Indian Cricketer: ಎಲ್ಲಾ ಮಾದರಿಯ ಕ್ರಿಕೆಟ್​​ಗೆ ಕನ್ನಡತಿ ವನಿತಾ ನಿವೃತ್ತಿ ಘೋಷಣೆ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್, ಕನ್ನಡತಿ ವಿ.ಆರ್. ವನಿತಾ ಸೋಮವಾರ (ಫೆ.21) ರಂದು ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಕ್ರಿಕೆಟರ್ ವಿ ಆರ್ ವನಿತಾ

ಕ್ರಿಕೆಟರ್ ವಿ ಆರ್ ವನಿತಾ

 • Share this:
  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ( Indian women's cricket team Batter) , ಕನ್ನಡತಿ ವಿ.ಆರ್. ವನಿತಾ (VR Vanitha) ಸೋಮವಾರ (ಫೆ.21)ರಂದು ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ವಿ.ಆರ್.ವನಿತಾ ತಮ್ಮ 31 ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ (Retirement) ಘೋಷಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ (Twitter Post) ಹಾಕಿದ್ದಾರೆ. ಟ್ವಿಟ್ಟರ್ ಮೂಲಕ ತಮ್ಮ ನಿವೃತ್ತಿ ಸುದ್ದಿಯನ್ನು ತಿಳಿಸಿದ್ದಾರೆ. ಇನ್ನು ತಮ್ಮ ವಿದಾಯ ಪತ್ರದಲ್ಲಿ ವನಿತಾ ಕುಟುಂಬಸ್ಥರು, ಸ್ನೇಹಿತರು, ಕೋಚ್​ಗಳು ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್​ ಹಾಗೂ ಭಾರತದ ಇಬ್ಬರು ದಿಗ್ಗಜ ಆಟಗಾರ್ತಿಯರಾದ ಜೂಲನ್ ಗೋಸ್ವಾಮಿ ಮತ್ತು ಮಿಥಾಲಿ ರಾಜ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

  ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್

  ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್, ಕನ್ನಡತಿ ವಿ.ಆರ್. ವನಿತಾ ಭಾರತ ತಂಡದ ಆರಂಭಿಕ ಬ್ಯಾಟರ್ ಆಗಿ ಆಡಿದ್ದರು. ಈಗ ತಮ್ಮ19 ವರ್ಷದ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾಗಿ, ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. 2014 ರಿಂದ 2016 ರವರೆಗೆ ಭಾರತ ತಂಡದ ಪರ ಆರು ODI ಮತ್ತು 16 T20 ಪಂದ್ಯಗಳನ್ನು ಕನ್ನಡತಿ ವನಿತಾ ಆಡಿದ್ದಾರೆ.

  “ಕ್ರಿಕೆಟ್ ಪ್ರೀತಿ, ಇಂದಿಗೂ ಹಾಗೇ ಉಳಿದಿದೆ”

  “ನಾನು ಕ್ರಿಕೆಟ್ ಗೆ ಪದಾರ್ಪಣೆ ಮಾಡಿದಾಗ ಕ್ರೀಡೆಯನ್ನು ಇಷ್ಟಪಡುವ ಚಿಕ್ಕ ಹುಡುಗಿಯಾಗಿದ್ದೆ. ನಾನು 19 ವರ್ಷಗಳ ಹಿಂದೆ ಆಡಲು ಪ್ರಾರಂಭಿಸಿದಾಗ ನನ್ನಲ್ಲಿ ಇದ್ದ ಕ್ರಿಕೆಟ್ ಪ್ರೀತಿ, ಇಂದಿಗೂ ಹಾಗೇ ಉಳಿದಿದೆ. ಆದರೆ ಅದರ ದಿಕ್ಕು ಬದಲಾಗಿದೆ. ನನ್ನ ಮನಸ್ಸು ಆಟವಾಡಲು ಹೇಳುತ್ತದೆ. ಆದರೆ ನನ್ನ ದೇಹವು ಆಟವನ್ನು ನಿಲ್ಲಿಸಲು ಹೇಳುತ್ತದೆ. ಹೀಗಾಗಿ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುತ್ತಿದ್ದೇನೆ.

  ಇದನ್ನೂ ಓದಿ: ಸೂರ್ಯಕುಮಾರ್ ಭರ್ಜರಿ ಆಟದಿಂದ T-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಟೀಮ್ ಇಂಡಿಯಾ

  ಇದು ಹೋರಾಟ, ಕಲಿಕೆ ಮತ್ತು ವೈಯಕ್ತಿಕ ಸಾಧನೆಗಳ ಸಮಯವಾಗಿದೆ. ನನಗೆ ಕೆಲವು ವಿಷಾದವಿದೆ ಆದರೂ ಸಹ ವಿಶೇಷವಾಗಿ ಭಾರತವನ್ನು ಪ್ರತಿನಿಧಿಸುವ ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇದು ಹೊಸ ಸವಾಲಿನ ಆರಂಭವೇ ಹೊರತು ಅಂತ್ಯವಲ್ಲ” ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

  ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಿದ್ದ ವನಿತಾ

  ಇನ್ನು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ವಿ.ಆರ್. ವನಿತಾ, ಜನವರಿ 2014 ರಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ನಂತರ ಕೆಲ ಸಮಯದವರೆಗೆ ಭಾರತ ಕ್ರಿಕೆಟ್ ತಂಡದ ಖಾಯಂ ಸದಸ್ಯರಾಗಿದ್ದರು. ತಮ್ಮ ಜೊತೆಗಿದ್ದ ಆಟಗಾರ್ತಿಯರಾದ ಮಿಥಾಲಿ ಮತ್ತು ಜೂಲನ್ ಹಾಗೂ ತಂಡದ ಸಹ ಆಟಗಾರರಿಗೆ ವಿದಾಯ ಹೇಳುತ್ತಿರುವ ಈ ಸಮಯದಲ್ಲಿ ಧನ್ಯವಾದ ಅರ್ಪಿಸಿದ್ದಾರೆ. ಕರ್ನಾಟಕ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆಗಳಿಗೂ ವನಿತಾ ಧನ್ಯವಾದ ಹೇಳಿದ್ದಾರೆ.

  ಇದನ್ನೂ ಓದಿ: ಬೂಮ್​.. ಬೂಮ್​.. ಬುಮ್ರಾ ದಾಖಲೆ ಉಡೀಸ್​ ಮಾಡೋಕೆ ತುದಿಗಾಲಲ್ಲಿ ನಿಂತ ಚಹಾಲ್​!

  ಭಾರತ ತಂಡದ ಆರಂಭಿಕ ಬ್ಯಾಟರ್ ಆಗಿದ್ದ ವನಿತಾ, ತಮ್ಮ ಆರು ಏಕದಿನ ಪಂದ್ಯಗಳಲ್ಲಿ 85 ರನ್ ಕಲೆ ಹಾಕಿದ್ದಾರೆ. 16 ಟಿ20 ಪಂದ್ಯಗಳಲ್ಲಿ 216 ರನ್ ಗಳಿಸಿದ್ದಾರೆ. ದೇಶೀಯ ಸೀಸನ್​ 2021-22ರಲ್ಲಿ ಬೆಂಗಾಲ್ ಮಹಿಳಾ ಸೀನಿಯರ್ ಏಕದಿನ ಟ್ರೋಫಿಯ ಸೆಮಿಫೈನಲ್ ವನಿತಾ ಆಡಿದ್ದರು. ಆ ಸೀಸನ್​ನಲ್ಲಿ ವನಿತಾ ಒಟ್ಟು 225 ರನ್ ಗಳಿಸಿ ಮಿಂಚಿದ್ದರು.ಕರ್ನಾಟಕ ತಂಡದ ಪರ ಡೊಮೆಸ್ಟಿಕ್​ ಕ್ರಿಕೆಟ್​ಗೆ ವನಿತಾ ಪದಾರ್ಪಣೆ ಮಾಡಿದ್ದರು.
  Published by:renukadariyannavar
  First published: