ಧೋನಿ ನಿವೃತ್ತಿ!: ಟೀಂ ಇಂಡಿಯಾ ಮಾಜಿ ನಾಯಕನಿಂದ ಮಹತ್ವದ ಹೇಳಿಕೆ

Mahendra Singh Dhoni: ಟೀಂ ಇಂಡಿಯಾಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವಷ್ಟು ಸಮರ್ಥನಿದ್ದೇನೆಯೇ ಎಂಬುದರ ಬಗ್ಗೆ ಧೋನಿ ಅವರಿಗೆ ಅವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ- ಸೌರವ್ ಗಂಗೂಲಿ

Vinay Bhat | news18-kannada
Updated:August 28, 2019, 11:14 AM IST
ಧೋನಿ ನಿವೃತ್ತಿ!: ಟೀಂ ಇಂಡಿಯಾ ಮಾಜಿ ನಾಯಕನಿಂದ ಮಹತ್ವದ ಹೇಳಿಕೆ
ಎಂ ಎಸ್ ಧೋನಿ
  • Share this:
ಬೆಂಗಳೂರು (ಆ. 28): ಸದ್ಯ ಸಾಗುತ್ತಿರುವ ವೆಸ್ಟ್​ ಇಂಡೀಸ್ ಸರಣಿಯಿಂದ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಮಾಜಿ ನಾಯಕ- ವಿಕೆಟ್ ಕೀಪರ್ ಎಂ ಎಸ್ ಧೋನಿ ಭಾರತೀಯ ಸೇನೆಯೊಂದಿಗೆ ಕಾರ್ಯನಿರ್ವಹಿಸಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.

ವಿಶ್ವಕಪ್​ ಮುಗಿದಾಗಿನಿಂದಲು ಧೋನಿ ನಿವೃತ್ತಿ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ. ವಿಶ್ವಕಪ್ ಬಳಿಕ ಧೋನಿ ಕ್ರಿಕೆಟ್​ನಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಧೋನಿ ಇನ್ನೊಂದಿಷ್ಟು ದಿನ ಮೈದಾನದಲ್ಲಿ ಅಬ್ಬರಿಸುವ ಇಚ್ಚೆ ಹೊಂದಿದ್ದರು. ಸದ್ಯ ಧೋನಿ ನಿವೃತ್ತಿ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ ಮಹತ್ವದ ಮಾತನ್ನಾಡಿದ್ದಾರೆ.

'ಮಹೇಂದ್ರ ಸಿಂಗ್ ಧೋನಿ ಶಾಶ್ವತವಾಗಿ ಕ್ರಿಕೆಟ್ ಆಡುವುದಿಲ್ಲ. ಭಾರತ ಕ್ರಿಕೆಟ್ ತಂಡ ಧೋನಿ ಇಲ್ಲದೇ ಮೈದಾನದಲ್ಲಿ ಕಾದಾಟ ನಡೆಸುವುದನ್ನು ಕಲಿಯಬೇಕು. ಅವರು ದೀರ್ಘ ಕಾಲದವರೆಗೆ ತಂಡದಲ್ಲಿ ಆಡುವುದಿಲ್ಲ ಎನ್ನುವ ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು' ಎಂದು ಗಂಗೂಲಿ ಹೇಳಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಈ ದಿನವನ್ನು ಯಾರಿಂದಲೂ ಎಂದಿಗೂ ಮರೆಯಲು ಅಸಾಧ್ಯ!

India Should Be Prepared for Life Beyond Dhoni: Ganguly
ಸೌರವ್ ಗಂಗೂಲಿ, ಟೀಂ ಇಂಡಿಯಾ ಮಾಜಿ ನಾಯಕ


'38 ವರ್ಷದ ಹೊಸ್ತಿಲಲ್ಲಿರುವ ಧೋನಿ, ನಾನು ಈಗಲೂ ಮ್ಯಾಚ್ ವಿನ್ ಮಾಡುವ, ಫಿನಿಶಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದೇನೆಯೇ ಎಂಬುದನ್ನು ತಮಗೇ ಪ್ರಶ್ನೆ ಮಾಡಿಕೊಳ್ಳಬೇಕು. ಎಲ್ಲ ದಿಗ್ಗಜ ಆಟಗಾರರೂ ಒಂದಲ್ಲ ಒಂದು ದಿನ ತಮ್ಮ ಕ್ರೀಡಾ ವೃತ್ತಿಗೆ ನಿವೃತ್ತಿ ಹೇಳಲೇಬೆಕು'.

2ನೇ ಟೆಸ್ಟ್​​ನಿಂದ ಪಂತ್ ಔಟ್; 3 ವರ್ಷದ ಬಳಿಕ ವಿಂಡೀಸ್ ವಿರುದ್ಧ ಆಡಲಿದ್ದಾರೆ ಈ ಆಟಗಾರ?'ಫುಟ್‌ಬಾಲ್‌ನಲ್ಲಿ ಮರಡೋನಾ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್, ಲಾರಾ, ಬ್ರಾಡ್ಮನ್ ಇನ್ನೂ ಹಲವರು ನಿವೃತ್ತರಾದರು. ಅದೇ ರೀತಿ ಪ್ರತಿಯೊಬ್ಬರೂ ವಿದಾಯ ಹೇಳಲೇಬೇಕಾಗುತ್ತದೆ. ಟೀಂ ಇಂಡಿಯಾಕ್ಕಾಗಿ ಪಂದ್ಯ ಗೆಲ್ಲಿಸಿಕೊಡುವಷ್ಟು ಸಮರ್ಥನಿದ್ದೇನೆಯೇ ಎಂಬುದರ ಬಗ್ಗೆ ಧೋನಿ ಅವರಿಗೆ ಅವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ' ಎಂದು ಗಂಗೂಲಿ ಧೋನಿ ನಿವೃತ್ತಿ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಿ

First published:August 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ