ಕೆರಿಬಿಯನ್ ನೆಲದಲ್ಲಿ ಮಿಂಚುತ್ತಿರುವ ಕೌರ್ ಪಡೆ; 50 ರನ್ ಗಳಿಸಿಯೂ ಗೆದ್ದ ಭಾರತದ ವನಿತೆಯರು!

5 ರನ್​​ಗಳ ರೋಚಕ ಗೆಲುವುನೊಂದಿಗೆ ಭಾರತದ ಮಹಿಳೆಯರು 5 ಪಂದ್ಯಗಳ ಟಿ-20 ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯ ಬಾಕಿ ಉಳಿದಿದ್ದು ನವೆಂಬರ್ 20 ರಂದು ನಡೆಯಲಿದೆ. ಇದರಲ್ಲೂ ಭಾರತ ಗೆದ್ದರೆ ಸರಣಿ ಕ್ಲೀನ್​ಸ್ವೀಪ್ ಮಾಡಲಿದೆ.

Vinay Bhat | news18-kannada
Updated:November 18, 2019, 10:18 AM IST
ಕೆರಿಬಿಯನ್ ನೆಲದಲ್ಲಿ ಮಿಂಚುತ್ತಿರುವ ಕೌರ್ ಪಡೆ; 50 ರನ್ ಗಳಿಸಿಯೂ ಗೆದ್ದ ಭಾರತದ ವನಿತೆಯರು!
ಭಾರತ ಮಹಿಳಾ ಕ್ರಿಕೆಟ್ ತಂಡ
  • Share this:
ಬೆಂಗಳೂರು (ನ. 18): ವೆಸ್ಟ್​ ಇಂಡೀಸ್ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಟಿ-20 ಸರಣಿ ಆಡುತ್ತಿದೆ. ಭರ್ಜರಿ ಪ್ರದರ್ಶನ ತೋರುತ್ತಿರುವ ಕೌರ್ ಪಡೆ ಆಡಿರುವ 4 ಪಂದ್ಯಗಳ ಪೈಕಿ ನಾಲ್ಕರಲ್ಲೂ ಗೆದ್ದು ಬೀಗಿದೆ. ನಿನ್ನೆ ನಡೆದ ಪಂದ್ಯದಲ್ಲಂತು ಭಾರತ 5 ರನ್​ಗಳ ರೋಚಕ ಜಯ ಸಾಧಿಸಿತು.

ಮಳೆಯ ಕಾಟ ಇದ್ದಕಾರಣ ಪಂದ್ಯವನ್ನು 9 ಓವರ್​ಗೆ ಸೀಮಿತಗೊಳಿಸಲಾಯಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ವನಿತೆಯರು 9 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 50 ರನ್ ಕಲೆಹಾಕಿದರು. ಪೂಜಾ ವಸ್ತ್ರಾಕರ್ 10 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು.

ವಿಶ್ವ ಚಾಂಪಿಯನ್ನರ ಸೋಲುಣಿಸಿ ಟಿ-20 ಸರಣಿ ವಶಪಡಿಸಿಕೊಂಡ ಕ್ರಿಕೆಟ್ ಶಿಶುಗಳು!

ಇತ್ತ 51 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ವೆಸ್ಟ್​ ಇಂಡೀಸ್ 9 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 45 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಭಾರತ ಪರ ಅಜುಜಾ ಪಾಟಿಲ್ 2 ವಿಕೆಟ್ ಪಡೆದರು.

 (VIDEO): ಫೀಲ್ಡಿಂಗ್ ಮಾಡುವಾಗ ಮುಖಕ್ಕೆ ಬಡಿದ ಚೆಂಡು; ಆಸೀಸ್ ಆಟಗಾರನಿಗೆ ಗಂಭೀರ ಗಾಯ

5 ರನ್​​ಗಳ ರೋಚಕ ಗೆಲುವುನೊಂದಿಗೆ ಭಾರತದ ಮಹಿಳೆಯರು 5 ಪಂದ್ಯಗಳ ಟಿ-20 ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯ ಬಾಕಿ ಉಳಿದಿದ್ದು ನವೆಂಬರ್ 20 ರಂದು ನಡೆಯಲಿದೆ. ಇದರಲ್ಲೂ ಭಾರತ ಗೆದ್ದರೆ ಸರಣಿ ಕ್ಲೀನ್​ಸ್ವೀಪ್ ಮಾಡಲಿದೆ.
First published: November 18, 2019, 10:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading