IND vs WI: ನಾಳೆ ನಿರ್ಣಾಯಕ ಫೈಟ್: ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ; ಹೊಸ ಆಟಗಾರನಿಗೆ ಮಣೆ?

ಈ ಪಂದ್ಯದಲ್ಲಿ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರ 22 ವರ್ಷಗಳ ಹಳೆಯ ದಾಖಲೆ ಯೊಂದನ್ನು ಮುರಿಯಲು ರೋಹಿತ್​​ಗಿನ್ನು ಕೇವಲ 9 ರನ್ ಅಗತ್ಯವಿದೆ.

Vinay Bhat | news18-kannada
Updated:December 21, 2019, 1:02 PM IST
IND vs WI: ನಾಳೆ ನಿರ್ಣಾಯಕ ಫೈಟ್: ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆ; ಹೊಸ ಆಟಗಾರನಿಗೆ ಮಣೆ?
ಭಾರತ vs ವೆಸ್ಟ್​ ಇಂಡೀಸ್
  • Share this:
ಬೆಂಗಳೂರು (ಡಿ. 21): ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವೆ ನಾಳೆ (ಡಿ. 22) ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಕಟಕ್​ನಲ್ಲಿ ನಡೆಯಲಿದೆ. ಈಗಾಗಲೇ ಸರಣಿ ಸಮಬಲಗೊಂಡಿರುವ ಕಾರಣ ಈ ಪಂದ್ಯ ನಿರ್ಣಾಯಕವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ಉಭಯ ತಂಡಗಳು ಭುವನೇಶ್ವರಕ್ಕೆ ಬಂದಿಳಿದಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಆದರೆ, ಟೀಂ ಇಂಡಿಯಾಕ್ಕೆ ಆಘಾತ ಉಂಟಾಗಿದ್ದು, ವೇಗಿ ದೀಪಕ್ ಚಹಾರ್ ಇಂಜುರಿಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇವರ ಬದಲು ನವ್​ದೀಪ್ ಸೈನಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.

 


ಆರ್​ಸಿಬಿ ತಂಡದಲ್ಲಿ 9 ಬ್ಯಾಟ್ಸ್​ಮನ್​, 4 ಆಲ್ರೌಂಡರ್, 8 ಬೌಲರ್​ಗಳು; ಪ್ಲೇಯಿಂಗ್ XI ನಲ್ಲಿ ಯಾರೆಲ್ಲ?

ವಿಂಡೀಸ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಚಹಾರ್ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಆಡಿದ ಎರಡು ಪಂದ್ಯಗಳಲ್ಲಿ ಚಹಾರ್ ಕೇವಲ 1 ವಿಕೆಟ್ ಅಷ್ಟೆ ಪಡೆದಿದ್ದರು. ಅಲ್ಲದೆ ಫೀಲ್ಡಿಂಗ್​ನಲ್ಲಿ ಅನೇಕ ಕ್ಯಾಚ್ ಕೈಚೆಲ್ಲಿದ್ದರು. ಇತ್ತ ಸೈನಿಗೆ ಇದು ಪದಾರ್ಪಣೆಯ ಪಂದ್ಯವಾಗುತ್ತ ನೋಡಬೇಕಿದೆ.

ಬ್ಯಾಟಿಂಗ್​ನಲ್ಲಿ ಭಾರತ ಬಲಿಷ್ಠವಾಗಿದೆ. ರೋಹಿತ್- ರಾಹುಲ್ ಉತ್ತಮ ಆರಂಭ ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಲು ಸ್ಫೋಟಕ ಆಟಗಾರರು ಕಾದುಕುಳಿತಿದ್ದಾರೆ. ಬೌಲಿಂಗ್ ವಿಭಾಗ ಭಾರತಕ್ಕೆ ದೊಡ್ಡ ಚಿಂತೆಯಾಗಿದೆ.

 IPL 2020: ಐಪಿಎಲ್ 13ನೇ ಆವೃತ್ತಿ ಯಾವಾಗ ಪ್ರಾರಂಭ..?; ಇಲ್ಲಿದೆ ಮಾಹಿತಿ

ಕಳೆದ ಪಂದ್ಯದಲ್ಲಿ ಆಲ್ರೌಂಡರ್ ಶಿವಂ ದುಬೆ ಅವರನ್ನು ಕೈಬಿಟ್ಟು ಶಾರ್ದೂಲ್ ಠಾಕೂರ್​ಗೆ ಸ್ಥಾನ ನೀಡಲಾಗಿತ್ತು. ಆದರೆ, ಯಾವುದೆ ಪ್ರಯೋಜನವಾಗಿಲ್ಲ. ಹೀಗಾಗಿ ಚಹಾರ್ ಬದಲು ಸೈನಿ ತಂಡ ಸೇರಿಕೊಂಡರೆ, ಠಾಕೂರ್ ಬದಲು ಯಜುವೇಂದ್ರ ಚಹಾಲ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇತ್ತ ವೆಸ್ಟ್​ ಇಂಡೀಸ್​ಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಟಿ-20 ಸರಣಿಯಲ್ಲಿ ಸೋತ ಸೇಡನ್ನು ಏಕದಿನದಲ್ಲಾದರು ತೀರಿಸಿಕೊಳ್ಳಲು ಪೊಲಾರ್ಡ್​ ಪಡೆ ಹಾತೊರೆಯುತ್ತಿದೆ. ಹೀಗಾಗಿ ನಾಳೆ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಇನ್ನು ಈ ಪಂದ್ಯದಲ್ಲಿ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರ 22 ವರ್ಷಗಳ ಹಳೆಯ ದಾಖಲೆ ಯೊಂದನ್ನು ಮುರಿಯಲು ರೋಹಿತ್​​ಗಿನ್ನು ಕೇವಲ 9 ರನ್ ಅಗತ್ಯವಿದೆ.

ಜಯಸೂರ್ಯ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಆರಂಭಿಕ ಆಟಗಾರನಾಗಿದ್ದಾರೆ. 2019ರಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ರೋಹಿತ್ ಈ ತನಕ 2,379 ರನ್ ಗಳಿಸಿದ್ದಾರೆ. 1997ರಲ್ಲಿ 2,387 ರನ್ ಗಳಿಸಿದ್ದ ಸನತ್ ಜಯಸೂರ್ಯ ಅವರ ದಾಖಲೆ ಮುರಿಯುವತ್ತ ಸದ್ಯ ಹಿಟ್​ಮ್ಯಾನ್​​ ಹೆಜ್ಜೆ ಇಟ್ಟಿದ್ದಾರೆ.

10.75 ಕೋಟಿಗೆ ಹರಾಜಾದ ಬೆನ್ನಲ್ಲೆ ಅಬ್ಬರಿಸಿದ ಮ್ಯಾಕ್ಸ್​ವೆಲ್; 39 ಎಸೆತಗಳಲ್ಲಿ ಸಿಡಿಸಿದ ರನ್ ಎಷ್ಟು ಗೊತ್ತಾ?

ಎರಡನೇ ಏಕದಿನದಲ್ಲಿ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ್ದ ಕುಲ್ದೀಪ್ ಯಾದವ್ ಇನ್ನೊಂದು ವಿಕೆಟ್ ಕಿತ್ತರೆ ಏಕದಿನ ಕ್ರಿಕೆಟ್​ನಲ್ಲಿ 100 ವಿಕೆಟ್ ಪಡೆದ 22ನೇ ಟೀಂ ಇಂಡಿಯಾ ಆಟಗಾರ ಎನಿನಿಕೊಳ್ಳಲಿದ್ದಾರೆ. ಅಲ್ಲದೆ 8ನೇ ಭಾರತೀಯ ಸ್ಪಿನ್ನರ್ ಎಂಬ ಸಾಧನೆ ಮಾಡಲಿದ್ದಾರೆ.

First published:December 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ