IND vs WI: ಕೊಹ್ಲಿ 2ನೇ ಟೆಸ್ಟ್​ ಗೆದ್ದರೆ ಭಾರತೀಯ ಕ್ರಿಕೆಟ್​​ನಲ್ಲೇ ಸೃಷ್ಟಿಯಾಗಲಿದೆ ವಿನೂತನ ದಾಖಲೆ!

ನಾಯಕನಾಗಿ ಟೆಸ್ಟ್​​ ಕ್ರಿಕೆಟ್​ನಲ್ಲಿ ಕೊಹ್ಲಿ ನೂತನ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ವಿಂಡೀಸ್ ವಿರುದ್ಧದ 2ನೇ ಟೆಸ್ಟ್​​ನಲ್ಲೂ ಜಯ ಸಾಧಿಸಿದರೆ ಭಾರತ ಪರ ಅತೀ ಹೆಚ್ಚು ಟೆಸ್ಟ್​ ಪಂದ್ಯ ಗೆದ್ದ ನಾಯಕ ಎಂಬ ಸಾಧನೆ ಮಾಡಲಿದ್ದಾರೆ.

Vinay Bhat | news18-kannada
Updated:August 29, 2019, 3:29 PM IST
IND vs WI: ಕೊಹ್ಲಿ 2ನೇ ಟೆಸ್ಟ್​ ಗೆದ್ದರೆ ಭಾರತೀಯ ಕ್ರಿಕೆಟ್​​ನಲ್ಲೇ ಸೃಷ್ಟಿಯಾಗಲಿದೆ ವಿನೂತನ ದಾಖಲೆ!
ವಿರಾಟ್ ಕೊಹ್ಲಿ 7 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
  • Share this:
ಬೆಂಗಳೂರು (ಆ. 29): ನಾಳೆಯಿಂದ ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವೆ ಎರಡನೇ ಟೆಸ್ಟ್​ ಪ್ರಾರಂಭವಾಗಲಿದೆ. ಈಗಾಗಲೇ ಮೊದಲ ಟೆಸ್ಟ್​​ನಲ್ಲಿ 318 ರನ್​ಗಳಿಂದ ಗೆದ್ದು ಬೀಗಿದ್ದ ಕೊಹ್ಲಿ ಪಡೆ, ಮತ್ತೊಂದು ಜಯದ ವಿಶ್ವಾಸದಲ್ಲಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಶುಭಾರಂಭ ಮಾಡಿರುವ ಟೀಂ ಇಂಡಿಯಾಕ್ಕೆ ಈ ಪಂದ್ಯ ಮುಖ್ಯವಾಗಿದೆ. ಜೊತೆಗೆ ನಾಯಕ ವಿರಾಟ್ ಕೊಹ್ಲಿಗೂ ಗೆಲುವು ಅನಿವಾರ್ಯವಾಗಿದೆ.

ಮೊದಲ ಟೆಸ್ಟ್​ನಲ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆಯನ್ನ ಕೊಹ್ಲಿ ಮುರಿದಿದ್ದರು. ನಾಯಕನಾಗಿ ಕೊಹ್ಲಿ ವಿದೇಶದಲ್ಲಿ ಒಟ್ಟು 26 ಟೆಸ್ಟ್​ ಪಂದ್ಯಗಳಲ್ಲಿ 12 ರಲ್ಲಿ ಗೆಲುವು ತಂದುಕೊಡುವ ಮೂಲಕ ವಿದೇಶದಲ್ಲಿ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದ ನಾಯಕ ಎಂಬ ದಾಖಲೆ ಬರೆದಿದ್ದರು. ಗಂಗೂಲಿ ವಿದೇಶದಲ್ಲಿ 18 ಟೆಸ್ಟ್​ ಪಂದ್ಯಗಳನ್ನು ಮುನ್ನಡೆಸಿ 11 ಗೆಲುವು ಸಾಧಿಸಿದ್ದರು.

India vs West Indies: Virat Kohli set to surpass MS Dhoni, on verge of breaking Indian cricket’s biggest records
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)


ವಿಂಡೀಸ್ ಸರಣಿ ಬೆನ್ನಲ್ಲೆ ಭಾರತಕ್ಕಿದೆ ದೊಡ್ಡ ಸವಾಲು; ಆಫ್ರಿಕಾ ವಿರುದ್ಧದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

ಸದ್ಯ ನಾಯಕನಾಗಿ ಟೆಸ್ಟ್​​ ಕ್ರಿಕೆಟ್​ನಲ್ಲಿ ಕೊಹ್ಲಿ ಮತ್ತೊಂದು ನೂತನ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ವಿಂಡೀಸ್ ವಿರುದ್ಧದ 2ನೇ ಟೆಸ್ಟ್​​ನಲ್ಲೂ ಜಯ ಸಾಧಿಸಿದರೆ ಭಾರತ ಪರ ಅತೀ ಹೆಚ್ಚು ಟೆಸ್ಟ್​ ಪಂದ್ಯ ಗೆದ್ದ ನಾಯಕ ಎಂಬ ಬಹುದೊಡ್ಡ ಸಾಧನೆ ಮಾಡಲಿದ್ದಾರೆ.

India vs West Indies: Virat Kohli set to surpass MS Dhoni, on verge of breaking Indian cricket’s biggest records

ಎಂ ಎಸ್ ಧೋನಿ 60 ಟೆಸ್ಟ್​ ಪಂದ್ಯಗಳಲ್ಲಿ 27 ಪಂದ್ಯ ಗೆದ್ದು ಮೊದಲ ಸ್ಥಾನದಲ್ಲಿ ಯಶಸ್ವಿ ಟೆಸ್ಟ್​​ ನಾಯಕನಾಗಿದ್ದಾರೆ. ಕೊಹ್ಲಿ ಕೂಡ ಇದೇ ಕ್ರಮಾಂಕದಲ್ಲಿದ್ದು, ಈ ಟೆಸ್ಟ್​ ಗೆದ್ದರೆ ಭಾರತದ ಶ್ರೇಷ್ಠ ಟೆಸ್ಟ್​ ನಾಯಕ ಎಂಬ ಪಟ್ಟ ಕೊಹ್ಲಿಗೆ ಸಿಗಲಿದೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading