2ನೇ ಟೆಸ್ಟ್​​ನಿಂದ ಪಂತ್ ಔಟ್; 3 ವರ್ಷದ ಬಳಿಕ ವಿಂಡೀಸ್ ವಿರುದ್ಧ ಆಡಲಿದ್ದಾರೆ ಈ ಆಟಗಾರ?

ಇಂಜುರಿಯಿಂದಾಗಿ ಕೆಲ ವರ್ಷ ಟೀಂ ಇಂಡಿಯಾ ಟೆಸ್ಟ್​ ತಂಡದಿಂದ ಹೊರಗುಳಿದಿದ್ದ ವೃದ್ದಿಮಾನ್ ಸಾಹ ವೆಸ್ಟ್​ ಇಂಡೀಸ್ ಟೆಸ್ಟ್​ ಸರಣಿಗೆ ಆಯ್ಕೆಯಾಗಿದ್ದರು. ಆದರೆ, ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​ಗೆ ಅವಕಾಶ ನೀಡಲಿಲ್ಲ.

Vinay Bhat | news18-kannada
Updated:August 28, 2019, 9:23 AM IST
2ನೇ ಟೆಸ್ಟ್​​ನಿಂದ ಪಂತ್ ಔಟ್; 3 ವರ್ಷದ ಬಳಿಕ ವಿಂಡೀಸ್ ವಿರುದ್ಧ ಆಡಲಿದ್ದಾರೆ ಈ ಆಟಗಾರ?
ರಿಷಭ್ ಪಂತ್
  • Share this:
ಬೆಂಗಳೂರು (ಆ. 28): ವೆಸ್ಟ್​ ಇಂಡೀಸ್ ಪ್ರವಾಸದಲ್ಲಿರುವ ಭಾರತ ಮೊದಲ ಟೆಸ್ಟ್​ನಲ್ಲಿ 318 ರನ್​ಗಳಿಂದ ಗೆದ್ದು ಬೀಗಿದೆ. 2ನೇ ಟೆಸ್ಟ್​ ಆಗಸ್ಟ್​ 30 ರಿಂದ ಆರಂಭವಾಗಲಿದ್ದು ಪ್ರಮುಖ ಬದಲಾವಣೆ ಮಾಡುವ ಅಂದಾಜಿನಲ್ಲಿದೆ. ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್ ಪದೇಪದೇ ವೈಫಲ್ಯ ಅನುಭವಿಸುತ್ತಿದ್ದು, ಹೀಗಾಗಿ ಇವರ ಬದಲು ಮತ್ತೊಬ್ಬ ಆಟಗಾರನನ್ನು ಮುಂದಿನ ಟೆಸ್ಟ್​ಗೆ ಕಣಕ್ಕಿಳಿಸುವ ಅಂದಾಜಿನಲ್ಲಿದೆ ಕೊಹ್ಲಿ ಪಡೆ.

ಏಕದಿನ, ಟಿ-20 ಸರಣಿಯಲ್ಲೂ ಕಳಪೆ ಪ್ರದರ್ಶನ ತೋರಿದ ರಿಷಭ್ ಪಂತ್, ಟೆಸ್ಟ್​ನಲ್ಲಿ ಉತ್ತಮ ರೆಕಾರ್ಡ್​​ ಹೊಂದಿದ್ದಾರೆ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಯಿತು. ಆದರೆ, ಇಲ್ಲೂ ತಮ್ಮ ಕೆಟ್ಟ ಆಟವನ್ನು ಮುಂದುವರೆಸಿದ್ದಾರೆ.

ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 24 ಹಾಗೂ 2ನೇ ಇನ್ನಿಂಗ್ಸ್​ನಲ್ಲಿ 7 ರನ್​ಗೆ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದಿದ್ದರು. ಸದ್ಯ 2ನೇ ಟೆಸ್ಟ್​​ನಿಂದ ಪಂತ್ ಜಾಗಕ್ಕೆ ವೃದ್ದಿಮಾನ್ ಸಾಹರನ್ನು ಆಯ್ಕೆ ಮಾಡುವುದು ಬಹುತೇಕ ಪಕ್ಕ ಆಗಿದೆ.

India vs West Indies: Wriddhiman Saha or Rishabh Pant? Former Indian wicket keeper batsman names his pick for second Test
ವೃದ್ದಿಮಾನ್ ಸಾಹ


ಕ್ರಿಕೆಟ್ ಇತಿಹಾಸದಲ್ಲಿ ಈ ದಿನವನ್ನು ಯಾರಿಂದಲೂ ಎಂದಿಗೂ ಮರೆಯಲು ಅಸಾಧ್ಯ!

ಭಾರತದ ಶ್ರೇಷ್ಠ ವಿಕೆಟ್ ಕೀಪರ್ ಸೈಯ್ಯದ್ ಕಿರ್ಮಾನಿ ಕೂಡ ಪಂತ್‌ ಬದಲು ಸಾಹಗೆ ಅವಕಾಶ ನೀಡಿದರೆ ಒಳ್ಳೆಯದು. ಯಾಕೆಂದರೆ ಪಂತ್‌ ಕಲಿಯೋದು ಇನ್ನೂ ಸಾಕಷ್ಟಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಪಂತ್​ ಇನ್ನೂ ಚಿಕ್ಕವನು. ಆತನಿಗೆ ಭವಿಷ್ಯವಿದೆ. ಕಲಿಯಲು ಇನ್ನೂ ಸಾಕಷ್ಟಿದೆ. ಕೀಪಿಂಗ್ ಮಾಡುವುದು ಅಷ್ಟೊಂದು ಸುಲಭದ ವಿಚಾರವಲ್ಲ. ಎರಡು ಗ್ಲೌಸ್ ಧರಿಸಿ ಎಲ್ಲರೂ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಸದ್ಯ ಪಂತ್​ಗೆ ಇನ್ನಷ್ಟು ಕಲಿಯಲು ಅವಕಾಶ ನೀಡಿ, 2ನೇ ಟೆಸ್ಟ್​ನಲ್ಲಿ ಸಾಹ ಆಡಿದರೆ ಉತ್ತಮ' ಎಂದು ಕಿರ್ಮಾನಿ ಹೇಳಿದ್ದಾರೆ.ವಿಂಡೀಸ್ ವಿರುದ್ಧ ಸಾಹ ಉತ್ತಮ ರೆಕಾರ್ಡ್​​ ಹೊಂದಿದ್ದಾರೆ. ಕೆರಿಬಿಯನ್ನರ ವಿರುದ್ಧ 2016 ರಲ್ಲಿ ಸಾಹ ಕೊನೆಯ ಪಂದ್ಯವನ್ನಾಡಿದ್ದರು. ಆಡಿರುವ ಮೂರು ಪಂದ್ಯಗಳಲ್ಲಿ 195 ರನ್ ಬಾರಿಸಿದ್ದಾರೆ. ಅಲ್ಲದೆ 1 ಶತಕ ಕೂಡ ಸಿಡಿಸಿದ್ದಾರೆ.

ಇಂಜುರಿಯಿಂದಾಗಿ ಕೆಲ ವರ್ಷ ಟೀಂ ಇಂಡಿಯಾ ಟೆಸ್ಟ್​ ತಂಡದಿಂದ ಹೊರಗುಳಿದಿದ್ದ ವೃದ್ದಿಮಾನ್ ಸಾಹ ವೆಸ್ಟ್​ ಇಂಡೀಸ್ ಟೆಸ್ಟ್​ ಸರಣಿಗೆ ಆಯ್ಕೆಯಾಗಿದ್ದರು. ಆದರೆ, ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​ಗೆ ಅವಕಾಶ ನೀಡಲಿಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಿ

First published:August 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading