ಭಾರತಕ್ಕೆ ಬಂದಿಳಿದ ವಿಂಡೀಸ್ ಆಟಗಾರರು; ಸರಣಿ ಆರಂಭಕ್ಕೂ ಮುನ್ನ ಎಚ್ಚರಿಕೆ ನೀಡಿದ ಪೊಲಾರ್ಡ್​

ಕಳೆದ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿದೆ. ಭಾರತ ವಿರುದ್ಧ ಗೆಲುವು ಸಾಧಿಸುವುದು ನಮ್ಮ ಗುರಿ. ನಾಯಕನಾಗಿ ನನಗೆ ಉತ್ತಮ ಅವಕಾಶ ಸಿಕ್ಕಿದೆ. ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ- ಪೊಲಾರ್ಡ್

ಕೀರೊನ್ ಪೊಲಾರ್ಡ್ ಹಾಗೂ ವಿರಾಟ್ ಕೊಹ್ಲಿ

ಕೀರೊನ್ ಪೊಲಾರ್ಡ್ ಹಾಗೂ ವಿರಾಟ್ ಕೊಹ್ಲಿ

  • Share this:
ಬೆಂಗಳೂರು (ಡಿ. 04): ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವಣ ಸರಣಿ ಆರಂಭಕ್ಕೆ ಕೇವಲ ಎರಡು ದಿನವಷ್ಟೆ ಬಾಕಿಉಳಿದಿದೆ. ಈಗಾಗಲೇ ಕೆರಿಬಿಯನ್ ಪಡೆ ಭಾರತಕ್ಕೆ ಬಂದಿಳಿದಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಮೊದಲಿಗೆ ಮೂರು ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಆಯೋಜಿಸಲಾಗಿದೆ.

ಟೀಂ ಇಂಡಿಯಾ ಪರ ಶಿಖರ್ ಧವನ್ ಇಂಜುರಿಯಿಂದ ಗುಣಮುಖರಾಗದ ಕಾರಣ ಸಂಜು ಸ್ಯಾಮ್ಸನ್​ಗೆ ಅವಕಾಶ ನೀಡಲಾಗಿದೆ. ಇತ್ತ ವಿಂಡೀಸ್ ಪರ ಪ್ರಮುಖ ಆಟಗಾರರಾದ ಆಂಡ್ರೊ ರಸೆಲ್ ಹಾಗೂ ಕ್ರಿಸ್ ಗೇಲ್​ರನ್ನು ತಂಡದಿಂದ ಕೈಬಿಡಲಾಗಿದೆ. ಕೀರೊನ್ ಪೊಲಾರ್ಡ್​ ಏಕದಿನ ಹಾಗೂ ಟಿ-20 ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಫಾಬಿನ್ ಅಲೆನ್ ಇಂಜುರಿಯಿಂದ ಗುಣಮುಖರಾಗಿದ್ದು ತಂಡ ಸೇರಿಕೊಂಡಿದ್ದಾರೆ.

 (VIDEO): ಎಂಎಸ್​ಎಲ್​ನಲ್ಲಿ ಮಿ. 360 ಮ್ಯಾಜಿಕ್; ಎಬಿಡಿಯ ಆ ಒಂದು ಹೊಡೆತ ಹೇಗಿತ್ತು ಗೊತ್ತಾ?

ಭಾರತಕ್ಕೆ ಬಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲಾರ್ಡ್​, "ಬಲಿಷ್ಠ ತಂಡದೆದುರು ಕಾದಾಟ ನಡೆಸಲು ಭಾರತಕ್ಕೆ ಬಂದಿಳಿದಿದ್ದೇವೆ. ನಾವು ಅಂಡರ್‌ಡಾಗ್‌ಗಳು. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿದೆ. ಕೆಲವು ವಿಚಾರಗಳನ್ನು ಸರಿಮಾಡಿಕೊಂಡರೆ ಯಶಸ್ಸು ಕಂಡಿತಾ ಸಿಗುತ್ತದೆ" ಎಂದು ಹೇಳಿದರು.

"ಕಳೆದ ಅಫ್ಘಾನಿಸ್ತಾನ ವಿರುದ್ಧ ಏಕದಿನ ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿದೆ. ವೆಸ್ಟ್​ ಇಂಡೀಸ್ ಪರ ನಾನು ಅನೇಕ ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಈ ನಡುವೆ ಮೂರು-ನಾಲ್ಕು ವರ್ಷಗಳ ಕಾಲ ದೂರವುಳಿಯಬೇಕಾಯಿತು. ನನ್ನ ಮತ್ತು ವೆಸ್ಟ್​ ಇಂಡೀಸ್ ಕ್ರಿಕೆಟ್ ಮಂಡಳಿ ನಡುವೆ ಸಂಬಂಧ ಸರಿಯಿಲ್ಲ ಎಂಬ ವಿಚಾರ ಹೊಸತೇನಲ್ಲ"

"ಆದರೆ, ಇದಾವುದನ್ನು ಗಮನದಲ್ಲಿಟ್ಟುಕೊಳ್ಳದೆ ಸದ್ಯ ಭಾರತ ವಿರುದ್ಧ ಗೆಲುವು ಸಾಧಿಸುವುದು ನಮ್ಮ ಗುರಿಯಾಗಿದೆ. ನಾಯಕನಾಗಿ ನನಗೆ ಉತ್ತಮ ಅವಕಾಶ ಸಿಕ್ಕಿದೆ. ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ" ಎಂದು ಕೀರೊನ್ ಪೊಲಾರ್ಡ್ ಎಚ್ಚರಿಕೆಯ ಸೂಚನೆ ನೀಡಿದ್ದಾರೆ.

ಆರ್​ಸಿಬಿಯಲ್ಲಿ ಕಳಪೆ ಪ್ರದರ್ಶನ; ಆದ್ರೆ, ಬೇರೆ ತಂಡಕ್ಕೋಗಿ ಕಪ್ ಎತ್ತಿಹಿಡಿದರು ಈ ಆಟಗಾರರು!

ಡಿಸೆಂಬರ್ 6 ರಂದು ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಟಿ-20 ಪಂದ್ಯ ನಡೆಯಲಿದೆ. ಡಿ. 8 ರಂದು ತಿರುವನಂತಪುರಂನ ಗ್ರೀನ್​ಫಿಲ್ಡ್​ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಹಾಗೂ ಅಂತಿಮ ಟಿ-20 ಡಿ. 11 ಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿಗದಿ ಪಡಿಸಲಾಗಿದೆ. ಎಲ್ಲ ಟಿ-20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

 ಇನ್ನು ಡಿ. 15 ರಂದು ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಡಿ. 18 ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ 2ನೇ ಏಕದಿನ ಹಾಗೂ ಡಿ. 22 ರಂದು ಕತಕ್​ನಲ್ಲಿ ಮೂರನೇ ಪಂದ್ಯ ಆಯೋಜಿಸಲಾಗಿದೆ. ಈ ಎಲ್ಲ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.

ಭಾರತ ಟಿ 20 ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್ ರಾಹುಲ್‌, ರಿಷಭ್‌ ಪಂತ್‌, ಯಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ದೀಪಕ್‌ ಚಹರ್‌, ಮನೀಶ್‌ ಪಾಂಡೆ, ಶ್ರೇಯಸ್‌ ಐಯ್ಯರ್‌, ಶಿವಂ ದುಬೆ, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಸಂಜು ಸ್ಯಾಮ್ಸನ್.

ಏಕದಿನ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶ್ರೇಯಸ್‌ ಐಯ್ಯರ್‌, ಕೇದರ್‌ ಜಾಧವ್‌, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ.

RCB: ಐಪಿಎಲ್ ಆರಂಭಕ್ಕೂ ಮುನ್ನವೇ ಆರ್​ಸಿಬಿಗೆ ಬಿಗ್ ಶಾಕ್..!

ವೆಸ್ಟ್​ ಇಂಡೀಸ್ ಟಿ-20 ತಂಡ: ಫಾಬಿನ್ ಅಲೆನ್, ಬ್ರಾಂಡನ್ ಕಿಂಗ್, ದಿನೇಶ್ ರಾಮ್ದಿನ್, ಶೆಲ್ಡನ್ ಕಾಟ್ರೆಲ್, ಎವಿನ್ ಲೆವಿಸ್, ಶೆರ್ಫನ್ ರುಥರ್​ಫಾರ್ಡ್​, ಶಿಮ್ರೋನ್ ಹೆಟ್ಮೇರ್, ಖೇರಿ ಪಿರ್ರೆ, ಲೆಂಡ್ ಸಿಮಾನ್ಸ್​, ಜೇಸನ್ ಹೋಲ್ಡರ್, ಕೀರೊನ್ ಪೊಲಾರ್ಡ್​ (ನಾಯಕ), ಹೇಡನ್ ವಾಲ್ಶ್​, ಕೀಮೊ ಪೌಲ್, ನಿಕೋಲಸ್ ಪೂರನ್, ಕೆಸ್ರಿಕ್ ವಿಲಿಯಮ್ಸ್.

ಏಕದಿನ ತಂಡ: ಸುನಿಲ್ ಅಂಬ್ರಿಸ್, ಶಾಯ್ ಹೋಪ್, ಖೇರಿ ಪಿರ್ರೆ, ರಾಸ್ಟನ್ ಚೇಸ್, ಅಲ್ಜರಿ ಜೋಸೆಫ್, ಕೀರೊನ್ ಪೊಲಾರ್ಡ್​ (ನಾಯಕ), ಶೆಲ್ಡನ್ ಕಾಟ್ರೆಲ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೇರ್, ಎವಿನ್ ಲೆವಿಸ್, ರೊಮಾರಿಯೊ ಶೆಫೆರ್ಡ್​, ಜೇಸನ್ ಹೋಲ್ಡರ್, ಕೀಮೊ ಪೌಲ್, ಹೇಡನ್ ವಾಲ್ಶ್​​.
First published: