ಕ್ರೀಸ್ ಕಚ್ಚಿ ನಿಂತಿದ್ದ ವಿಂಡೀಸ್ ಆಟಗಾರನನ್ನು ಕೊಹ್ಲಿ ಪೆವಿಲಿಯನ್​ಗೆ ಅಟ್ಟಿದ್ದು ಈಗ ವೈರಲ್!

ಕೊಹ್ಲಿ ಮಾಡಿದ ಆ ಒಂದು ರನೌಟ್ ಭಾರತ ಬಹುಬೇಗನೆ ಪಂದ್ಯ ಗೆಲ್ಲಲು ಪ್ರಮುಖ ಕಾರಣವಾಯಿತು. 257 ರನ್​ಗಳ ಗೆಲುವಿನೊಂದಿಗೆ ಭಾರತ ಎರಡೂ ಟೆಸ್ಟ್​ಗಳಲ್ಲಿ ದೊಡ್ಡ ಅಂತರದ ಜಯ ಸಾಧಿಸಿತು.

ವಿರಾಟ್ ಕೊಹ್ಲಿ ರನೌಟ್ ಮಾಡುತ್ತಿರುವ ಫೋಟೋ

ವಿರಾಟ್ ಕೊಹ್ಲಿ ರನೌಟ್ ಮಾಡುತ್ತಿರುವ ಫೋಟೋ

  • Share this:
ಬೆಂಗಳೂರು (ಸೆ. 03): ವೆಸ್ಟ್​ ಇಂಡೀಸ್ ವಿರುದ್ದದ 2ನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ 257 ರನ್​ಗಳಿಂದ ಗೆದ್ದು ಬೀಗಿ ನಾವೇ ಬಲಿಷ್ಠ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದೆ. ಜೊತೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಭರ್ಜರಿ ಆರಂಭ ಪಡೆದಿದ್ದು, ನಂಬರ್ 1 ಸ್ಥಾನಕ್ಕೇರಿದೆ.

ಭಾರತ ಎರಡನೇ ಟೆಸ್ಟ್​ ಗೆಲ್ಲಲು ಬೌಲರ್​ಗಳ ಜೊತೆ ವಿರಾಟ್ ಕೊಹ್ಲಿ ಮಾಡಿದ ಆ ಒಂದು ರನೌಟ್ ಪ್ರಮುಖ ಕಾರಣ. ಕ್ರೀಸ್​ ಕಚ್ಚಿ ಆಡುತ್ತಿದ್ದ ಆಟಗಾರನನ್ನು ಕೊಹ್ಲಿ ಪೆವಿಲಿಯನ್​ಗೆ ಅಟ್ಟಿದ್ದೆ ಪಂದ್ಯದ ದೊಡ್ಡ ತಿರುವಾಯಿತು.

ತಂಡದ ಗೆಲುವಿಗಾಗಿ ಎಚ್ಚರಿಕೆಯಿಂದ ಆಟ ಪ್ರದರ್ಶಿಸುತ್ತಿದ್ದ ಶರ್ಮರ್ ಬ್ರೂಕ್ಸ್​​​ ಅದಾಗಲೇ ಅರ್ಧಶತಕ ಪೂರೈಸಿದ್ದರು. 54ನೇ ಓವರ್ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ತನ್ನ 2ನೇ ಎಸೆತ ಹಾಕಿದರು. ಬ್ರೂಕ್ಸ್​ ಬ್ಯಾಟ್ ಟಚ್ ಮಾಡಿ ಸಿಂಗಲ್ ರನ್​ ಕಲೆಹಾಕಲು ಕ್ರೀಸ್ ಬಿಟ್ಟು ತೆರಳಿದರು. ಇದನ್ನ ಗಮನಿಸಿದ ಕೊಹ್ಲಿ ತಕ್ಷಣವೆ ಬಾಲ್ ತೆಗದುಕೊಂಡು ವಿಕೆಟ್​ಗೆ ನೇರವಾಗಿ ಹೊಡೆದಿದ್ದಾರೆ.

ಈ ಬಾರಿ ಕೊಹ್ಲಿ ಕಡೆಯಿಂದ ಸೃಷ್ಟಿಯಾಗಿದ್ದು ಅಂತಿಂಥ ದಾಖಲೆಯಲ್ಲ; ಏನದು ಗೊತ್ತಾ..?

ಕೂದಲೆಳೆಯಿಂದ ಪಾರಾಗಲು ವಿಫಲವಾದ ಬ್ರೂಕ್ಸ್​, ಕೊಹ್ಲಿ ಮಾಡಿದ ರನೌಟ್​ನಿಂದಾಗಿ 50 ರನ್​ಗೆ ನಿರ್ಗಮಿಸಬೇಕಾಯಿತು. ಇಲ್ಲಿಂದ ವಿಂಡೀಸ್ ವಿಕೆಟ್​ಗಳು ಪತನಗೊಳ್ಳುತ್ತಾ ಸಾಗಿದವು. ಅಂತಿಮವಾಗಿ ಕೆರಿಬಿಯನ್ನರು 210 ರನ್​ಗೆ ಆಲೌಟ್ ಆದರು.

 ಕೊಹ್ಲಿ ಮಾಡಿದ ರನೌಟ್ ಭಾರತ ಬಹುಬೇಗನೆ ಪಂದ್ಯ ಗೆಲ್ಲಲು ಪ್ರಮುಖ ಕಾರಣವಾಯಿತು. 257 ರನ್​ಗಳ ಗೆಲುವಿನೊಂದಿಗೆ ಭಾರತ ಎರಡೂ ಟೆಸ್ಟ್​ಗಳಲ್ಲಿ ದೊಡ್ಡ ಅಂತರದ ಜಯ ಸಾಧಿಸಿತು. ಅಲ್ಲದೆ ಕೊಹ್ಲಿ, ಧೋನಿ ದಾಖಲೆಯನ್ನು ಮುರಿದಿದ್ದು, ಅತ್ಯಧಿಕ 28 ಟೆಸ್ಟ್ ಗೆಲುವಿನೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಬಿರುದಿಗೆ ಪಾತ್ರರಾದರು.

First published: