INDW vs SAW: ಆಫ್ರಿಕಾ ವನಿತೆಯರನ್ನೂ ಕಾಡುತ್ತಿರುವ ಭಾರತ; ಟಿ-20 ಸರಣಿ ವಶ ಪಡಿಸಿಕೊಂಡ ಕೌರ್ ಪಡೆ

ಈ ಗೆಲುವಿನೊಂದಿಗೆ ಭಾರತದ ವನಿತೆಯರು 6 ಪಂದ್ಯಗಳ ಟಿ-20 ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಉಳಿದ ಎರಡು ಪಂದ್ಯ ಮಳೆಯಿಂದ ರದ್ದಾಗಿತ್ತು.

Vinay Bhat | news18-kannada
Updated:October 4, 2019, 11:05 AM IST
INDW vs SAW: ಆಫ್ರಿಕಾ ವನಿತೆಯರನ್ನೂ ಕಾಡುತ್ತಿರುವ ಭಾರತ; ಟಿ-20 ಸರಣಿ ವಶ ಪಡಿಸಿಕೊಂಡ ಕೌರ್ ಪಡೆ
ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ನಲ್ಲಿ ಜನ್ಮದಿನದಂದೇ ನಾಯಕ ಅಥವಾ ನಾಯಕಿಯೊಬ್ಬರು ತನ್ನ ತಂಡವನ್ನು ಮುನ್ನಡೆಸುತ್ತಿರುವ ಮೊದಲ ಆಟಗಾರ್ತಿ ಕೌರ್ ಆಗಿದ್ದಾರೆ.
  • Share this:
ಬೆಂಗಳೂರು (ಅ. 04): ದಕ್ಷಿಣ ಆಫ್ರಿಕಾ ವನಿತೆಯರು ಕೂಡ ಭಾರತ ಪ್ರವಾಸದಲ್ಲಿದ್ದು ಟಿ-20 ಸರಣಿ ಆಡುತ್ತಿದೆ. ನಿನ್ನೆ ನಡೆದ ಐದನೇ ಟಿ-20 ಕದನದಲ್ಲಿ ಭಾರತ ಮಹಿಳೆಯರ ಬೌಲಿಂಗ್ ದಾಳಿಗೆ ತಬ್ಬಿಬ್ಬಾದ ಆಫ್ರಿಕಾ ಸೋಲುಂಡಿದೆ. ಕೌರ್ ಪಡೆ 5 ವಿಕೆಟ್​ಗಳ ಭರ್ಜರಿ ಜಯದೊಂದಿಗೆ ಟಿ-20 ಸರಣಿ ವಶ ಪಡಿಸಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಆಫ್ರಿಕಾಕ್ಕೆ ರಾಧಾ ಯಾದವ್ ಮಾರಕವಾಗಿ ಪರಿಣಮಿಸಿದರು. ಯಾವೊಬ್ಬ ಬ್ಯಾಟ್ಸ್​ಮನ್​ ಸ್ಕೋರ್ 20ರ ಗಡಿ ದಾಟಲು ಬಿಡಲಿಲ್ಲ. ಲೂರ ವೊಲ್ವಾರ್ತ್​​ 17 ರನ್ ಗಳಿಸಿದ್ದೇ ಹೆಚ್ಚು. 20 ಓವರ್​​ಗೆ 8 ವಿಕೆಟ್ ಕಳೆದುಕೊಂಡು ಕೇವಲ 98 ರನ್ ಗಳಿಸಿತಷ್ಟೆ.

ಭಾರತ ಪರ ರಾಧಾ ಯಾದವ್ 3 ವಿಕೆಟ್ ಕಿತ್ತು ಮಿಂಚಿದರೆ, ದೇಪ್ತಿ ಶರ್ಮಾ 2, ಶಿಖಾ ಪಾಂಡೆ, ಪೂನಮ್ ಯಾದವ್ ಹಾಗೂ ಹರ್ಮನ್​ಪ್ರೀತ್ ತಲಾ 1 ವಿಕೆಟ್ ಪಡೆದರು.

ಟೆನ್ನಿಸ್​ ಆಡುವುದನ್ನು ನಿಲ್ಲಿಸದಿದ್ದರೆ, ನಿನಗೆ ಮದುವೆ ಆಗುವುದಿಲ್ಲ ಎಂದಿದ್ದರು; ಸಾನಿಯಾ ಮಿರ್ಜಾ

99 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಭಾರತದ ವನಿತೆಯರು ಆರಂಭದಲ್ಲಿ ಹಿನ್ನಡೆ ಅನುಭವಿಸಿತಾದರು ನಾಯಕಿ ಹರ್ಮನ್​ಪ್ರೀತ್ ಕೌರ್​ರ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಗೆದ್ದು ಬೀಗಿತು. ಶಫಾಲಿ ಶರ್ಮಾ 14, ದೀಪ್ತಿ ಶರ್ಮಾ 16 ರನ್​ ಕಲೆಹಾಕಿದರೆ, ಕೌರ್ 32 ಎಸೆತಗಳಲ್ಲಿ ಅಜೇಯ 34 ರನ್ ಬಾರಿಸಿದರು.

ಈ ಮೂಲಕ ಭಾರತ ಮಹಿಳೆಯರು 17.1 ಓವರ್​ನಲ್ಲೇ 5 ವಿಕೆಟ್ ಕಳೆದುಕೊಂಡು 99 ರನ್ ಕಲೆಹಾಕುವ ಮೂಲಕ 5 ವಿಕೆಟ್​ಗಳ ಜಯ ಸಾಧಿಸಿತು. ಆಫ್ರಿಕಾ ಪರ ಶಭ್ನಿಮ್ ಇಸ್ಮೈಲ್ 2 ವಿಕೆಟ್ ಪಡೆದರೆ, ಅಯಬೊಂಗ ಖಾಖಾ, ನಾಯಕಿ ಸ್ಯೂನ್ ಲುಸ್ ಹಾಗೂ ನಾದಿನ್ ಡಿ ಕ್ಲೆರ್ಕ್​ ತಲಾ 1 ವಿಕೆಟ್ ಪಡೆದರು. ಹರ್ಮನ್ ಪ್ರೀತ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಈ ಗೆಲುವಿನೊಂದಿಗೆ ಭಾರತದ ವನಿತೆಯರು 6 ಪಂದ್ಯಗಳ ಟಿ-20 ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ. ಉಳಿದ ಎರಡು ಪಂದ್ಯ ಮಳೆಯಿಂದ ರದ್ದಾಗಿತ್ತು.
First published:October 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading