ಲಂಕಾ, ಆಸೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ; ಧವನ್ ಇನ್; ಒಬ್ಬ ಕನ್ನಡಿಗ ಔಟ್

ಜನವರಿ 5ರಿಂದ ಶ್ರೀಲಂಕಾ ವಿರುದ್ಧ 3 ಟಿ20 ಪಂದ್ಯಗಳು ನಡೆಯಲಿವೆ. ಅದರ ಬೆನ್ನಲ್ಲೇ ಜನವರಿ 14ರಿಂದ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳು ನಡೆಯಲಿವೆ.

Vijayasarthy SN | news18
Updated:December 23, 2019, 10:50 PM IST
ಲಂಕಾ, ಆಸೀಸ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ; ಧವನ್ ಇನ್; ಒಬ್ಬ ಕನ್ನಡಿಗ ಔಟ್
ಶಿಖರ್ ಧವನ್
  • News18
  • Last Updated: December 23, 2019, 10:50 PM IST
  • Share this:
ಬೆಂಗಳೂರು(ಡಿ. 23): ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ವಿರುದ್ಧ ಸ್ವದೇಶದಲ್ಲಿ ನಡೆಯುವ ಚುಟುಕು ಕ್ರಿಕೆಟ್ ಪಂದ್ಯಗಳ ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ 2 ಟಿ20 ಪಂದ್ಯಗಳು ಹಾಗೂ ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಪಂದ್ಯಗಳಿಗೆ ಪ್ರತ್ಯೇಕ ತಂಡಗಳನ್ನು ಬಿಸಿಸಿಐ ಘೋಷಿಸಿದೆ. ಶಿಖರ್ ಧವನ್ ಮತ್ತು ಜಸ್​ಪ್ರೀತ್ ಬುಮ್ರಾ ಇಬ್ಬರೂ ಕಂಬ್ಯಾಕ್ ಮಾಡಿದ್ದಾರೆ. ಎರಡೂ ಸರಣಿಗಳಿಗೆ ಇಬ್ಬರೂ ಆಯ್ಕೆಯಾಗಿದ್ಧಾರೆ.

ಶಿಖರ್ ಧವನ್ ತಂಡಕ್ಕೆ ಮರಳುತ್ತಿದ್ದಂತೆಯೇ ಕರ್ನಾಟಕದ ಪ್ರತಿಭೆ ಮಯಂಕ್ ಅಗರ್ವಾಲ್ ಸ್ಥಾನವಂಚಿತರಾಗಿದ್ದಾರೆ. ಆದಾಗ್ಯೂ ಭಾರತದ ಎರಡೂ ತಂಡಗಳಲ್ಲಿ ಇಬ್ಬರು ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆಗೆ ಅವಕಾಶ ಸಿಕ್ಕಿದೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಲ್​ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಎರಡೂ ಸರಣಿಗಳಿಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: IND vs WI: ರೋಹಿತ್ ವಿಶ್ವ ದಾಖಲೆ, ಶಮಿ ವಿಶೇಷ ದಾಖಲೆ; 300+ ಚೇಸಿಂಗ್​ನಲ್ಲಿ ಭಾರತವೇ ನಂ. 1

ವಿರಾಟ್ ಕೊಹ್ಲಿ, ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ರವೀಂದ್ರ ಜಡೇಜಾ, ಯುಜವೇಂದ್ರ ಚಹಲ್, ಕುಲದೀಪ್ ಯಾದವ್, ನವದೀಪ್ ಸೈನಿ, ಜಸ್​ಪ್ರೀತ್ ಬುಮ್ರಾ ಮತ್ತು ಶಾರ್ದೂಲ್ ಠಾಕೂರ್ ಅವರು ಎರಡೂ ಸರಣಿಗಳಿಗೆ ಆಯ್ಕೆಯಾದ ಆಟಗಾರರು.

ಇನ್ನು, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ರೋಹಿತ್ ಶರ್ಮಾ ಮತ್ತು ವೇಗದ ಬೌಲರ್ ಮೊಹಮ್ಮದ್ ಶಮಿ ಅವರಿಗೆ ಲಂಕಾ ವಿರುದ್ಧದ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಪ್ರತಿಭಾನ್ವಿತ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ಲಂಕಾ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿದೆ.

ಜನವರಿ 5ರಿಂದ ಶ್ರೀಲಂಕಾ ವಿರುದ್ಧ 3 ಟಿ20 ಪಂದ್ಯಗಳು ನಡೆಯಲಿವೆ. ಅದರ ಬೆನ್ನಲ್ಲೇ ಜನವರಿ 14ರಿಂದ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳು  ನಡೆಯಲಿವೆ.

ಇದನ್ನೂ ಓದಿ: PAK vs SL: ದಶಕಗಳ ಬಳಿಕ ತನ್ನ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದ ಪಾಕಿಸ್ತಾನ!ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್, ರಿಷಭ್ ಪಂತ್(ವಿಕೆಟ್ ಕೀಪರ್), ಶಿವಮ್ ದುಬೇ, ಯುಜವೇಂದ್ರ ಚಹಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಜಸ್​ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಿಗೆ ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದಾರ್ ಜಾಧವ್, ರಿಷಭ್ ಪಂತ್(ವಿಕೆಟ್ ಕೀಪರ್), ಶಿವಮ್ ದುಬೇ, ರವೀಂದ್ರ ಜಡೇಜಾ, ಯುಜವೇಂದ್ರ ಚಹಲ್, ಕುಲದೀಪ್ ಯಾದವ್, ನವದೀಪ್ ಸೈನಿ, ಜಸ್​ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ