ಭಾರತೀಯ ಆಟಗಾರರಿಗೆ ಇನ್ಮುಂದೆ ನಾಡಾದಿಂದ ಡೋಪಿಂಗ್ ಪರೀಕ್ಷೆ; ಸಮ್ಮತಿ ಸೂಚಿಸಿದ ಬಿಸಿಸಿಐ

ಭಾರತೀಯ ಕ್ರಿಕೆಟಿಗರಿಗೆ ಉದ್ದೀಪನ ನಿಗ್ರಹ ನಿಯಮದಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದ್ದು, ಬಿಸಿಸಿಐ ನಾಡಾ ನಿಯಮಾವಳಿಗಳನ್ನು ಒಪ್ಪಿಕೊಂಡಿದೆ.

Vinay Bhat | news18
Updated:August 9, 2019, 4:09 PM IST
ಭಾರತೀಯ ಆಟಗಾರರಿಗೆ ಇನ್ಮುಂದೆ ನಾಡಾದಿಂದ ಡೋಪಿಂಗ್ ಪರೀಕ್ಷೆ; ಸಮ್ಮತಿ ಸೂಚಿಸಿದ ಬಿಸಿಸಿಐ
ಟೀಂ ಇಂಡಿಯಾ ಆಟಗಾರರು
Vinay Bhat | news18
Updated: August 9, 2019, 4:09 PM IST
ಬೆಂಗಳೂರು (ಆ. 09): ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ನಿಯಮಾವಳಿಗಳನ್ನು ದೇಶದ ಎಲ್ಲ ಕ್ರೀಡಾಪಟುಗಳು ಪಾಲಿಸಲೇಬೇಕು ಎಂಬ ಕಾನೂನಿಗೆ ಬಿಸಿಸಿಐ ಸಮ್ಮತಿ ಸೂಚಿಸಿದೆ. ಭಾರತೀಯ ಕ್ರಿಕೆಟ್ ಸಂಸ್ಥೆ ಇನ್ನುಮುಂದೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ ನಾಡಾ (ಎನ್​ಎಡಿಎ) ಅಡಿಯಲ್ಲಿ ಬರಲಿದೆ ಎಂದು ಕ್ರೀಡಾ ಕಾರ್ಯದರ್ಶಿ ರಾಧೆಶ್ಯಾಮ್ ಜುಲಾನಿಯ ಹೇಳಿದ್ದಾರೆ.

ಬಿಸಿಸಿಐ ಮುಖ್ಯಸ್ಥ ರಾಹುಲ್ ಜೋಹ್ರಿಯನ್ನು ಭೇಟಿ ಮಾಡಿರುವ ಜುಲಾನಿಯ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದು, ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ ಬಿಸಿಸಿಐ ಜೊತೆ ಕೈಜೋಡಿಸಿದೆ ಎಂದು ತಿಳಿಸಿದ್ದಾರೆ.

Prithvi Shaw: ಗಂಭೀರತೆ ಪಡೆದುಕೊಂಡ ಉದ್ದೀಪನ ಮದ್ದು ಸೇವನೆ ಪ್ರಕರಣ; ಪೃಥ್ವಿ ಶಾ ಕ್ರಿಕೆಟ್ ಬದುಕು ನುಚ್ಚುನೂರು?

ಭಾರತೀಯ ಕ್ರಿಕೆಟ್​ಗೆ ಏನೆಲ್ಲಾ ಸೌಲಭ್ಯ ಬೇಕೊ ಅದೆಲ್ಲವನ್ನೂ ನೀಡಲು ನಾವು ಸಿದ್ಧವಿದ್ದೇವೆ. ಆದರೆ, ಇದಕ್ಕೆ ಒಂದಿಷ್ಟು ಶುಲ್ಕ ನೀಡಬೇಕಾಗುತ್ತದೆ ಎಂದಿದೆ. ಈ ಮೂಲಕ ಭಾರತೀಯ ಕ್ರಿಕೆಟಿಗರಿಗೆ ಉದ್ದೀಪನ ನಿಗ್ರಹ ನಿಯಮದಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದ್ದು, ಬಿಸಿಸಿಐ ನಾಡಾ ನಿಯಮಾವಳಿಗಳನ್ನು ಒಪ್ಪಿಕೊಂಡಿದೆ.

ಈ ಹಿಂದೆ ಬಿಸಿಸಿಐ ‘ನಾವು ನಮ್ಮದೇ ಆದ ಭ್ರಷ್ಟಾಚಾರ ಹಾಗೂ ಉದ್ದೀಪನ ನಿಗ್ರಹ ಘಟಕವನ್ನು ಹೊಂದಿದ್ದೇವೆ. ಐಸಿಸಿಯ ನಿಯಮಾವಳಿ ಅನುಸಾರ ಆಟಗಾರರ ಉದ್ದೀಪನ ಪರೀಕ್ಷೆ ನಡೆಯುತ್ತದೆ. ನಾಡಾದ ಅಧಿಕಾರಿಗಳು ಕ್ರಿಕೆಟಿಗರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡುವುದಿಲ್ಲ’ ಎಂದು ಹೇಳಿತ್ತು. ಆದರೆ, ಬಿಸಿಸಿಐ ಸದ್ಯ ತನ್ನ ನಿರ್ಧಾರವನ್ನು ಬದಲಿಸಿ ನಾಡಾಗೆ ಪರೀಕ್ಷೆಯ ಪೂರ್ಣ ಜವಾಬ್ದಾರಿ ನೀಡಿದೆ.

First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...