ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ವಿರುದ್ಧ ತಿರುಗಿ ಬಿದ್ದ ಭಾರತೀಯ ಕ್ರಿಕೆಟಿಗರು!

ಇಮ್ರಾನ್​ ಖಾನ್​ ಓರ್ವ ಮಾಜಿ ಕ್ರಿಕೆಟ್​ ಆಟಗಾರ. ಅವರು ಬೇರೆಯವರಿಗೆ ಮಾದರಿ, ಸ್ಫೂರ್ತಿ ಆಗುವುದು ಬಿಟ್ಟು ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ವಿಶ್ವದ ಅನೇಕ ರಾಷ್ಟ್ರಗಳೂ ವಿರೋಧ ವ್ಯಕ್ತಪಡಿಸುತ್ತಿವೆ.

ಮೊಹಮ್ಮದ್ ಶಮಿ, ಇಮ್ರಾನ್ ಖಾನ್ ಹಾಗೂ ಹರ್ಭಜನ್ ಸಿಂಗ್

ಮೊಹಮ್ಮದ್ ಶಮಿ, ಇಮ್ರಾನ್ ಖಾನ್ ಹಾಗೂ ಹರ್ಭಜನ್ ಸಿಂಗ್

  • Share this:
ಬೆಂಗಳೂರು (ಅ. 03): ಇತ್ತೀಚೆಗಷ್ಟೇ ನ್ಯೂಯಾರ್ಕ್ ನಗರದಲ್ಲಿ ನಡೆದ 74ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಯುದ್ಧೋನ್ಮಾದ ತೋರಿದ್ದರು. ಇದಕ್ಕೆ ಭಾರತ ಕೂಡ ತಿರುಗೇಟು ನೀಡಿತ್ತು. ಈಗ ಪಾಕ್​ ಪ್ರಧಾನಿ ವಿರುದ್ಧ ಭಾರತದ ಕ್ರಿಕೆಟ್​ ಆಟಗಾರರು ಅಸಮಾಧನ ಹೊರಹಾಕಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಇಮ್ರಾನ್​ ಖಾನ್​ ಆರ್​ಎಸ್​ಎಸ್​​ ಮತ್ತು ಮೋದಿ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದರು. "ಭಾರತಕ್ಕಿಂತ ಏಳು ಪಟ್ಟು ಸಣ್ಣದಾಗಿರುವ ಪಾಕ್ ಎದುರು ಭಾರತ ಯುದ್ಧ ಮತ್ತು ಶರಣಾಗತಿಯ ಆಯ್ಕೆ ಇಟ್ಟರೆ ನಾವು ಯುದ್ಧವನ್ನೇ ಆರಿಸುತ್ತೇವೆ. ಇದರ ಪರಿಣಾಮವನ್ನು ಇಡಿ ವಿಶ್ವವೇ ಎದುರಿಸಬೇಕು” ಎಂದು ಎಚ್ಚರಿಕೆ ನೀಡಿದ್ದರು.

ಇದರಿಂದ ಗರಂ ಆಗಿರುವ ಟೀಂ ಇಂಡಿಯಾ ಆಟಗಾರರು ಒಬ್ಬರ ಹಿಂದೆ ಒಬ್ಬರಂತೆ ಇಮ್ರಾನ್ ಖಾನ್ ವಿರುದ್ಧ ಟ್ವೀಟ್ ಸಮರ ನಡೆಸುತ್ತಿದ್ದಾರೆ.

Pro Kabaddi 2019: ಪ್ರೋ ಕಬಡ್ಡಿ ಲೀಗ್​ನಲ್ಲಿ ಪವನ್ ದಾಖಲೆ; ಪ್ಲೇ ಆಫ್​​ಗೆ ಲಗ್ಗೆಯಿಟ್ಟಿ ಬೆಂಗಳೂರು

ಅಕ್ಟೋಬರ್ 2 ಗಾಂಧಿ ಜಯಂತಿ ಪ್ರಯುಕ್ತ ಟ್ವೀಟ್ ಮಾಡಿರುವ ವೇಗಿ ಮೊಹಮ್ಮದ್ ಶಮಿ, "ಮಹಾತ್ಮ ಗಾಂಧಿ ತನ್ನ ಇಡೀ ಜೀವನವನ್ನು ಪ್ರೀತಿ, ಸಾಮರಸ್ಯ ಮತ್ತು ಶಾಂತಿಯ ಸಂದೇಶ ರವಾನಿಸಲು ಮುಡಿಪಿಟ್ಟರು. ಆದರೆ, ಇಮ್ರಾನ್ ಖಾನ್ ಪ್ರಮುಖ ವೇದಿಕೆಯಲ್ಲೇ ಬೆದರಿಕೆ ಹಾಕಿ ದ್ವೇಷದ ಮಾತನಾಡುತ್ತಾರೆ. ಪಾಕಿಸ್ತಾನಕ್ಕೆ ಅಭಿವೃದ್ಧಿ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ಮಾತನಾಡುವ ನಾಯಕ ಬೇಕು, ಅದುಬಿಟ್ಟು ಯುದ್ಧ ಮತ್ತು ಭಯೋತ್ಪಾದನೆಯನ್ನು ಆಶ್ರಯಿಸುವಂತವರಲ್ಲ" ಎಂದು ಹೇಳಿದ್ದಾರೆ.

 ಇನ್ನು ಹರ್ಭಜನ್ ಸಿಂಗ್ ಹಾಗೂ ಇರ್ಫಾನ್ ಪಠಾಣ್ ಕೂಡ ಖಾನ್ ಮೇಲೆ ಹರಿಹಾಯ್ದಿದ್ದು, "ಇಮ್ರಾನ್ ಖಾನ್ ಭಾಷಣದಲ್ಲಿ ಭಾರತಕ್ಕೆ ಪರಮಾಣು ಯುದ್ಧದ ಸೂಚನೆಗಳು ಇದ್ದವು. ಒಬ್ಬ ಕ್ರೀಡಾಪಟುವಾಗಿ ಅವರು ಇಂತಹ ಮಾತುಗಳನ್ನು ಆಡಬಾರದು. ಅವರ ಮಾತು ಉಭಯ ರಾಷ್ಟ್ರಗಳ ನಡುವೆ ದ್ವೇಷವನ್ನು ಹೆಚ್ಚಿಸುತ್ತಿದೆ. ಕ್ರೀಡಾಪಟುಗಳು ರೋಲ್ ಮಾಡೆಲ್​ಗಳಾಗಿರಬೇಕು, ಶಾಂತಿಯನ್ನು ಉತ್ತೇಜಿಸಬೇಕೆಂದು" ಹೇಳಿದ್ದಾರೆ.

 

ಮಾಜಿ ಆಟಗಾರ ಮೊಹಮ್ಮದ್ ಅಜರುದ್ದಿನ್ ಕೂಡ, "ಪಾಕಿಸ್ತಾನ ಪ್ರಧಾನಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ ಮಾತನ್ನು ಒಬ್ಬ ಕ್ರೀಡಾಪಟುವಿನಿಂದ ನಿರೀಕ್ಷೆ ಮಾಡಿರಲಿಲ್ಲ. ಖಾನ್ ಪಾಕಿಸ್ತಾನದಲ್ಲಿ ಬದಲಾವಣೆ ತರುತ್ತಾರೆ ಮತ್ತು ಭಯೋತ್ಪಾದಕರನ್ನು ಮುಕ್ತಗೊಳಿಸುತ್ತಾರೆಂದು ಭಾವಿಸಿದ್ದೆ" ಎಂದು ಅಜರುದ್ದಿನ್ ಟ್ವೀಟ್ ಮಾಡಿದ್ದಾರೆ.

 ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭಿರ್ ಕೂಡ ಖಾನ್ ಮಾತಿಗೆ ಕೆಂಡಾಮಂಡಲರಾಗಿದ್ದಾರೆ.

"ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಅವರ ಮಾತುಗಳು ಭಯೋತ್ಪಾದಕರಿಗೆ ಸ್ಪೂರ್ತಿ ನೀಡುವಂತಿತ್ತು. ಕ್ರಿಕೆಟಿಗ-ರಾಜಕಾರಣಿ, ಕ್ರೀಡಾಪಟುಗಳು ಉತ್ತಮ ನಡವಳಿಕೆ ಮತ್ತು ಪಾತ್ರದ ಶಕ್ತಿಯ ಮಾದರಿಗಳಾಗಿರಬೇಕು. ಸ್ವತಃ ಮಾಜಿ ಕ್ರಿಕೆಟಿಗನಾಗಿದ್ದ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶಪ್ರಾಯ" ಎಂದು ಕಿಡಿಕಾರಿದ್ದಾರೆ.

 ಇಮ್ರಾನ್​ ಖಾನ್​ ಓರ್ವ ಮಾಜಿ ಕ್ರಿಕೆಟ್​ ಆಟಗಾರ. ಅವರು ಬೇರೆಯವರಿಗೆ ಮಾದರಿ, ಸ್ಫೂರ್ತಿ ಆಗುವುದು ಬಿಟ್ಟು ಭಾರತದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ವಿಶ್ವದ ಅನೇಕ ರಾಷ್ಟ್ರಗಳೂ ವಿರೋಧ ವ್ಯಕ್ತಪಡಿಸುತ್ತಿವೆ.
First published: