ಭಾರತೀಯ ಕ್ರಿಕೆಟಿಗರು ಆಡುವುದು ದಾಖಲೆಗಾಗಿ, ತಂಡಕ್ಕಾಗಿ ಅಲ್ಲ: ಇಂಝಮಾಮ್ ಉಲ್ ಹಕ್

Inzamam ul Haq: ಪಾಕ್ ಆಟಗಾರರನ್ನು ಹೊಗಳುವ ಸಂದರ್ಭದಲ್ಲಿ ಇಂಝಮಾಮ್ ಭಾರತೀಯ ಕ್ರಿಕೆಟಿಗರ ಬಗ್ಗೆ ಹಗುರವಾದ ಮಾತನ್ನಾಡಿದ್ದಾರೆ. ಅಷ್ಟಕ್ಕೂ ಇಂಝಿ ಆಡಿದ ಮಾತಿನ‌ ಸಾರಾಂಶ ಇಲ್ಲಿದೆ...

news18-kannada
Updated:April 23, 2020, 5:11 PM IST
ಭಾರತೀಯ ಕ್ರಿಕೆಟಿಗರು ಆಡುವುದು ದಾಖಲೆಗಾಗಿ, ತಂಡಕ್ಕಾಗಿ ಅಲ್ಲ: ಇಂಝಮಾಮ್ ಉಲ್ ಹಕ್
ಇಂಝಮಾಮ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿ
  • Share this:
ಕೊರೋನಾ ವೈರಸ್ ಕಾರಣದಿಂದ‌ ಇಡೀ ವಿಶ್ವವೇ ಸ್ತಬ್ಧವಾಗಿರುವ ಸಂದರ್ಭದಲ್ಲಿ ಸೆಲಿಬ್ರಿಟಿಗಳು ಸಾಮಾಜಿಕ‌ ಜಾಲತಾಣಗಳ‌ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಇದಕ್ಕೆ ಕ್ರಿಕೆಟಿಗರೂ ಹೊರತಾಗಿಲ್ಲ.ಈ ನಡುವೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ರಮೀಜ್ ರಾಜ ಹಾಗೂ ಇಂಝಮಾಮ್ ಉಲ್ ಹಕ್ ಯೂಟ್ಯೂಬ್​ನಲ್ಲಿ‌ ಸಂವಾದ ನಡೆಸಿದ್ದು ಸದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.

ಸಂವಾದದ ವೇಳೆ ಟೀಂ ಇಂಡಿಯಾ ಆಟಗಾರರ ಬಗ್ಗೆ ಇಂಝಿ ಕೀಳಾಗಿ ಮಾತನಾಡಿದ್ದಾರೆ. ಪಾಕ್ ಕ್ರಿಕೆಟಿಗರನ್ನು ಹೊಗಳುವ ಸಂದರ್ಭದಲ್ಲಿ ಇಂಝಮಾಮ್ ಭಾರತೀಯ ಕ್ರಿಕೆಟಿಗರ ಬಗ್ಗೆ ಹಗುರವಾದ ಮಾತನ್ನಾಡಿದ್ದಾರೆ. ಅಷ್ಟಕ್ಕೂ ಇಂಝಿ ಆಡಿದ ಮಾತಿನ‌ ಸಾರಾಂಶ ಇಲ್ಲಿದೆ...

(VIDEO): ಕ್ರಿಕೆಟ್ ಇತಿಹಾಸದಲ್ಲಿ ಇಂದು ಮರೆಯಲಾಗದ ದಿನ; ಆರ್​ಸಿಬಿ ಪರ ಇತಿಹಾಸ ರಚಿಸಿದ ಕ್ರಿಸ್ ಗೇಲ್

'ನಾವು ಭಾರತದ ವಿರುದ್ಧ ಪಂದ್ಯ ಆಡಿದಾಗಲೆಲ್ಲ ಭಾರತವೇ ಬಲಿಷ್ಠವಾಗಿತ್ತು ಬರವಣಿಗೇ ಮಾತ್ರ ಸೀಮಿತ. ಅಸಲಿಗೆ ಭಾರತದ ಆಟಗಾರರು ಶತಕ ಬಾರಿಸಿದರೂ ಅವರು ತಂಡಕ್ಕಾಗಿ ಆಡುತ್ತಿರಲಿಲ್ಲ. ಸಂಪೂರ್ಣ ನೂರು ರನ್ ಅವರಿಗಾಗಿ ಕಲೆಹಾಕುತ್ತಿದ್ದರು. ಆದರೆ, ಪಾಕ್ ಆಟಗಾರರ ಶತಕದಲ್ಲಿ 30ರಿಂದ 40 ರನ್ ತಂಡಕ್ಕಾಗಿ ಇರುತ್ತಿತ್ತು. ಇದೇ ಎರಡೂ ತಂಡದ ವ್ಯತ್ಯಾಸ' ಎಂದು ಪಾಕ್ ಮಾಜಿ‌ ನಾಯಕ ಇಂಝಮಾಮ್ ಹೇಳಿದ್ದಾರೆ.

ಸದ್ಯ ಇದೇ ಹೇಳಿಕೆ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ. ಇದಲ್ಲದೆ 'ಭಾರತ-ಪಾಕಿಸ್ತಾನ ನಡುವಿನ ಏಕದಿನ ಪಂದ್ಯಗಳಲ್ಲಿ ಪಾಕ್ ತಂಡವೇ ಉತ್ತಮ‌ ಗೆಲುವಿನ ಸರಾಸರಿ ಹೊಂದಿದೆ. ವಿಶ್ವಕಪ್ ಟೂರ್ನಿಗಳಲ್ಲಿ ಮಾತ್ರ ಪಾಕಿಸ್ತಾನ‌ ತಂಡ ಭಾರತ ವಿರುದ್ಧ ಕೊಂಚ ಹಿಂದೆ ಬಿದ್ದಿದೆ' ಎಂದು ಇಂಝಿ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೆ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ದೇಣಿಗೆ ಸಂಗ್ರಹಕ್ಕಾಗಿ ಖಾಲಿ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ಆಡಿಸಬೇಕು ಎಂದು ಶೋಯಬ್ ಅಖ್ತರ್​ ಹೇಳಿಕೆ ನೀಡಿದ್ದರು. ಇದಕ್ಕೆ ಶಾಹಿದ್ ಅಫ್ರಿದಿ ಕೂಡ ಕೈಜೋಡಿಸಿದ್ದರು.

IPL 2020: ಕೊರೋನಾ ಲಾಕ್​ಡೌನ್​​: ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ ಗಂಗೂಲಿ!ಆದರೆ, ಭಾರತೀಯ ಮಾಜಿ ದಿಗ್ಗಜರು ಅಖ್ತರ್ ಹೇಳಿಕೆಗೆ ಸರಿಯಾಗಿ ತಿರುಗೇಟು ನೀಡಿದ್ದರು. 'ನಮ್ಮಲ್ಲಿ ಸಾಕಷ್ಟು ಆರ್ಥಿಕ ಸಂಪನ್ಮೂಲಗಳಿವೆ. ಬಿಸಿಸಿಐ 51 ಲಕ್ಷ ರೂಪಾಯಿ ಧನ ಸಹಾಯ ಮಾಡಿದೆ. ಅಗತ್ಯವಿದ್ದರೆ ಇನ್ನಷ್ಟು ನೆರವಾಗುವ ಸಾಮರ್ಥ್ಯ ಬಿಸಿಸಿಐಗಿದೆ' ಎಂದು ಕಪಿಲ್ ದೇವ್ ನುಡಿದಿದ್ದರು. ಅಲ್ಲದೆ ಸುನಿಲ್ ಗವಾಸ್ಕರ್, 'ಲಾಹೋರ್​ನಲ್ಲಿ ಹಿಮಪಾತ ಆಗಬಹುದು. ಆದರೆ, ಇಂಡೋ- ಪಾಕ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಯಲು ಸಾಧ್ಯವಿಲ್ಲ' ಎಂದು ಖಡಕ್ ಆಗಿ ಹೇಳಿದ್ದರು.

ವರದಿ: ಕೌಶಿಕ್ ಕೆ. ಎಸ್

First published: April 23, 2020, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading