IND vs SL: ವರ್ಷದ ಮೊದಲ ಕದನ ಮಳೆಗೆ ಆಹುತಿ; ಐರನ್ ಬಾಕ್ಸ್, ಹೇರ್ ಡ್ರೈಯರ್ ಬಳಸಿದರು ಒಣಗದ ಪಿಚ್!

ಆಟ ಶುರು ಮಾಡಲು ಔಟ್‌ಫೀಲ್ಡ್‌ ಉತ್ತಮವಾಗಿತ್ತು. ಆದರೆ, ಕೈಕೊಟ್ಟಿದ್ದು ಒದ್ದೆಯಾದ ಪಿಚ್‌. ಪಿಚ್‌ನ ಮೇಲೆ ಹೊದಿಕೆ ಹೊದಿಸಲಾಗಿತ್ತಾದರೂ, ನೀರಿನ ಸೋರಿಕೆಯಾಗಿ ಪಿಚ್‌ನ ಬಹುತೇಕ ಭಾಗಗಳಲ್ಲಿ ತೇವಾಂಶ ಹೆಚ್ಚಿತ್ತು.

news18-kannada
Updated:January 6, 2020, 9:24 AM IST
IND vs SL: ವರ್ಷದ ಮೊದಲ ಕದನ ಮಳೆಗೆ ಆಹುತಿ; ಐರನ್ ಬಾಕ್ಸ್, ಹೇರ್ ಡ್ರೈಯರ್ ಬಳಸಿದರು ಒಣಗದ ಪಿಚ್!
ಪಿಚ್ ಒಣಗಿಸಲು ಬಳಸಿದ ಐರನ್ ಬಾಕ್ಸ್
  • Share this:
ಹೊಸ ವರ್ಷದ ಮೊದಲ ಪಂದ್ಯವನ್ನು ಭರ್ಜರಿ ಆಗಿ ಆರಂಭಿಸಬೇಕು ಎಂದು ಕೊಂಡಿದ್ದ ಟೀಂ ಇಂಡಿಯಾಕ್ಕೆ ಮಳೆರಾಯ ಅಡ್ಡಿ ಪಡಿಸಿದ. ವರುಣನ ಕಾಟದಿಂದಾಗಿ ಶ್ರೀಲಂಕಾ ವಿರುದ್ಧ ನಡೆಯಬೇಕಿದ್ದ ಮೊದಲ ಟಿ-20 ಪಂದ್ಯ ರದ್ದಾಯಿತು.

ಆರಂಭದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಇನ್ನೇನು ಪಂದ್ಯ ಆರಂಭವಾಗಬೇಕು ಎಂಬುವಹೊತ್ತಿಗೆ ಇದ್ದಕ್ಕಿದ್ದಂತೆ ಜೋರಾಗಿ ಭಾರಿ ಮಳೆ ಸುರಿಯಿತು.

 



IPL 2020: ಐಪಿಎಲ್​ನಿಂದ ನಿತೀಶ್ ರಾಣ ಬ್ಯಾನ್ ಆದ್ರೆ ಕೆಕೆಆರ್ ತಂಡಕ್ಕೆ ಬದಲಿ ಆಟಗಾರ ಯಾರು ಗೊತ್ತಾ?

ಸ್ವಲ್ಪ ಹೊತ್ತಿನ ಬಳಿಕ ಮಳೆ ನಿತ್ತಿತಾದರೂ ಅಸ್ಸಾಂ ಕ್ರಿಕೆಟ್​ ಅಸೋಶಿಯೇಷನ್​ನ ಕ್ರೀಡಾಂಗಣದ ಸಿಬ್ಬಂದಿಗಳು ಒದ್ದೆಯಾಗಿದ್ದ ಪಿಚ್‌ ಒಣಗಿಸಲು ಹರಸಾಹಸ ಪಟ್ಟರು.

ಆಟ ಶುರು ಮಾಡಲು ಔಟ್‌ಫೀಲ್ಡ್‌ ಉತ್ತಮವಾಗಿತ್ತು. ಆದರೆ, ಕೈಕೊಟ್ಟಿದ್ದು ಒದ್ದೆಯಾದ ಪಿಚ್‌. ಪಿಚ್‌ನ ಮೇಲೆ ಹೊದಿಕೆ ಹೊದಿಸಲಾಗಿತ್ತಾದರೂ, ನೀರಿನ ಸೋರಿಕೆಯಾಗಿ ಪಿಚ್‌ನ ಬಹುತೇಕ ಭಾಗಗಳಲ್ಲಿ ತೇವಾಂಶ ಹೆಚ್ಚಿತ್ತು.

ಇದನ್ನ ಒಣಗಿಸಲು ಸಿಬ್ಬಂದಿಗಳು ವ್ಯಾಕ್ಯೂಮ್​ ಕ್ಲೀನರ್​ ತಂದು ನೀರು ತೆಗೆದು, ಡ್ರೈ ಮಾಡುವ ಪ್ರಯತ್ನ ಮಾಡಿದರು. ಮತ್ತೊಬ್ಬರು ಇಸ್ತ್ರಿ ಪೆಟ್ಟಿಗೆ ತಂದು ಪಿಚ್​ಮೇಲೆ ಇಸ್ತ್ರಿ ಮಾಡಿ ಒಣಗಿಸುವ ಪ್ರಯತ್ನ ಪಟ್ಟರು. ಇನ್ನೊಬ್ಬರು ಹೇರ್​ ಡ್ರೈಯರ್​ ತಂದು ಪಿಚ್​​ ಅನ್ನು ಒಣಗಿಸಲು ಮುಂದಾದರೂ ವಿಫಲವಾಯಿತು. ಸದ್ಯ ಇದೇ ವಿಷಯ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಚರ್ಚೆಗೆ ವೇದಿಕೆಯಾಗಿದೆ.

 





First published:January 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ