Virat Kohli: ವಿರಾಟ್ ಕೊಹ್ಲಿಯ 100ನೇ ಟೆಸ್ಟ್ ಪಂದ್ಯಕ್ಕೆ ಶುಭ ಹಾರೈಸಿದ ಕ್ರಿಕೆಟ್ ದಿಗ್ಗಜರು

Kohli 100th Test: ಟೀಮ್ ಇಂಡಿಯಾ ಆಟಗಾರ ಇಶಾಂತ್ ಶರ್ಮಾ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯಕ್ಕೆ ಶುಭಕೋರಿದ್ದು ಕೊಹ್ಲಿ ಅವರನ್ನು ಒಬ್ಬ ದಂತಕಥೆ ಎಂದು ಬಣ್ಣಿಸಿದ್ದಾರೆ. ವಿರಾಟ್ 17 ವರ್ಷದವನಾಗಿದ್ದಾಗಿನಿಂದಲೂ ನಾನು ಅವನನ್ನು ನೋಡಿದ್ದೇನೆ.ಇಲ್ಲಿಯವರೆಗೂ ವಿರಾಟ್ ಅದ್ಭುತವಾಗಿ ಆಟ ಆಡಿದ್ದೇನೆ. ಮುಂದಿನ ವರ್ಷಗಳಲ್ಲಿ ಕೊಹ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
    ಟೆಸ್ಟ್ ಕ್ರಿಕೆಟ್ (Test Cricket) ಯಾರು ನೋಡುತ್ತಾರೆ ಎನ್ನುವ ಕಾಲದಲ್ಲಿ ಭಾರತದಲ್ಲಿ(India) ಟೆಸ್ಟ್ ಕ್ರಿಕೆಟ್ಗೆ ಹೊಸ ಭಾಷ್ಯ ಬರೆದವರು ವಿರಾಟ್ ಕೊಹ್ಲಿ(Virat Kohli).. ಟೆಸ್ಟ್ ಕ್ರಿಕೆಟ್ ಇಷ್ಟಪಡದವರೂ ಜನರು ಇಷ್ಟಪಟ್ಟು ಟೆಸ್ಟ್ ಕ್ರಿಕೆಟ್ ನೋಡುವಂತೆ ಮಾಡಿದ್ದು ಕಿಂಗ್ ಕೊಹ್ಲಿ(King Kohli).. ಟೆಸ್ಟ್ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಮಾಡಿ ಭಾರತ ತಂಡವನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿ ಮುಂದಿನ ಪೀಳಿಗೆಗೆ ಹೊಸ ರೂಪು ಕೊಟ್ಟವರು ವಿರಾಟ್ ಕೊಹ್ಲಿ. ಇಂದು ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100ನೇ ಟೆಸ್ಟ್(100th Test) ಪಂದ್ಯವನ್ನು ಆಡುತ್ತಿದ್ದಾರೆ.ಈ ಮೂಲಕ ವಿಶ್ವದಲ್ಲಿ(World) 100 ಟೆಸ್ಟ್ ಪಂದ್ಯ ಆಡಿದ ಕೆಲವೇ ಕೆಲವು ದಿಗ್ಗಜ ಆಟಗಾರರ ಸಾಲಿಗೆ ವಿರಾಟ್ ಸೇರ್ಪಡೆಯಾಗುತ್ತಿದ್ದಾರೆ.ಹೀಗಾಗಿ ವಿರಾಟ್ ಕೊಹ್ಲಿ ಅವರ ಅದ್ಭುತ ಸಾಧನೆಯ ಬಗ್ಗೆ ವಿಶ್ವದ ಕ್ರಿಕೆಟ್ ದಿಗ್ಗಜರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.ಆಗಿದ್ರೆ ಯಾರ್ಯಾರು ವಿರಾಟ್ ಬಗ್ಗೆ ಏನು ಹೇಳಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

    ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ವಿಶೇಷವಾಗಿರುವ ಮೂಲಕ ವಿರಾಟ್ ಕೊಹ್ಲಿಗೆ ಧನ್ಯವಾದ ಹೇಳಿದೆ.ಈ ವಿಡಿಯೋದಲ್ಲಿ ವಿಶ್ವ ಕ್ರಿಕೆಟ್ ನ ದಿಗ್ಗಜರು ಕೊಹ್ಲಿ ಸಾಧನೆಯನ್ನು ಕೊಂಡಾಡಿದ್ದಾರೆ.

    ಎಲ್ಲದಕ್ಕೂ ಕಾರಣ ವಿರಾಟ್ ಕೊಹ್ಲಿ- ರೋಹಿತ್ ಶರ್ಮ

    ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಹಾಡಿ ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ವಹಿಸಿಕೊಳ್ಳುವ ವೇಳೆಗೆ ಟೀಂ ಇಂಡಿಯಾ 7ನೇ ಸ್ಥಾನದಲ್ಲಿತ್ತು. ಕೊಹ್ಲಿ ನಾಯಕರಾದ ಮೇಲೆ ಸತತ ಐದು ವರ್ಷಗಳ ಕಾಲ ಟೆಸ್ಟ್ ಶ್ರೇಯಾಂಕದಲ್ಲಿ ತಂಡ ಅಗ್ರಸ್ಥಾನದಲ್ಲಿತ್ತು.ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ಆಟಗಾರರಾಗಿದ್ದು , ಅಂತಹ ಆಟಗಾರರಿಗಾಗಿ 100 ನೇ ಟೆಸ್ಟ್ ಪಂದ್ಯವನ್ನು ಇನ್ನಷ್ಟು ವಿಶೇಷವಾಗಿಸಲು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.



    ಇದನ್ನೂ ಓದಿ: ಐಪಿಎಲ್ 15ನೇ ಅವೃತ್ತಿಯ ಮಹಾ ಕಾದಾಟಕ್ಕೆ ನಾಯಕನ ಆಯ್ಕೆ ಮಾಡಿದ 9 ತಂಡಗಳು

    ಟೆಸ್ಟ್ ಪಂದ್ಯವನ್ನು ವಿರಾಟ್ ಅವಿಸ್ಮರಣೀಯವಾಗಿಸಿಕೊಳ್ಳಲಿ

    ವಿರಾಟ್ ಕೊಹ್ಲಿಯವರ ಕನಸು ನನಸಾಗುವ ಪಂದ್ಯ. ವಿರಾಟ್ ಪಾಲಿಗೆ ಅವಿಸ್ಮರಣೀಯ ಪಂದ್ಯವಾಗಿದೆ. ಅಲ್ಲದೆ ಭಾರತೀಯ ಕ್ರಿಕೆಟ್ ನಲ್ಲಿ ಇದೊಂದು ಅಮೋಘ ಹೆಗ್ಗುರುತು. ನಾನು ಕೂಡ ನೂರನೇ ಟೆಸ್ಟ್ ಪಂದ್ಯ ಕ್ಷಣವನ್ನು ಆನಂದಿಸಿದ್ದೇನೆ. ಆ ಕ್ಷಣ ಎಷ್ಟೊಂದು ಮಹತ್ವದ ಪೂರ್ಣ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. 11 ವರ್ಷಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ ನ ಪಯಣದಲ್ಲಿ ವಿರಾಟ್ ಕೊಹ್ಲಿ ಅಸಾಧ್ಯವಾದದನ್ನು ಸಾಧಿಸಿದ್ದಾರೆ. ಬಿಸಿಸಿಐ ಪರವಾಗಿ ಮತ್ತು 100 ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರನಾಗಿ, ಟೀಮ್ ಇಂಡಿಯಾದ ಮಾಜಿ ನಾಯಕನಾಗಿ ವಿರಾಟ್ ಕೊಹ್ಲಿಗೆ ಶುಭ ಹಾರೈಸುತ್ತೇನೆ. ಅವರು ಇನ್ನಷ್ಟು ಸಾಧನೆಗಳನ್ನು ಮಾಡಲಿ. ನೂರನೇ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಳ್ಳಲಿ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.


    ವಿರಾಟ್​ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿ- ಸಚಿನ್

    2007- 08ರಲ್ಲಿ ಮಲೇಷ್ಯಾದಲ್ಲಿ ಅಂಡರ್​-19 ಕ್ರಿಕೆಟ್​ನಲ್ಲಿ ನೀವು ತೋರಿದ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾದಲ್ಲಿದ್ದ ನಮಗೆ ತಿಳಿಯಿತು. 'ಇವನು ಒಬ್ಬ ಗಮನಾರ್ಹ ಆಟಗಾರ, ಅದ್ಭುತವಾಗಿ ಆಡುತ್ತಾನೆ' ಎಂದು ನಮ್ಮ ಕೆಲ ಆಟಗಾರರು ನಿಮ್ಮ ಬಗ್ಗೆ ಚರ್ಚಿಸಿದರು. ಅದರ ಬಳಿಕ ನಾನು- ವಿರಾಟ್​ ಭಾರತಕ್ಕಾಗಿ ಆಡಿದ್ದೇವೆ. ಅವರು ಕ್ರಿಕೆಟ್​ ಮೈದಾನದಲ್ಲಿ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು... ವಿರಾಟ್​ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿ' ಎಂದು ಸಚಿನ್ ಬಣ್ಣಿಸಿದ್ದಾರೆ.



    ಕೊಹ್ಲಿ ಬಗ್ಗೆ ಹೆಮ್ಮೆ ಪಡಬೇಕು -ದ್ರಾವಿಡ್

    ವಿರಾಟ್ ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಇಳಿದಾಗ ನಾನು ಅವರ ಜತೆಗಾರನಾಗಿದ್ದೆ. ಕಳೆದ 10 ವರ್ಷಗಳಲ್ಲಿ ಅವರ ಬೆಳವಣಿಗೆ ನಿಜಕ್ಕೂ ಅಮೋಘವಾದುದು. 100ನೇ ಟೆಸ್ಟ್‌ವರೆಗೂ 50ಕ್ಕೂ ಅಧಿಕ ಬ್ಯಾಟಿಂಗ್ ಸರಾಸರಿ ಕಾಯ್ದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಸುಲಭವಾದುದಲ್ಲ. ಅದರಲ್ಲೂ 100 ಟೆಸ್ಟ್ ಆಡುವುದು ಅಪೂರ್ವ ಸಾಧನೆ. ಈ ಬಗ್ಗೆ ಕೊಹ್ಲಿ ಹೆಮ್ಮೆ ಪಡಬೇಕು ಎಂದು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹೇಳಿಕೊಂಡಿದ್ದಾರೆ.



    ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ಸ್ಫೂರ್ತಿ -VVS ಲಕ್ಷ್ಮಣ್

    100 ಟೆಸ್ಟ್ ಆಡುವುದು ಯಾವುದೇ ಕ್ರಿಕೆಟಿಗನಿಗೆಹೆಮ್ಮೆಯ ಕ್ಷಣ. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೀವು ಪದಾರ್ಪಣೆ ಮಾಡಿದ ಪಂದ್ಯ ಇನ್ನೂ ನೆನಪಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲಡೆಯ ಕ್ರಿಕೆಟಿಗರಿಗೆ ನೀವು ಸ್ಫೂರ್ತಿಯಾಗಿದ್ದೀರಿ. ಯುವ ಜನತೆ ಟಿ20 ಕ್ರಿಕೆಟ್‌ನತ್ತ ಒಲವು ತೋರಿದಾಗ ನೀವು ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅದರ ಮಹತ್ವವನ್ನು ಸಾರಿದಿರಿ. 100ನೇ ಟೆಸ್ಟ್‌ನಲ್ಲಿ ನಿಮ್ಮಿಂದ ಶತಕದ ನಿರೀಕ್ಷೆಯಲ್ಲಿರುವೆ. ಭಾರತ ಯಾವ ಆಟಗಾರರೂ ಈ ಸಾಧನೆ ಮಾಡಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ



    ವಿರಾಟ್ ಕೊಹ್ಲಿ ಒಬ್ಬ ದಂತಕಥೆ

    ಇನ್ನು ಟೀಮ್ ಇಂಡಿಯಾ ಆಟಗಾರ ಇಶಾಂತ್ ಶರ್ಮಾ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯಕ್ಕೆ ಶುಭಕೋರಿದ್ದು ಕೊಹ್ಲಿ ಅವರನ್ನು ಒಬ್ಬ ದಂತಕಥೆ ಎಂದು ಬಣ್ಣಿಸಿದ್ದಾರೆ. ವಿರಾಟ್ 17 ವರ್ಷದವನಾಗಿದ್ದಾಗಿನಿಂದಲೂ ನಾನು ಅವನನ್ನು ನೋಡಿದ್ದೇನೆ.ಇಲ್ಲಿಯವರೆಗೂ ವಿರಾಟ್ ಅದ್ಭುತವಾಗಿ ಆಟ ಆಡಿದ್ದೇನೆ. ಮುಂದಿನ ವರ್ಷಗಳಲ್ಲಿ ಕೊಹ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

    100 ಟೆಸ್ಟ್ ಆಡಿದ ದೆಹಲಿಯ 3ನೇ ಆಟಗಾರ ಕೊಹ್ಲಿ

    ನಾನು ರಣಜಿಯಲ್ಲಿ ದೆಹಲಿಯ ನಾಯಕನಾಗಿದ್ದಾಗ ಅವರು ನನ್ನ ಅಡಿಯಲ್ಲಿ ಆಡುತ್ತಿದ್ದಾಗಲೂ ನಾನು ಅವರನ್ನು ಹತ್ತಿರದಿಂದ ನೋಡಿದೆ ಮತ್ತು ಅವರು ಆಟಗಾರನಾಗಿ ಮತ್ತು ನಾಯಕನಾಗಿ ದೇಶಕ್ಕಾಗಿ ಅದ್ಭುತವಾದ ಸಾಧನೆ ಮಾಡಿದ್ದಾರೆ, ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದಾರೆ. ಇನ್ನು ಖುಷಿಯಾದ ವಿಚಾರ ಅಂದ್ರೆ ಇಶಾಂತ್ ಶರ್ಮಾ ಹಾಗೂ ನನ್ನನ್ನು ಹೊರತುಪಡಿಸಿದರೆ ಮೂರನೇ ಟೆಸ್ಟ್ ಆಡಿದ ದೆಹಲಿಯ ಆಟಗಾರ ಕೊಹ್ಲಿ ಎಂದು ಹೇಳಿಕೊಳ್ಳುವುದು ಹೆಮ್ಮೆ ಆಗುತ್ತದೆ ಅಂತ ವೀರೇಂದ್ರ ಸೆಹವಾಗ್ ಹೇಳಿಕೊಂಡಿದ್ದಾರೆ



    ಇದನ್ನೂ ಓದಿ: ICC Women World Cupಗೆ ಕ್ಷಣಗಣನೆ: ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೆಣಸಲಿರುವ ಭಾರತ

    ವಿರಾಟ್ 100ನೇ ಟೆಸ್ಟ್ ಪಂದ್ಯ ಅವರ ಕಠಿಣ ಶ್ರಮಕ್ಕೆ ಸಾಕ್ಷಿ

    ಇನ್ನು ಪ್ರತಿಯೊಬ್ಬ ಆಟಗಾರನೂ 100 ಟೆಸ್ಟ್ ಪಂದ್ಯ ಆಡುವುದು ವಿಶೇಷ ಸಾಧನೆ.ಇದು ವಿರಾಟ್ ಕೊಹ್ಲಿ ಅವರ ಕಠಿಣ ಪರಿಶ್ರಮದ ಫಲ. ವಿರಾಟ್ ಅವರ ನೇತೃತ್ವದಲ್ಲಿ ಭಾರತ ತಂಡ ಉತ್ತಮವಾದದ್ದನ್ನು ಸಾಧಿಸಿದೆ. ಭಾರತ ತಂಡದ ಯಶಸ್ಸಿಗೆ ವಿರಾಟ್ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.

    ಅವರ ಹೆಸರಿನಲ್ಲಿ ಇರುವ ದಾಖಲೆಗಳಿಗೆ ಟೆಸ್ಟ್ ಪಂದ್ಯ ಮತ್ತೊಂದು ಗರಿಯಾಗಿದೆ ಎಂದು ಬೂಮ್ರಾ ಹೇಳಿಕೊಂಡಿದ್ದಾರೆ
    Published by:ranjumbkgowda1 ranjumbkgowda1
    First published: