India vs West Indies: ಭಾರತ-ವಿಂಡೀಸ್ ಮಧ್ಯೆ ಇಂದು ಎರಡನೇ ಟಿ-20 ಪಂದ್ಯ

ಈಗಾಗಲೇ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶ ಪಡಿಸಿಕೊಳ್ಳಲಿದೆ.

Vinay Bhat | news18
Updated:August 4, 2019, 2:49 PM IST
India vs West Indies: ಭಾರತ-ವಿಂಡೀಸ್ ಮಧ್ಯೆ ಇಂದು ಎರಡನೇ ಟಿ-20 ಪಂದ್ಯ
ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ
  • News18
  • Last Updated: August 4, 2019, 2:49 PM IST
  • Share this:
ಬೆಂಗಳೂರು (ಆ. 04): ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಇಂದು ಎರಡನೇ ಪಂದ್ಯವನ್ನಾಡಲಿದೆ.

ಈಗಾಗಲೇ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಕೊಹ್ಲಿ ಪಡೆ ಮತ್ತೊಂದು ಜಯದ ವಿಶ್ವಾಸದಲ್ಲಿದೆ.

ಮೊದಲ ಟಿ-20ಯ ರೋಚಕ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದ ನಡುವೆ ಕೊನೆಗೂ ಭಾರತ ಗೆದ್ದು ಬೀಗಿತ್ತು. 96 ರನ್ ಕಲೆಹಾಕಲು ಪರದಾಡಿದ ಭಾರತೀಯ ಬ್ಯಾಟ್ಸ್​ಮನ್​ಗಳು 6 ವಿಕೆಟ್​ಗಳನ್ನು ಕೈ ಚೆಲ್ಲಿತ್ತು. ಹೀಗಾಗಿ ಬ್ಯಾಟಿಂಗ್​ ವಿಭಾಗದಲ್ಲಿ ಪ್ರಮುಖ ಬದಲಾವಣೆಯನ್ನು ಇಂದಿನ ಪಂದ್ಯದಲ್ಲಿ ನಿರೀಕ್ಷಿಸಲಾಗಿದೆ.

ಬೌಲಿಂಗ್ ವಿಭಾಗದಲ್ಲಿ ಭಾರತ ಬಲಿಷ್ಠವಾಗಿದೆ. ಮೊದಲ ಅಂತರಾಷ್ಟ್ರೀಯ ಪಂದ್ಯದಲ್ಲೇ ಶೈನ್ ಆಗಿರುವ ನವ್​ದೀಪ್ ಸೈನಿ 3 ವಿಕೆಟ್ ಕಿತ್ತು ಮಿಂಚಿದ್ದರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡಿದ್ದರು. ಭುವನೇಶ್ವರ್ ಕುಮಾರ್ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ವಾಷಿಂಗ್ಟನ್ ಸುಂದರ್ ಹಾಗೂ ಖಲೀಲ್ ಅಹ್ಮದ್​ ಪರಿಣಾಮಕಾರಿಯಾಗಿ ಗೋಚರಿಸಿಲ್ಲ. ಹೀಗಾಗಿ ಇವರನ್ನು ಕೈ ಬಿಡುವ ಅಂದಾಜಿದೆ.

India Vs West Indies: ಮೊದಲ ಟಿ-20ಯಲ್ಲಿ ಜಯ ಸಾಧಿಸಿದ ಟೀಂ ಇಂಡಿಯಾ; ಇಲ್ಲಿವೆ ಚಿತ್ರಗಳು

ಇತ್ತ ವಿಂಡೀಸ್ ಕೂಡ ಬೌಲಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಶೆಲ್ಡನ್ ಕಟ್ರೆಲ್ ಹಾಗು ಸುನೀಲ್ ನರೈನ್ ಫಾರ್ಮ್​ನಲ್ಲಿದ್ದಾರೆ. ಕೀರೊನ್ ಪೊಲ್ಲಾರ್ಡ್​​ 49 ರನ್ ಬಾರಿಸಿ ಬ್ಯಾಟಿಂಗ್​ನಲ್ಲಿ ಮಿಂಚಿದ್ದರು. ಆದರೆ, ಉಳಿದ ಬ್ಯಾಟ್ಸ್​ಮನ್​ಗಳು ವಿಫಲರಾಗಿದ್ದು, ಎಚ್ಚರಿಕೆಯಿಂದ ಆಡುವ ಗುರಿ ಹೊಂದಿದ್ದಾರೆ.

ಈಗಾಗಲೇ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಭಾರತ 1-0 ಮುನ್ನಡೆ ಸಾಧಿಸಿದ್ದು, ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶ ಪಡಿಸಿಕೊಳ್ಳಲಿದೆ. ಇತ್ತ ಕೆರಿಬಿಯನ್ನರಿಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಆಗಿದ್ದು, ಗೆಲ್ಲ ಬೇಕಾದ ಒತ್ತಡದಲ್ಲಿದೆ. ಹೀಗಾಗಿ ಪ್ಲೋರಿಡಾದಲ್ಲಿ ಹೈವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

ಮೊದಲ ಟಿ-20 ಪಂದ್ಯ ಹೈಲೇಟ್ಸ್​​, ಇಲ್ಲಿದೆ ವಿಡಿಯೋ:

First published:August 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading