ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದ ವೇಳೆ ಲವ್ ಪ್ರಪೋಸ್; ಲಿಪ್-ಲಾಕ್ ವಿಡಿಯೋ ಫುಲ್ ವೈರಲ್!

ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಲ್ಲಿದ್ದರೆ, ಇತ್ತ ಯುವ ಪ್ರೇಮಿಗಳು ವಿಭಿನ್ನ ರೀತಿಯಲ್ಲಿ ಪ್ರಪೋಸ್ ಮಾಡಿದ ವಿಶೇಷ ಘಟನೆ ನಡೆಯಿತು.

ತನ್ನ ಗೆಳತಿಗೆ ಲವ್ ಪ್ರಪೋಸ್ ಮಾಡುತ್ತಿರುವ ಯುವಕ

ತನ್ನ ಗೆಳತಿಗೆ ಲವ್ ಪ್ರಪೋಸ್ ಮಾಡುತ್ತಿರುವ ಯುವಕ

  • News18
  • Last Updated :
  • Share this:
ಬೆಂಗಳೂರು (ಜೂ. 22): ಈ ಬಾರಿಯ ವಿಶ್ವಕಪ್​ನಲ್ಲಿ ಜೂನ್ 16 ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ಡಕ್ವರ್ತ್​ ನಿಮಯದ ಅನ್ವಯ ಕೊಹ್ಲಿ ಪಡೆ 89 ರನ್​ಗಳ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದು ಎಲ್ಲರಿಗು ತಿಳಿದಿರುವ ವಿಚಾರ.

ಈ ಪಂದ್ಯಕ್ಕೆ ಮ್ಯಾಂಚೆಸ್ಟರ್​​ನ ಇಡೀ ಕ್ರೀಡಾಂಗಣವೆ ತುಂಬಿ ಹೋಗಿತ್ತು. ಈ ಮಧ್ಯೆ ಭಾರತೀಯ ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಗೆಳತಿಗೆ ವಿವಾಹ ಪ್ರಸ್ತಾಪ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೆಳತಿ ಕುಳಿತಿದ್ದ ಸ್ಥಳಕ್ಕೆ ಬಂದ ಗೆಳೆಯ ಆಕೆಗೆ ಲವ್ ಪ್ರಪೋಸ್ ಮಾಡುವ ಜೊತೆಗೆ ಕೈಬೆರಳಿಗೆ ಉಂಗುರು ತೊಡಿಸಿದ್ದಾರೆ.

Indian Fan Proposes to Girlfriend During India vs Pakistan ICC Cricket World Cup 2019 Game at Old Trafford is Going Viral Watch Video
ತನ್ನ ಗೆಳತಿಗೆ ಉಂಗುರ ತೊಡಿಸುತ್ತಿರುವ ಯುವಕ


ಇಷ್ಟೇ ಅಲ್ಲದೆ ತನ್ನ ಗೆಳತಿಯನ್ನು ತಬ್ಬಿಕೊಂಡು ಯುವಕ ಆಕೆಗೆ ಲಿಪ್-ಲಾಕ್ ಮಾಡಿ ಮುತ್ತಿನ ಮಳೆ ಸುರಿಸಿದ್ದಾನೆ. ಅಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಈ ಜೋಡಿಗೆ ತುಂಬು ಹೃದಯದಿಂದ ಹಾರೈಸಿದರು.

Cricket World Cup, IND vs AFG: ರೋಹಿತ್ ಔಟ್; ಕೊಹ್ಲಿ-ರಾಹುಲ್ ಉತ್ತಮ ಜೊತೆಯಾಟ

ಈ ವಿಡಿಯೋವನ್ನು ಸ್ವತಃ ಯುವತಿಯೇ ಅನ್ವಿತಾ ಜೆ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಎಲ್ಲಡೆ ವೈರಲ್ ಆಗುತ್ತಿದೆ.

  First published: