ಇಂದು ಭಾರತ-ವೆಸ್ಟ್​ ಇಂಡೀಸ್ ನಡುವೆ ಮೊದಲ ಟಿ-20 ಕದನ; ರೋಹಿತ್-ಕೊಹ್ಲಿ ಮೇಲೆ ಎಲ್ಲರ ಕಣ್ಣು

ಸರಣಿ ಆರಂಭಕ್ಕೂ ಮೊದಲೇ ವೆಸ್ಟ್​ ಇಂಡೀಸ್​ಗೆ ಭಾರಿ ಆಘಾತ ಉಂಟಾಗಿದೆ. ಗಾಯದ ಸಮಸ್ಯೆ ಎದುರಿಸಿರುವ ಸ್ಟಾರ್ ಆಲ್‌ರೌಂಡರ್‌ ಆಂಡ್ರೆ ರಸೆಲ್‌, ಟೀಂ ಇಂಡಿಯಾ ವಿರುದ್ಧದ ಟಿ-20 ಸರಣಿಗೆ ಅಲಭ್ಯರಾಗಿದ್ದಾರೆ.

Vinay Bhat | news18
Updated:August 3, 2019, 7:23 AM IST
ಇಂದು ಭಾರತ-ವೆಸ್ಟ್​ ಇಂಡೀಸ್ ನಡುವೆ ಮೊದಲ ಟಿ-20 ಕದನ; ರೋಹಿತ್-ಕೊಹ್ಲಿ ಮೇಲೆ ಎಲ್ಲರ ಕಣ್ಣು
ಬ್ರಾಥ್​ವೈಟ್ ಹಾಗೂ ವಿರಾಟ್ ಕೊಹ್ಲಿ
  • News18
  • Last Updated: August 3, 2019, 7:23 AM IST
  • Share this:
ಬೆಂಗಳೂರು (ಆ. 03): ವಿಶ್ವಕಪ್ ಸೋಲಿನಿಂದ ಆಘಾತಗೊಂಡಿದ್ದ ಟೀಂ ಇಂಡಿಯಾಗೆ, ಸೋಲಿನ ಕಹಿ ಮರೆಯಲು ಕೆರಿಬಿಯನ್ ಪ್ರವಾಸ ಎದುರಾಗಿದೆ. ಇಂದು ಅಮೆರಿಕದ ಫ್ಲೋರಿಡಾದಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವೆ ಮೊದಲ ಟಿ-20 ಕದನ ನಡೆಯಲಿದೆ.

ಯುವ ಆಟಗಾರರಿಂದಲೇ ಕೊಹ್ಲಿ ಪಡೆ ಕೂಡಿದ್ದು, ಹೊಸ ಆಟಗಾರರು ತಮ್ಮ ಸಾಮರ್ಥ್ಯ ತೋರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತ ಪರ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದರೆ, ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಆಡಲಿದ್ದಾರೆ. ಆದರೆ 4, 5 ಸ್ಥಾನದಲ್ಲಿ ಯಾವ ಆಟಗಾರ ಆಡಲಿದ್ದಾನೆ ಎಂಬುದೆ ಕುತೂಹಲ. ಕನ್ನಡಿಗರಾದ ಕೆ ಎಲ್ ರಾಹುಲ್, ಹಾಗೂ ಮನೀಶ್ ಪಾಂಡೆ ಪ್ರಮುಖ ಅಸ್ತ್ರವಾದರೆ, ಶ್ರೇಯಸ್ ಐಯರ್ ಕೂಡ ರೇಸ್​​ನಲ್ಲಿದ್ದಾರೆ.

ಹೀಗಾಗಿ 4 ಹಾಗೂ 5ನೇ ಕ್ರಮಾಂಕದಲ್ಲಿ ಈ ಮೂವರಲ್ಲಿ ಯಾರಿಗೆ ಸ್ಥಾನ ಎಂಬುದೆ ದೊಡ್ಡ ಪ್ರಶ್ನೆಯಾಗಿದೆ. 6ನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಆಡಿದರೆ, 7ನೇ ಸ್ಥಾನದಲ್ಲಿ ಜಡೇಜಾ, 8ನೇ ಕ್ರಮಾಂಕದಲ್ಲಿ ಕ್ರುನಾನ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ. ನಂತರದಲ್ಲಿ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲು ನವದೀಪ್ ಸೈನಿ ತುದಿಗಾಲಿನಲ್ಲಿ ನಿಂತಿದ್ದಾರೆ.

ಭಾರತ-ವಿಂಡೀಸ್ ಮೊದಲ ಟಿ-20; ಹೊಸ ದಾಖಲೆ ಮೇಲೆ ರೋಹಿಟ್-ಕೊಹ್ಲಿ ಕಣ್ಣು

ಇತ್ತ ಸರಣಿ ಆರಂಭಕ್ಕೂ ಮೊದಲೇ ವೆಸ್ಟ್​ ಇಂಡೀಸ್​ಗೆ ಭಾರಿ ಆಘಾತ ಉಂಟಾಗಿದೆ. ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್‌ ಟಿ-20 ಟೂರ್ನಿ ವೇಳೆ ಗಾಯದ ಸಮಸ್ಯೆ ಎದುರಿಸಿರುವ ಸ್ಟಾರ್ ಆಲ್‌ರೌಂಡರ್‌ ಆಂಡ್ರೆ ರಸೆಲ್‌, ಟೀಂ ಇಂಡಿಯಾ ವಿರುದ್ಧದ ಟಿ-20 ಸರಣಿಗೆ ಅಲಭ್ಯರಾಗಿರುವುದಾಗಿ ವರದಿಯಾಗಿದೆ. ಹೀಗಾಗಿ ಇವರ ಬದಲು ಜೇಸನ್‌ ಮೊಹಮ್ಮದ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಕಾರ್ಲಸ್ ಬ್ರಾಥ್​ವೈಟ್ ತಂಡವನ್ನು ಮುನ್ನಡೆಸುತ್ತಿದ್ದು, ಎವಿನ್ ಲೆವಿಸ್, ಶಿಮ್ರೋಮ್ ಹೆಟ್ಮೇರ್, ನಿಕೋಲಸ್ ಪೂರನ್, ಕೀರೊನ್ ಪೊಲ್ಲಾರ್ಡ್​​ರಂತಹ ಬಿಗ್ ಹಿಟ್ಟರ್​ಗಳು ತಂಡದಲ್ಲಿದ್ದಾರೆ. ಜೊತೆಗೆ ಶೆಲ್ಡನ್ ಕಾಟ್ರೆಲ್, ಒಶಾನೆ ಥೋಮಸ್, ಸುನೀಲ್ ನರೈನ್​​ರಂತಹ ಅಪಾಯಕಾರಿ ಬೌಲರ್​ಗಳು ಇದ್ದಾರೆ.

ಒಟ್ಟು ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದ್ದು, ಮೊದಲ ಪಂದ್ಯ ಉಭಯ ತಂಡಗಳಿಗೂ ಮುಖ್ಯವಾಗಿದೆ. ಮೇಲ್ನೋಟಕ್ಕೆ ಭಾರತ ಬ್ಯಾಟಿಂಗ್​ನಲ್ಲಿ ಬಲಿಷ್ಠದಂತೆ ಕಂಡರೂ ಇತ್ತ ವಿಂಡೀಸ್​​ ಹೆಚ್ಚು ಆಲ್ರೌಂಡರ್​ಗಳನ್ನೆ ನಂಬಿಕೊಂಡಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

ಗೇಲ್ ದಾಖಲೆ ಮೇಲೆ ರೋಹಿತ್ ಕಣ್ಣು:

ಅಂತರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಗೇಲ್ 58 ಪಂದ್ಯಗಳಲ್ಲಿ ಒಟ್ಟು 105 ಸಿಕ್ಸರ್‌ಗಳನ್ನು ಬಾರಿಸಿ ಗರಿಷ್ಠ ಸಿಕ್ಸ್ ಸಿಡಿಸಿದ ನಂಬರ್ ನಂಬರ್ ಬ್ಯಾಟ್ಸ್​ಮನ್ ಆಗಿದ್ದಾರೆ. ರೋಹಿತ್ ಶರ್ಮಾ 94 ಪಂದ್ಯಗಳಲ್ಲಿ 102 ಸಿಕ್ಸರ್‌ಗಳನ್ನು ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಗೇಲ್ ದಾಖಲೆ ಮುರಿಯಲು ರೋಹಿಟ್​ಗೆ ಇನ್ನು ಕೇವಲ ನಾಲ್ಕು ಸಿಕ್ಸರ್‌ಗಳ ಅಗತ್ಯವಿದೆಯಷ್ಟೆ. ಹೀಗಾಗಿ ರೋಹಿತ್ ನೂತನ ದಾಖಲೆಯನ್ನು ಎದುರುನೋಡುತ್ತಿದ್ದಾರೆ.

First published:August 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading