ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ: ಇಂದಿನ ಪಂದ್ಯದಲ್ಲಿ ಸಚಿನ್-ಲಾರಾ ದಾಖಲೆ ಉಡೀಸ್..!

ಏಕದಿನ ಪಂದ್ಯಗಳಲ್ಲಿ 11087 ರನ್​, ಟೆಸ್ಟ್‌ನಲ್ಲಿ 6613 ರನ್ ಮತ್ತು ಟಿ20 ಯಲ್ಲಿ 2263 ರನ್ ಗಳಿಸಿರುವ ಕೊಹ್ಲಿ ಕೇವಲ 37 ರನ್​ ಸಿಡಿಸಿದರೆ ಕಡಿಮೆ ಇನ್ನಿಂಗ್ಸ್​ನಲ್ಲಿ 20 ಸಾವಿರ ರನ್​ ದಾಟಿದ ವಿಶ್ವದ ಮೊದಲ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ.

zahir | news18
Updated:June 27, 2019, 12:48 AM IST
ಮತ್ತೊಂದು ವಿಶ್ವದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ: ಇಂದಿನ ಪಂದ್ಯದಲ್ಲಿ ಸಚಿನ್-ಲಾರಾ ದಾಖಲೆ ಉಡೀಸ್..!
ಹೀಗೆ ಏಕದಿನ ಕ್ರಿಕೆಟ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅತೀ ವೇಗದ ಶತಕ ಸಿಡಿಸಿದವರು ಯಾರೆಂದು ಗಮನಿಸಿದರೆ...
  • News18
  • Last Updated: June 27, 2019, 12:48 AM IST
  • Share this:
ವಿಶ್ವ ಕ್ರಿಕೆಟ್​ನ ರನ್ ಮಿಷಿನ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಈಗಾಗಲೇ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ 11 ಸಾವಿರ ರನ್ ಪೂರೈಸಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ದಾಖಲೆಯನ್ನು ಕೊಹ್ಲಿ ಅಳಿಸಿ ಹಾಕಿದ್ದಾರೆ.

ಇದೀಗ ಟೀಂ ಇಂಡಿಯಾ ನಾಯಕನ ಮುಂದಿರುವುದು 20 ಸಾವಿರ ರನ್​ಗಳ ಗುರಿ. ಗುರುವಾರ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ವೆಸ್ಟ್​ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ.

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 19,963 ರನ್ ಗಳಿಸಿರುವ ಕೊಹ್ಲಿ ವಿಂಡೀಸ್ ವಿರುದ್ಧ 37 ರನ್ ಗಳಿಸಿದರೆ 20 ಸಾವಿರ ರನ್ ಸಿಡಿಸಿದ ಭಾರತದ 3ನೇ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಅಷ್ಟೇ ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 12ನೇ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಯು ಕೊಹ್ಲಿ ಪಾಲಾಗಲಿದೆ.

ಏಕದಿನ ಪಂದ್ಯಗಳಲ್ಲಿ 11087 ರನ್​, ಟೆಸ್ಟ್‌ನಲ್ಲಿ 6613 ರನ್ ಮತ್ತು ಟಿ20 ಯಲ್ಲಿ 2263 ರನ್ ಗಳಿಸಿರುವ ಕೊಹ್ಲಿ ಕೇವಲ 37 ರನ್​ ಸಿಡಿಸಿದರೆ ಕಡಿಮೆ ಇನ್ನಿಂಗ್ಸ್​ನಲ್ಲಿ 20 ಸಾವಿರ ರನ್​ ದಾಟಿದ ವಿಶ್ವದ ಮೊದಲ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್​ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ಅವರ ಸರ್ವಶ್ರೇಷ್ಠ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ.

ಸಚಿನ್ ಮತ್ತು ಲಾರಾ ಇಬ್ಬರೂ 453 ಇನ್ನಿಂಗ್ಸ್​ಗಳಲ್ಲಿ 20 ಸಾವಿರ ಅಂತರರಾಷ್ಟ್ರೀಯ ರನ್​ಗಳನ್ನು ಪೂರೈಸಿದರು. ಆದರೆ ಕೊಹ್ಲಿಯು ಕೇವಲ 416 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆಯ ಅಂಚಿನಲ್ಲಿದ್ದಾರೆ. ಇನ್ನು ಟೀಂ ಇಂಡಿಯಾ ಪರವಾಗಿ 20 ಸಾವಿರಕ್ಕೂ ಅಧಿಕ ರನ್​ ಬಾರಿಸಿದ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (34,357 ರನ್​) ಮೊದಲಿಗರಾಗಿದ್ದರೆ, ರಾಹುಲ್ ದ್ರಾವಿಡ್ (24,208 ರನ್​) ಎರಡನೇ ಸ್ಥಾನವನ್ನು ಅಲಕಂರಿಸಿದ್ದಾರೆ.

ಇದನ್ನೂ ಓದಿ: ತಂದೆಯ ಸಾವಿನ ನೋವಿನಲ್ಲೂ 'ಚಾಂಪಿಯನ್' ಪಟ್ಟ ತಂದುಕೊಟ್ಟ ಟೀಂ ಇಂಡಿಯಾ ಹಾಕಿ ಆಟಗಾರ್ತಿ!

ಟೀಂ ಇಂಡಿಯಾ ನಾಯಕ ಕಳೆದ ಪಂದ್ಯವೂ ಸೇರಿದಂತೆ ಇದುವರೆಗಿನ  ವಿಶ್ವಕಪ್​ನ ಎಲ್ಲಾ ಪಂದ್ಯಗಳಲ್ಲೂ 50 ಕ್ಕೂ ಹೆಚ್ಚು  ರನ್ ಬಾರಿಸಿದ್ದಾರೆ. ಹೀಗಾಗಿ ಉತ್ತಮ  ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲೇ ಹೊಸ ಮೈಲುಗಲ್ಲನ್ನು ಸ್ಥಾಪಿಸಲಿದ್ದಾರೆ ಎನ್ನಲಾಗುತ್ತಿದೆ.
First published: June 26, 2019, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading