ಟಿ-20 ಕ್ರಿಕೆಟ್​ನಲ್ಲಿ ತಾನೂ ದಾಖಲೆ ಬರೆದು ಭಾರತವನ್ನೂ ದಾಖಲೆಯ ಪುಟ ಸೇರಿಸಿದ ಕಿಂಗ್ ಕೊಹ್ಲಿ!

Virat Kohli: ಇದಿಷ್ಟೇ ಅಲ್ಲದೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಆಟಗಾರ ಎಂಬ ಸಾಧನೆಯನ್ನೂ ಕೊಹ್ಲಿ ಮಾಡಿದ್ದಾರೆ. 12 ಬಾರಿ ಕೊಹ್ಲಿ ಪಂದ್ಯಶ್ರೇಷ್ಠ ಬಾಜಿಕೊಂಡಿದ್ದಾರೆ.

ಈ ವರ್ಷದ ಕೊನೆಯ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲೂ ವಿರಾಟ್ ಕೊಹ್ಲಿ ಅಗ್ರಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 887 ಅಂಕದೊಂದಿಗೆ ಕಿಂಗ್ ಕೊಹ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ.

ಈ ವರ್ಷದ ಕೊನೆಯ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲೂ ವಿರಾಟ್ ಕೊಹ್ಲಿ ಅಗ್ರಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 887 ಅಂಕದೊಂದಿಗೆ ಕಿಂಗ್ ಕೊಹ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ.

  • Share this:
ಬೆಂಗಳೂರು (ಡಿ. 07): ವೆಸ್ಟ್​ ಇಂಡೀಸ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯ ನಿಜಕ್ಕೂ ರೋಚಕ. ಕ್ಯಾಪ್ಟನ್ ಕೊಹ್ಲಿಯ ವಿರಾಟ ಪ್ರದರ್ಶನದ ಮುಂದೆ ತಲೆಬಾಗಿದ ವೆಸ್ಟ್ ಇಂಡೀಸ್ ತಂಡ, ಭಾರತ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಕೊಹ್ಲಿ ಆರ್ಭಟಕ್ಕೆ ಬ್ರೇಕ್ ಹಾಕಲು ಎಷ್ಟೇ ಪ್ರಯತ್ನಪಟ್ಟರು ಕೆರಿಬಿಯನ್ ಬೌಲರ್​​ಗಳು ವಿಫಲರಾದರು. ಕ್ರೀಸ್ ಕಚ್ಚಿ ಆಟವಾಡಿದ ಕೊಹ್ಲಿ ಹೈದರಾಬಾದ್​​ನ ರಾಜೀವ್ ಗಾಂಧಿ ಕ್ರೀಡಾಂಗಣದ ಮೂಲೆಮೂಲೆಗೆ ಬೌಂಡರಿ- ಸಿಕ್ಸರ್ ಮೂಲಕ ಚೆಂಡನ್ನು ಅಟ್ಟಿದರು. 50 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಬಾರಿಸಿ ಅಜೇಯ 94 ರನ್ ಚಚ್ಚಿದರು.

 IND vs WI: ಹೈದರಾಬಾದ್​ನಲ್ಲಿ ವಿರಾಟ್ ಪವರ್, ರಾಹುಲ್ ಆರ್ಭಟ; ಭಾರತಕ್ಕೆ ಅಮೋಘ ಜಯ

ಈ ಮೂಲಕ ಕೊಹ್ಲಿ ಟೀಂ ಇಂಡಿಯಾವನ್ನು ಗೆಲ್ಲಿಸಿಕೊಟ್ಟು ನೂತನ ದಾಖಲೆ ಬರೆದರೆ, ಭಾರತವನ್ನೂ ದಾಖಲೆಯ ಪುಟ ಸೇರಿಸಿದರು. ಕೊಹ್ಲಿ ಅಜೇಯ 94 ರನ್ ಕಲೆಹಾಕಿದ್ದು ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಗಳಿಸಿದ ಗರಿಷ್ಠ ರನ್ ಆಗಿದೆ. ಇದಕ್ಕೂ ಮುನ್ನ 2016 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 90 ರನ್ ಸಿಡಿಸಿದ್ದು ಇವರ ಗರಿಷ್ಠ ಮೊತ್ತವಾಗಿತ್ತು.

ಇದಿಷ್ಟೇ ಅಲ್ಲದೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಆಟಗಾರ ಎಂಬ ಸಾಧನೆಯನ್ನೂ ಕೊಹ್ಲಿ ಮಾಡಿದ್ದಾರೆ. 12 ಬಾರಿ ಕೊಹ್ಲಿ ಪಂದ್ಯಶ್ರೇಷ್ಠ ಬಾಜಿಕೊಂಡಿದ್ದಾರೆ.

ಇದಲ್ಲದೆ ಭಾರತ 208 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ್ದು ಇದೇ ಮೊದಲು. ದೊಡ್ಡ ಮೊತ್ತ ಚೇಸ್ ಮಾಡಿ ಭಾರತ ಗೆಲುವು ಸಾಧಿಸಿದ್ದು ಇದಾಗಿದೆ. ಇದಕ್ಕೂ ಮೊದಲು 2009 ರಲ್ಲಿ ಶ್ರೀಲಂಕಾ ವಿರುದ್ಧ ಭಾರತ 207 ರನ್ ಟಾರ್ಗೆಟ್ ಬೆನ್ನಟ್ಟಿ ಜಯ ಸಾಧಿಸಿತ್ತು.

 ಟೀಂ ಇಂಡಿಯಾಕ್ಕೊಬ್ಬರೇ ಧೋನಿ; ಪಂತ್ ವಿರುದ್ಧದ ಟೀಕೆಗಳು ಒಳ್ಳೆಯದೇ ಎಂದ ಗಂಗೂಲಿ

ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ವೆಸ್ಟ್​ ಇಂಡೀಸ್ ಶಿಮ್ರೋನ್ ಹೆಟ್ಮೇರ್ ಅವರ 56, ಎವಿನ್ ಲೆವಿಸ್​ರ 40 ಹಾಗೂ ಕೀರೊನ್ ಪೊಲಾರ್ಡ್​ರ 37 ರನ್​ಗಳ ನೆರವಿನಿಂದ 20 ಓವರ್​​ನಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಿತು.

208 ಟಾರ್ಗೆಟ್ ಈ ಬೆನ್ನಟ್ಟಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತಾದರು, ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಶತಕದ ಜೊತೆಯಾಟ ಆಡಿ ತಂಡದ ಗೆಲುವನ್ನ ಸಮೀಪಿಸಿದರು. ರಾಹುಲ್ 40 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 62 ರನ್ ಗಳಿಸಿದರು.

ಕೊನೆಯಲ್ಲಿ ಕೊಹ್ಲಿ ಆರ್ಭಟಿಸಿ ಭಾರತ 6 ವಿಕೆಟ್​ಗಳ ಜಯ ಸಾಧಿಸುವಂತಾಯಿತು. ಅಲ್ಲದೆ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. 2ನೇ ಟಿ-20 ಕದನ ಭಾನುವಾರ (ಡಿ. 06) ತಿರುವನಂತಪುರಂನಲ್ಲಿ ನಡೆಯಲಿದೆ.

 First published: