ ಅಂಗಕೃಶ್ ರಘುವಂಶಿ ಅವರು ಮಾತ್ರ ಔಟಾದರು. ಹರ್ನೂರ್ ಸಿಂಗ್ ಭರ್ಜರಿ ಶತಕ ಭಾರಿಸಿ ರಿಟೈರ್ಟ್ ಹರ್ಟ್ ಆದು. ಶೇಖ್ ರಷೀದ್ ಮತ್ತು ನಾಯಕ ಯಶ್ ಧುಲ್ ಅವರೂ ಮಿಂಚಿನ ಆಟವಾಡಿದರು. ಇವರಿಬ್ಬರೂ ಕೂಡ ರಿಟೈರ್ಟ್ ಹರ್ಟ್ ಆದರು. ಇದರಿಂದಾಗಿ ಪ್ರಮುಖ ಬ್ಯಾಟುಗಾರರಿಗೆ ವಿಶ್ವಕಪ್ ಮುಖ್ಯ ಟೂರ್ನಿಗೆ ಮುನ್ನ ಬ್ಯಾಟಿಂಗ್ ಅಭ್ಯಾಸ ಸಿಗಲು ಸಾಧ್ಯವಾಯಿತು. ಅತ್ತ ಆಸ್ಟ್ರೇಲಿಯಾ ತಂಡದ ಎಂಟು ಮಂದಿ ಆಟಗಾರರು ಬೌಲಿಂಗ್ ಮಾಡಿ ಅಭ್ಯಾಸ ನಡೆಸಿದರು.

ಇದಕ್ಕೆ ಮುನ್ನ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಾಯಕ ಕೂಪರ್ ಕೊನೋಲಿ ಅವರ ಭರ್ಜರಿ ಶತಕದ ನೆರವಿನಿಂದ 268 ರನ್ ಗಳಿಸಲು ಶಕ್ಯವಾಯಿತು. ಅವರನ್ನ ಬಿಟ್ಟರೆ ಮತ್ತೊಬ್ಬ ಬ್ಯಾಟುಗಾರನಿಂದ ಅರ್ಧಶತಕವೂ ಬರಲಿಲ್ಲ. ವೇಗದ ಬೌಲರ್​ಗಳಾದ ರಾಜವರ್ಧನ್ ಹಂಗರ್ಗೇಕರ್ ಮತ್ತು ರವಿಕುಮಾರ್ ಮಾರಕ ಬೌಲಿಂಗ್ ಪ್ರದರ್ಶನ ಮಾಡಿದರು.

ವೆಸ್ಟ್ ಇಂಡೀಸ್ ವಿರುದ್ಧ 108 ರನ್ ಗೆಲುವು:

ಜ. 9ರಂದು ಇದೇ ಪ್ರಾವಿಡೆನ್ಸ್ ನಗರದಲ್ಲಿ ನಡೆದ ವಾರ್ಮಪ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಅಂಡರ್-19 ತಂಡವನ್ನು ಭಾರತೀಯರು 108 ರನ್​ಗಳಿಂದ ಸುಲಭವಾಗಿ ಸೋಲಿಸಿದ್ದರು. ಮೊದಲು ಬ್ಯಾಟ್ ಮಾಡಿದ ಭಾರತದ ಕಿರಿಯರು 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿದರು. ನಿಶಾಂತ್ ಸಿಂಧು ಅಜೇಯ 78 ರನ್ ಗಳಿಸಿದರೆ ನಾಯಕ ಯಶ್ ಧುಲ್ ಕೂಡ ಹಾಫ್ ಸೆಂಚುರಿ ಭಾರಿಸಿದರು. ಆರಾಧ್ಯ ಯಾದವ್ ಮಿಂಚಿನ 42 ರನ್ ಗಳಿಸಿ ಗಮನ ಸೆಳೆದರು.

ಇದನ್ನೂ ಓದಿ: PKL 8: ತೆಲುಗು ಟೈಟಾನ್ಸ್​ಗೆ 8ನೇ ಪಂದ್ಯದಲ್ಲೂ ಸಿಗದ ಜಯ; ಪಟ್ನಾ ಪೈರೇಟ್ಸ್ ಅಗ್ರಸ್ಥಾನಕ್ಕೆ

ಇದಕ್ಕೆ ಪ್ರತಿಯಾಗಿ ವೆಸ್ಟ್ ಇಂಡೀಸ್ ಹುಡುಗರು ಕೇವಲ 170 ರನ್​ಗೆ ಆಲೌಟ್ ಆದರು. ಮ್ಯಾಥ್ಯೂ ನಂದು ಮಾತ್ರ ಅರ್ಧಶತಕ ಗಳಿಸಿದರು. ಭಾರತದ ಸ್ಪಿನ್ನರ್​ಗಳಾದ ಕೌಶಲ್ ತಂಬೆ ಮತ್ತು ಮಾನವ್ ಪರಖ್ ತಲಾ 3 ವಿಕೆಟ್ ಪಡೆದು ಕೆರಿಬಿಯನ್ನರನ್ನ ಕಟ್ಟಿಹಾಕಿದರು. ಗರ್ವ್ ಸಾಂಗವಾನ್ ಮತ್ತು ಅನೀಶ್ವರ್ ಗೌತ್ ಕೂಡ ತಲಾ 2 ವಿಕೆಟ್ ಪಡೆದರು.

ಜ. 15ರಂದು ಭಾರತದ ಮೊದಲ ಪಂದ್ಯ:

ಜ. 14ರಿಂದ ಅಂಡರ್-19 ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿದ್ದು, ನಾಲ್ಕು ಗುಂಪುಗಳಾಗಿ ವಿಭಾಗಿಸಲಾಗಿದೆ. ಭಾರತ ತಂಡ ಬಿ ಗುಂಪಿನಲ್ಲಿದೆ. ಸೌತ್ ಆಫ್ರಿಕಾ, ಐರ್​ಲೆಂಡ್ ಮತ್ತು ಉಗಾಂಡ ತಂಡಗಳು ಈ ಗುಂಪಿನಲ್ಲಿರುವ ಇತರ ಮೂರು ತಂಡಗಳಾಗಿವೆ.

ಎ ಗುಂಪು: ಇಂಗ್ಲೆಂಡ್, ಬಾಂಗ್ಲಾದೇಶ, ಕೆನಡಾ, ಯುಎಇ
ಬಿ ಗುಂಪು: ಸೌತ್ ಆಫ್ರಿಕಾ, ಭಾರತ, ಐರ್​ಲೆಂಡ್, ಉಗಾಂಡ
ಸಿ ಗುಂಪು: ಪಾಕಿಸ್ತಾನ್, ಅಫ್ಘಾನಿಸ್ತಾನ್, ಜಿಂಬಾಬ್ವೆ, ಪಪುವಾ ನ್ಯೂಗಿನಿಯಾ
ಡಿ ಗುಂಪು: ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಸ್ಕಾಟ್​ಲೆಂಡ್.

ಜನವರಿ 22ಕ್ಕೆ ಗ್ರೂಪ್ ಹಂತದ ಪಂದ್ಯಗಳು ಮುಗಿಯುತ್ತವೆ. ಜ. 25ರಿಂದ ಪ್ಲೇ ಆಫ್ ಹಂತದ ಪಂದ್ಯಗಳು ನಡೆಯುತ್ತವೆ. ಫೆ. 1 ಮತ್ತು 2ರಂದು ಸೆಮಿಫೈನಲ್ ಪಂದ್ಯಗಳು ನಡೆಯುತ್ತವೆ. ಫೆ. 4ರಷ್ಟರಲ್ಲಿ ವಿವಿಧ ಸ್ಥಾನಗಳಿಗೆ ಪಂದ್ಯಗಳು ಮುಕ್ತಾಯಗೊಳ್ಳುತ್ತವೆ. ಫೆ. 5ರಂದು ಫೈನಲ್ ಪಂದ್ಯ ಇರಲಿದೆ.

ಪ್ಲೇ ಆಫ್ ಲೆಕ್ಕಾಚಾರ ಹೇಗೆ?:

ಪ್ರತೀ ಗುಂಪಿನಿಂದ ಅಗ್ರಸ್ಥಾನ ಪಡೆದ ನಾಲ್ಕು ತಂಡಗಳು ಸೂಪರ್ ಲೀಗ್ ಕ್ವಾರ್ಟರ್​ಫೈನಲ್ ಪ್ರವೇಶಿಸುತ್ತವೆ. ಅಲ್ಲಿಂದ ಗೆಲುವು ಸಾಧಿಸುವ ಎರಡು ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ.

ಇದನ್ನೂ ಓದಿ: IND vs SA: ಬೆಂಕಿಯುಗುಳಿದ ರಬಡ; ಹೆಬ್ಬಂಡೆಯಾದ ಕೊಹ್ಲಿ; ಮೊದಲ ದಿನದ ಹೈಲೈಟ್

ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ನಾಲ್ಕು ತಂಡಗಳು ಪ್ಲೇಟ್ ಕ್ವಾರ್ಟರ್​ಫೈನಲ್ ತಲುಪುತ್ತವೆ. ಅದರಲ್ಲಿ ಗೆದ್ದ 2 ತಂಡಗಳು ಸೂಪರ್ ಲೀಗ್ ಕ್ವಾರ್ಟರ್​ಫೈನಲ್ ತಲುಪುತ್ತವೆ. ಆ ಮುಂಚೆ ಸೂಪರ್ ಲೀಗ್ ಕ್ವಾರ್ಟರ್​ಫೈನಲ್​ನಲ್ಲಿ ಸೋತ 2 ತಂಡಗಳೊಂದಿಗೆ ಪ್ಲೇಟ್ ಹಂತದಿಂದ ಹೋದ ಎರಡು ತಂಡಗಳು ಹಣಾಹಣಿ ನಡೆಸುತ್ತವೆ. ಅದರಲ್ಲಿ ಗೆದ್ದ 2 ತಂಡಗಳು ಸೆಮಿಫೈನಲ್ ತಲುಪುತ್ತವೆ.

ಭಾರತದ ಪಂದ್ಯಗಳು:

1) ಜ. 15: ಸೌತ್ ಆಫ್ರಿಕಾ ವಿರುದ್ಧ
2) ಜ. 19: ಐರ್ಲೆಂಡ್ ವಿರುದ್ಧ
3) ಜ. 22: ಉಗಾಂಡಾ ವಿರುದ್ಧ
Published by:Vijayasarthy SN
First published: