India vs West Indies: ವಿವಾದಾತ್ಮಕ ತೀರ್ಪು: ರೋಹಿತ್ ಔಟ್-ನಾಟೌಟ್, ವಿಡಿಯೋ ನೋಡಿ ನೀವೇ ನಿರ್ಧರಿಸಿ

ಸಾಮಾನ್ಯವಾಗಿ ಇಂತಹ ಗೊಂದಲಮಯ ಸಂದರ್ಭದಲ್ಲಿ ನಾಯಕ ಮತ್ತು ಆಟಗಾರರ ನಡುವೆ ಮಾತುಕತೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುತ್ತದೆ. ಇಲ್ಲಿ ಔಟಾಗಿದ್ದರೆ ಬ್ಯಾಟ್ಸ್​ಮನ್​ಗೆ ಕ್ರೀಡಾ ಸ್ಪೂರ್ತಿ ಮೆರೆಯಲು ಅಂಪೈರ್​ಗಳು ಸೂಚಿಸುತ್ತಾರೆ.

Rohit Sharma out

Rohit Sharma out

  • News18
  • Last Updated :
  • Share this:
ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರ ಔಟ್​ನ ತೀರ್ಪು ಹೊಸ ವಿವಾದವನ್ನು ಹುಟ್ಟುಹಾಕಿದೆ. ಬ್ಯಾಟ್ ಮತ್ತು ಪ್ಯಾಡ್ ನಡುವೆ ನುಗ್ಗಿದ ಚೆಂಡು ಬ್ಯಾಟ್​ಗೆ ತಗುಲಿದೆಯೇ ಎಂಬುದು ಸ್ಪಷ್ಟವಾಗುತ್ತಿರಲಿಲ್ಲ. ಆದರೂ ರೋಹಿತ್ ಔಟ್​ ತೀರ್ಪು ನೀಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಟಾಸ್‌ ಗೆದ್ದ ಟೀಂ ಇಂಡಿಯಾ ನಾಯಕ ಕೊಹ್ಲಿ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಅಂತೆಯೇ  ರೋಹಿತ್‌ ಹಾಗೂ ಕೆ.ಎಲ್. ರಾಹುಲ್ ಇನಿಂಗ್ಸ್​ ಆರಂಭಿಸಿದರು. ನಿಧಾನಗತಿಯ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಹಿಟ್​ ಮ್ಯಾನ್ 22 ಎಸೆತಗಳಲ್ಲಿ 18 ರನ್‌ಗಳನ್ನು ಗಳಿಸಿದ್ದರು.

ಈ ಸಂದರ್ಭದಲ್ಲಿ ಆರನೇ ಓವರ್​ನಲ್ಲಿ ದಾಳಿಗಿಳಿದ ವೆಸ್ಟ್‌ ಇಂಡೀಸ್‌ನ ವೇಗಿ ಕೆಮಾರ್‌ ರೋಚ್‌ ಅವರ ನಿಖರ ಎಸೆತವು ರೋಹಿತ್‌ ಅವರ ಬ್ಯಾಟ್‌ ಮತ್ತು ಪ್ಯಾಡ್‌ ಮಧ್ಯದಲ್ಲಿ ಒಳಗೆ ನುಗ್ಗಿತ್ತು. ಈ ಚೆಂಡನ್ನು ಅದ್ಭುತವಾಗಿ ಕ್ಯಾಚ್​ ಹಿಡಿದ ವಿಕೆಟ್‌ಕೀಪರ್‌ ಶೇಯ್‌ ಹೋಪ್‌ ವಿಕೆಟ್​ಗಾಗಿ ಮನವಿ ಸಲ್ಲಿಸಿದರು. ಆದರೆ ವಿಂಡೀಸ್ ಆಟಗಾರರ ಮನವಿಗೆ ಅಂಪೈರ್ ಮಣೆ ಹಾಕಿರಲಿಲ್ಲ.

ಹೀಗಾಗಿ ಡಿಆರ್​ಎಸ್​ ಮೊರೆ ಹೋದ ಕೆರಿಬಿಯನ್ ನಾಯಕ ಜೇಸನ್​ ಹೋಲ್ಡರ್ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಿದರು. ವಿಡಿಯೋ ಪರಿಶೀಲನೆ ವೇಳೆ ಚೆಂಡು ಬ್ಯಾಟ್‌ ಮತ್ತು ಪ್ಯಾಡ್‌ ಎರಡದ ಮಧ್ಯದಲ್ಲಿ ಏಕಕಾಲದಲ್ಲಿ ನುಸುಳಿರುವುದು ಸ್ಪಷ್ಟವಾಗಿ ಗೋಚರಿಸಿತ್ತು.

ಆದರೆ ಇಲ್ಲಿ ಚೆಂಡು ಬ್ಯಾಟ್‌ಗೆ ತಾಗಿದೆಯೇ ಅಥವಾ ಪ್ಯಾಡ್‌ಗೆ ತಾಗಿದೆಯೇ ಎಂಬ ಸ್ಪಷ್ಟತೆ ಮೂರನೇ ಅಂಪೈರ್​ಗಿರಲಿಲ್ಲ. ಹೀಗಾಗಿ ಇದನ್ನು ನಾಟೌಟ್ ಎಂಬ ತೀರ್ಮಾನಿಸಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಥರ್ಡ್​ ಅಂಪೈರ್​ ಔಟ್ ನೀಡುವಂತೆ ಫೀಲ್ಡ್​ ಅಂಪೈರ್ ಸೂಚಿಸಿದ್ದರು. ಈ ತೀರ್ಪು ಖುದ್ದು ರೋಹಿತ್ ಶರ್ಮಾ ಅವರಿಗೆ ಅಚ್ಚರಿ ಮೂಡಿಸಿತು.

ಸಾಮಾನ್ಯವಾಗಿ ಇಂತಹ ಗೊಂದಲಮಯ ಸಂದರ್ಭದಲ್ಲಿ ನಾಯಕ ಮತ್ತು ಆಟಗಾರರ ನಡುವೆ ಮಾತುಕತೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುತ್ತದೆ. ಇಲ್ಲಿ ಔಟಾಗಿದ್ದರೆ ಬ್ಯಾಟ್ಸ್​ಮನ್​ಗೆ ಕ್ರೀಡಾ ಸ್ಪೂರ್ತಿ ಮೆರೆಯಲು ಅಂಪೈರ್​ಗಳು ಸೂಚಿಸುತ್ತಾರೆ. ಆದರೆ ಇದ್ಯಾವುದನ್ನು ಪರಿಗಣಿಸದೇ ಥರ್ಡ್​ ಅಂಪೈರ್ ಔಟ್ ನೀಡಿರುವುದೇ ಈಗ ಕ್ರಿಕೆಟ್​ ಅಭಿಮಾನಿಗಳ ಅಚ್ಚರಿಗೆ ಕಾರಣ.ಡಿಆರ್​ಎಸ್​ ನಿಯಮವಿದ್ದರೂ ರೋಹಿತ್​ ಔಟ್ ಎಂದು ತೀರ್ಪು ನೀಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಅಂಪೈರ್​ಗಳ ಅವಿಶ್ವಾಸದ ಪ್ರಶ್ನೆಗಳನ್ನು ಕ್ರಿಕೆಟ್ ಅಭಿಮಾನಿಗಳು ಎತ್ತಿದ್ದಾರೆ.First published: