IND vs WI: ಟಿ-20 ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದ ಕಿಂಗ್ ಕೊಹ್ಲಿ!

ತಿರುವನಂತಪುರ ಗ್ರೀನ್​ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಶಿವಂ ದುಬೆ ಆಕರ್ಷಕ ಅರ್ಧಶತಕ ಹಾಗೂ ರಿಷಭ್ ಪಂತ್ ಸಮಯೋಚಿತ ಆಟದ ನೆರವಿನಿಂದ ವಿಂಡೀಸ್​ಗೆ ಗೆಲ್ಲಲು 171 ರನ್​ಗಳ ಟಾರ್ಗೆಟ್ ನೀಡಿದೆ.

ಭಾರತ ನಿನ್ನೆ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು.

ಭಾರತ ನಿನ್ನೆ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು.

  • Share this:
ಬೆಂಗಳೂರು (ಡಿ. 08): ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಶಿವಂ ದುಬೆ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್​ನಲ್ಲಿ 170 ರನ್ ಕಲೆಹಾಕಿದೆ. ಈ ಮೂಲಕ ಎದುರಾಳಿಗೆ ಸವಾಲಿನ ಟಾರ್ಗೆಟ್ ನೀಡಿದೆ.

ಈ ನಡುವೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದಿದ್ದಾರೆ. 73 ಪಂದ್ಯಗಳಲ್ಲಿ ಕೊಹ್ಲಿ ಒಟ್ಟು 2544 ರನ್ ಕಲೆಹಾಕಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್​ಮನ್​ ಎಂದ ಖ್ಯಾತಿಗೆ ಪಾತ್ರರಾಗಿದ್ದಾರೆ.

India vs West Indies Live Score: 171 ಟಾರ್ಗೆಟ್; ವೆಸ್ಟ್​ ಇಂಡೀಸ್ ಭರ್ಜರಿ ಆರಂಭ

ಇದಕ್ಕೂ ಮುನ್ನ ಭಾರತದವರೇ ಆದ ರೋಹಿತ್ ಶರ್ಮಾ 2,547 ರನ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರು. ಪಂದ್ಯ ಆರಂಭಕ್ಕೂ ಮುನ್ನ ರೋಹಿತ್ ಅವರ ಈ ಸಾಧನೆ ಮುರಿಯಲು ಕೊಹ್ಲಿಗೆ 3 ರನ್​ಗಳ ಅವಶ್ಯಕತೆಯಿತ್ತು. ಇಂದಿನ ಪಂದ್ಯದಲ್ಲಿ ಕೊಹ್ಲಿ 17 ಎಸೆತಗಳಲ್ಲಿ 19 ರನ್ ಬಾರಿಸಿ ಹೊಸ ದಾಖಲೆ ಬರೆದರು.

ಮುಂಬರುವ ಅಂತಿಮ ಟಿ-20ಯಲ್ಲಿ ಕೊಹ್ಲಿ 3 ರನ್ ಗಳಿಸಿದರೆ ತವರಿನ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾಗಲಿದ್ದಾರೆ. ಇನ್ನು ರೋಹಿತ್ ಶರ್ಮಾ ಇನ್ನೊಂದು ಸಿಕ್ಸರ್ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ಸಿಕ್ಸರ್ ದಾಖಲಿಸಿದ ವಿಶ್ವದ 3ನೇ ಹಾಗೂ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಈ ದಾಖಲೆಗಾಗಿ ಇವರಿಬ್ಬರು ಮುಂದಿನ ಪಂದ್ಯದವರೆಗೆ ಕಾಯಬೇಕು.

IND vs WI: ಅದ್ದೂರಿ ಸ್ವಾಗತ ಕೋರಿದ್ದೇ ಬಂತು; ತವರಿನಲ್ಲೂ ಸ್ಯಾಮ್ಸನ್​ಗೆ ಸಿಗದ ಅವಕಾಶ

ತಿರುವನಂತಪುರ ಗ್ರೀನ್​ಫೀಲ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಶಿವಂ ದುಬೆ ಆಕರ್ಷಕ ಅರ್ಧಶತಕ ಹಾಗೂ ರಿಷಭ್ ಪಂತ್ ಸಮಯೋಚಿತ ಆಟದ ನೆರವಿನಿಂದ ವಿಂಡೀಸ್​ಗೆ ಗೆಲ್ಲಲು 171 ರನ್​ಗಳ ಟಾರ್ಗೆಟ್ ನೀಡಿದೆ.

ಶಿವಂ ದುಬೆ ಕೇವಲ 30 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಿಡಿಸಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ 54 ರನ್ ಗಳಿಸಿದರು. ಪಂತ್ 22 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿ ಅಜೇಯ 33 ರನ್ ಬಾರಿಸಿದರು.

First published: