Yuvraj Singh: ಅಂತಾರಾಷ್ಟ್ರೀಯ ಕ್ರಿಕೆಟ್​ ಜಗತ್ತಿಗೆ ಯುವರಾಜ್ ಸಿಂಗ್ ಗುಡ್ ಬೈ?; ಈ ನಿರ್ಧಾರಕ್ಕೂ ಇದೆ ಕಾರಣ

ಯುವರಾಜ್​ ಸಿಂಗ್​ ವಿದೇಶದಲ್ಲಿ ನಡೆಯುವ ಟಿ20 ಲೀಗ್​ಗಳಲ್ಲಿ ಪಾಲ್ಗೊಳ್ಳುವ ಆಲೋಚನೆಯಲ್ಲಿದ್ದಾರೆ. ಅಲ್ಲಿ ಕ್ರಿಕೆಟ್​ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ.

Rajesh Duggumane | news18
Updated:May 20, 2019, 12:13 PM IST
Yuvraj Singh: ಅಂತಾರಾಷ್ಟ್ರೀಯ ಕ್ರಿಕೆಟ್​ ಜಗತ್ತಿಗೆ ಯುವರಾಜ್ ಸಿಂಗ್ ಗುಡ್ ಬೈ?; ಈ ನಿರ್ಧಾರಕ್ಕೂ ಇದೆ ಕಾರಣ
ಯುವರಾಜ್ ಸಿಂಗ್
Rajesh Duggumane | news18
Updated: May 20, 2019, 12:13 PM IST
ಕ್ರಿಕೆಟ್​ ಜಗತ್ತು ಕಂಡ ಅತ್ಯುತ್ತಮ ಆಟಗಾರರ ಪೈಕಿ ಯುವರಾಜ್​ ಸಿಂಗ್​ ಕೂಡ ಒಬ್ಬರು. ಕ್ಯಾನ್ಸರ್​ನಿಂದ ಗುಣಮುಖರಾದ ಅವರು ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರಿಗೆ ಈ ಅವಕಾಶ ಸಿಗಲೇ ಇಲ್ಲ. ಹಾಗಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್​ ಜಗತ್ತಿಗೆ ಯುವರಾಜ್​ ಸಿಂಗ್​ ಗುಡ್​ಬೈ ಹೇಳಲು ಸಿದ್ಧರಾಗಿದ್ದಾರೆ.

ಹೌದು, ಯುವರಾಜ್​ ಸಿಂಗ್​ ವಿದೇಶದಲ್ಲಿ ನಡೆಯುವ ಟಿ20 ಲೀಗ್​ಗಳಲ್ಲಿ ಪಾಲ್ಗೊಳ್ಳುವ ಆಲೋಚನೆಯಲ್ಲಿದ್ದಾರೆ. ಅಲ್ಲಿ ಸಿಗುವ ಅವಕಾಶ ಬಳಸಿಕೊಂಡು ತಮ್ಮ ವೃತ್ತಿ​ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ಅವರ ಮುಂದಿನ ನಡೆ ನಿರ್ಧಾರವಾಗಲಿದೆ ಎಂಬುದು ಮೂಲಗಳ ಮಾಹಿತಿ.

ಯುವರಾಜ್​ಸಿಂಗ್​ ಆಲ್​ರೌಂಡರ್​ ಆಗಿ ಭಾರತದ ತಂಡದಲ್ಲಿ ಮಿಂಚಿದ್ದರು. 2007ರ ಟಿ20 ವಿಶ್ವಕಪ್​ ಹಾಗೂ 2011ರ ವಿಶ್ವಕಪ್​ನಲ್ಲಿ ಆಡಿದ್ದ ಹಿರಿಮೆ ಯುವಿಯದ್ದು. ಆದರೆ, ಯುವರಾಜ್​ಸಿಂಗ್​ಗೆ ಕ್ಯಾನ್ಸರ್​ ಕಾಡಿತ್ತು. ವಿದೇಶದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದಿದ್ದರು. 2017ರಲ್ಲಿ ಇವರು ಕೊನೆಯದಾಗಿ ಭಾರತದ ಪರ ಬ್ಯಾಟ್​ ಬೀಸಿದ್ದರು. ವಿದೇಶದಲ್ಲಿ ನಡೆಯುವ ಟಿ20 ಪಂದ್ಯಕ್ಕೆ ಭಾರತದಿಂದ ಇರ್ಫಾನ್​ ಪಠಾಣ್​ ಮೊದಲ ಬಾರಿಗೆ ಕಾಲಿಟ್ಟಿದ್ದರು. ಆದರೆ, ಇದಕ್ಕೆ ಅವರು ಬಿಸಿಸಿಐನಿಂದ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ.



(ಕೃಪೆ: All Cricket Videos )

37 ವರ್ಷದ ಯುವರಾಜ್​ ಸಿಂಗ್​ಗೆ ಫಿಟ್ನೆಸ್​ ಕಾಪಾಡಿಕೊಳ್ಳುವುದು ಕೂಡಾ ಬಹಳ ಕಷ್ಟವಾಗುತ್ತಿದೆ. ಈ ಹಿಂದಿನಷ್ಟು ಅವರು ವೇಗವಾಗಿಲ್ಲ. ಐಪಿಎಲ್​ ಪಂದ್ಯಗಳಲ್ಲಿ ಫೀಲ್ಡಿಂಗ್​ನಲ್ಲೂ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿಯೇ ಅವರು ಇತ್ತೀಚೆಗೆ ಐಪಿಎಲ್​ನಲ್ಲಿ ಥರ್ಡ್​ ಮ್ಯಾನ್ ಅಥವಾ ಮಿಡ್​ ವಿಕೆಟ್​ನಲ್ಲಿ ನಿಲ್ಲುತ್ತಿದ್ದಾರೆ.

First published:May 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...