ಭಾರತ ವನಿತೆಯರ ವಿರುದ್ಧದ ಏಕದಿನ ಸರಣಿಯನ್ನು 4-1 ಅಂತರದೊಂದಿಗೆ ದಕ್ಷಿಣ ಆಫ್ರಿಕಾ ವನಿತೆಯರು ಗೆದ್ದುಕೊಂಡಿದ್ದಾರೆ. ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲೂ ಟೀಮ್ ಇಂಡಿಯಾ ಮಹಿಳೆಯರು ಮುಗ್ಗರಿಸುವ ಮೂಲಕ ಹೀನಾಯ ಸೋಲಿಗೆ ಸಾಕ್ಷಿಯಾದರು. ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ಮಹಿಳೆಯರ ಪರ ನಾಯಕಿ ಮಿಥಾಲಿ ರಾಜ್ ರಾಜ್ ಅಜೇಯ 79 ರನ್ ಬಾರಿಸಿ ಮಿಂಚಿದರು.
ಇನ್ನು ನಾಯಕಿಗೆ ಸಾಥ್ ನೀಡಿದ ಹರ್ಮನ್ಪ್ರೀತ್ ಕೌರ್ 30 ರನ್ ಬಾರಿಸಿ ಗಾಯಾಳುವಾಗಿ ಹೊರ ನಡೆದರು. ಉಳಿದಂತೆ ಪ್ರಿಯಾ ಪೂನಿಯಾ 18, ಸ್ಮೃತಿ ಮಂಧಾನ 18 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಭಾರತ ತಂಡವು 49.3 ಓವರ್ಗೆ 9 ವಿಕೆಟ್ ಕಳೆದುಕೊಂಡು 188 ರನ್ ಪೇರಿಸಿತು.
ಈ ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ವನಿತಾ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 28 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಮಿಗ್ನಾನ್ ಡು ಪ್ಲೀಜ್ ಹಾಗೂ ಆನ್ ಬಾಷ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮಿಗ್ನಾನ್ ಡು ಪ್ರೀಜ್ 57 ಬಾರಿಸಿದರೆ ಆನ್ ಬಾಷ್ 58 ಕಲೆಹಾಕಿ ತಂಡವನ್ನು ಗೆಲುವಿತ್ತ ಕೊಂಡೊಯ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ