ಟೀಂ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಸಿಕ್ಕ ಹೊಸ ಆಟಗಾರ; ಐಯರ್ ಮೇಲೆ ಹೆಚ್ಚಿದ ನಿರೀಕ್ಷೆ

Shreyas Iyer: ಯಾವುದೇ ಕ್ರಮಾಂಕದಲ್ಲಿ ನನ್ನನ್ನು ಆಡಿಸಿದರೆ ಬ್ಯಾಟ್ ಬೀಸುವ ಸಾಮರ್ಥ್ಯ ನನ್ನಲ್ಲಿದೆ ಎಂದಿದ್ದ ಐಯರ್ ಅವರು ಕೊಹ್ಲಿ ಜೊತೆಸೇರಿ ಶತಕದ ಜೊತೆಯಾಟ ಆಡಿದರು.

Vinay Bhat | news18
Updated:August 12, 2019, 12:38 PM IST
ಟೀಂ ಇಂಡಿಯಾ ಮಧ್ಯಮ ಕ್ರಮಾಂಕಕ್ಕೆ ಸಿಕ್ಕ ಹೊಸ ಆಟಗಾರ; ಐಯರ್ ಮೇಲೆ ಹೆಚ್ಚಿದ ನಿರೀಕ್ಷೆ
ಶ್ರೇಯಸ್ ಐಯರ್
  • News18
  • Last Updated: August 12, 2019, 12:38 PM IST
  • Share this:

ಬೆಂಗಳೂರು (ಆ. 12): ದೇಶಿಯ ಕ್ರಿಕೆಟ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಅದರಲ್ಲು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ನಾಯಕನಾಗಿ ಮುನ್ನಡೆಸಿ ಸದ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಶ್ರೇಯಸ್ ಐಯರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.


ವೆಸ್ಟ್​ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಐಯರ್ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದ್ದು ಬಹುಕಾಲದ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರ ಸಿಗುವಂತೆ ಗೋಚರಿಸುತ್ತಿದೆ.


ವಿಂಡೀಸ್ ಬೌಲಿಂಗ್ ದಾಳಿಗೆ ಬಹುಬೇಗನೆ ವಿಕೆಟ್ ಕಳೆದುಕೊಂಡ ಭಾರತ 100 ರನ್ ಆಗುವ ಹೊತ್ತಿಗೆ ಪ್ರಮುಖ 3 ವಿಕೆಟ್ ಪತನಗೊಂಡಿತ್ತು. ಈ ಸಂದರ್ಭ ನಾಯಕನ ಜೊತೆಯಾದ ಐಯರ್ ಎಲ್ಲೂ ವಿಕೆಟ್ ಕೈ ಚೆಲ್ಲದಂತೆ ಎಚ್ಚರಿಕೆಯ ಆಟ ಪ್ರದರ್ಶಿಸಿದರು. 'ಯಾವುದೇ ಕ್ರಮಾಂಕದಲ್ಲಿ ನನ್ನನ್ನು ಆಡಿಸಿದರೆ ಬ್ಯಾಟ್ ಬೀಸುವ ಸಾಮರ್ಥ್ಯ ನನ್ನಲ್ಲಿದೆ' ಎಂದಿದ್ದ ಐಯರ್ ಅವರು ಕೊಹ್ಲಿ ಜೊತೆಸೇರಿ ಶತಕದ ಜೊತೆಯಾಟ ಆಡಿದರು. ಅಲ್ಲದೆ ತಾನಾಡಿದ 8ನೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 3ನೇ ಅರ್ಧಶತಕ ಸಿಡಿಸಿ ಮಿಂಚಿದರು.ಒಂದೇ ಪಂದ್ಯದಲ್ಲಿ ಕೊಹ್ಲಿಯಿಂದ ದಾಖಲೆಗಳ ಸುರಿಮಳೆ; ಸಚಿನ್ ಸಾಧನೆ ಹಿಂದಿಕ್ಕಲು ಬೇಕಿಲ್ಲ ಹೆಚ್ಚು ಸಮಯ

68 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ 71 ರನ್ ಬಾರಿಸಿದ ಐಯರ್ ತಂಡದ ಮೊತ್ತ 250ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. ‘ಈ ಪಂದ್ಯಕ್ಕೂ ಮೊದಲು ಇಂಡಿಯಾ ಪರ ಇದೇ ಮೈದಾನದಲ್ಲಿ ಆಡಿರುವುದು ನನಗೆ ನೆರವಾಯಿತು. ನನ್ನ ಇಂದಿನ ಆಟ ನನಗೆ ಸಂತಸ ನೀಡಿದೆ. ನಾನು ಕ್ರೀಸ್​ಗೆ ಬಂದಂತೆ ಕೊಹ್ಲಿ ದೊಡ್ಡ ಮೊತ್ತದ ಜೊತೆಯಾಟ ನಡೆಸಲು ಹೇಳಿದ್ದರು. ಅದರಂತೆ ಆಕ್ರಮಣಕಾರಿ ಆಟದ ಮೊರೆಹೋಗದೆ ತಾಳ್ಮೆಯಿಂದ ಬ್ಯಾಟ್ ಬೀಸಿದೆ. ಬೌಂಡರಿ, ಸಿಕ್ಸರ್​​ಗಿಂತ ಒಂದು ಅಥವಾ ಎರಡು ರನ್ಗಳ ಕಡೆ ಹೆಚ್ಚಿನ ಗಮನ ಹರಿಸಿದೆ’ ಎಂಬುದು ಐಯರ್ ಮಾತು.


ಟೀಂ ಇಂಡಿಯಾದಲ್ಲಿ ಬಹುಕಾಲದಿಂದ ಕಾಡುತ್ತಿರುವ ನಂಬರ್ 4 ಸ್ಥಾನಕ್ಕೆ ಐಯರ್ ಸೂಕ್ತ ಆಟಗಾರ ಎಂಬ ಮಾತುಗಳು ಸದ್ಯ ಕ್ರೀಡಾವಲಯದಿಂದ ಕೇಳಿಬರುತ್ತಿದೆ. ಈಗೀಗ ರಿಷಭ್ ಪಂತ್ 4ನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆಯಾದರು ಪದೇಪದೇ ಎಡವುತ್ತಿದ್ದಾರೆ. ತಾಳ್ಮೆಯಿಂದ ಆಟವಾಡುವ ಬ್ಯಾಟ್ಸ್​ಮನ್​ ಈ ಸ್ಥಾನಕ್ಕೆ ಬೇಕಾಗಿದ್ದು ಐಯರ್ ಈ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಾರೆ ಎಂದು ಹೇಳಲಾಗುತ್ತಿದೆ.


ಸದ್ಯ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಶ್ರೇಯಸ್ ಐಯರ್ ಮುಂದಿನ ದಿನಗಳಲ್ಲಿ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಕಾದುನೋಡಬೇಕಿದೆ.

 
First published:August 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading