PK Banerjee Passed Away: ಫುಟ್ಬಾಲ್ ದಂತಕಥೆ ಪಿ. ಕೆ ಬ್ಯಾನರ್ಜಿ ಇನ್ನಿಲ್ಲ

Football Legend PK Banerjee Passes Away: ಪಿ.ಕೆ. ಬ್ಯಾನರ್ಜಿ ಸಂತೋಷ್ ಟ್ರೋಫಿಯಲ್ಲಿ ಬಿಹಾರ ಜರ್ಸಿ ಧರಿಸುವ ಮೂಲಕ ಫುಟ್ಬಾಲ್ ಕ್ರೀಡಾಲೋಕಕ್ಕೆ ಪದಾರ್ಪಣೆ ಮಾಡಿದ್ದರು.

ಪಿ.ಕೆ. ಬ್ಯಾನರ್ಜಿ.

ಪಿ.ಕೆ. ಬ್ಯಾನರ್ಜಿ.

 • Share this:
  ಬೆಂಗಳೂರು (ಮಾ. 20): ದೀರ್ಘಕಾಲದಿಂದ ಹೃದಯ ಸಂಬಂಧಿ ಕಾಯಿಲೆಗೊಳಗಾಗಿದ್ದ ಫುಟ್ಬಾಲ್ ದಂತಕಥೆ ಪಿ.ಕೆ. ಬ್ಯಾನರ್ಜಿ ಇಂದು ಅಸುನೀಗಿದ್ದಾರೆ.

  83 ವರ್ಷ ವಯಸ್ಸಾಗಿದ್ದ ಪಿ.ಕೆ. ಬ್ಯಾನರ್ಜಿ ಅವರನ್ನು ಮಾರ್ಚ್ 2ರಂದು ಆಸ್ಪತ್ರೆಗೆ ದಾಖಲಾಗಿಸಿತ್ತು. ಕಳೆದ ಎರಡು ವಾರಗಳಿಗೂ ಅಧಿಕ ಸಮಯ ಅವರನ್ನು ಕೋಲ್ಕತ್ತಾದ ಮೆಡಿಕಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರಿಸಲಾಗಿತ್ತು.

  Indian football legend PK Banerjee passes away at 83 in kolkata
  ಪಿ.ಕೆ. ಬ್ಯಾನರ್ಜಿ.


  ಆದರೆ, ಇಂದು (ಮಾ. 20) ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.

  ನಾನು ಸತ್ತರೂ ಸರಿಯೇ, ಭಾರತ ವಿಶ್ವಕಪ್ ಗೆಲ್ಲಲೇಬೇಕೆಂದು ದೇವರಲ್ಲಿ ಕೇಳಿಕೊಂಡೆ; ಯುವರಾಜ್ ಸಿಂಗ್

  ಪ. ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ ಬ್ಯಾನರ್ಜಿ ಅವರು ಜಮ್ಷೇಡ್ಪುರದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸಂತೋಷ್ ಟ್ರೋಫಿಯಲ್ಲಿ ಬಿಹಾರ ಜರ್ಸಿ ಧರಿಸುವ ಮೂಲಕ ಫುಟ್ಬಾಲ್ ಕ್ರೀಡಾಲೋಕಕ್ಕೆ ಪದಾರ್ಪಣೆ ಮಾಡಿದ್ದರು.

  ಫುಟ್ಬಾಲ್ ಕ್ಷೇತ್ರದಲ್ಲಿ ಆಟಗಾರ ಮತ್ತು ತರಬೇತುದಾರರಾಗಿ ಗುರುತಿಸಿಕೊಂಡಿದ್ದ ಬ್ಯಾನರ್ಜಿ ದೇಶದ ಕ್ರೀಡೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಬ್ಯಾನರ್ಜಿ ಅವರು ಎರಡು ಬಾರಿಯ ಒಲಿಂಪಿಯನ್ ಮತ್ತು 1962ರ ಏಷ್ಯನ್ ಗೇಮ್ಸ್​ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

  ಬ್ಯಾನರ್ಜಿ ಅವರು ಒಟ್ಟು 36 ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಆಡಿದ್ದು, ಅದರಲ್ಲಿ 6 ಪಂದ್ಯಗಳಲ್ಲಿ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಒಟ್ಟು 19 ಅಂತಾರಾಷ್ಟ್ರೀಯ ಗೋಲು ದಾಖಲಿಸಿದ ಸಾಧನೆ ಮಾಡಿದ್ದರು. ಭಾರತ ಸರ್ಕಾರ ಇವರ ಈ ಸಾಧನೆ ಗುರುತಿಸಿ 1990ರಲ್ಲಿ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೆ, 1961ರಲ್ಲಿ ಅರ್ಜುನ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಫುಟ್ಬಾಲ್ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದರು.

  ಅಂಡರ್-19ನಲ್ಲಿ ಅತಿ ವೇಗದ ಅರ್ಧಶತಕ; ಪಂತ್​ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು ಈ ವಿಚಾರಗಳು

  ನಂತರದಲ್ಲಿ ಪೂರ್ವ ಬಂಗಾಳ, ಮೋಹನ್ ಬಗಾನ್ ಮತ್ತು ರಾಷ್ಟ್ರೀಯ ತಂಡದ ತರಬೇತುದಾರರಾಗಿ ಬ್ಯಾನರ್ಜಿ ಸೇವೆ ಸಲ್ಲಿಸಿದ್ದರು.
  First published: