MS Dhoni: ವಿಂಡೀಸ್ ಸರಣಿಯಲ್ಲಿ ಧೋನಿ ಕಣಕ್ಕೆ?; ಕುತೂಹಲ ಮೂಡಿಸಿದೆ ಕಿಂಗ್ ಕೊಹ್ಲಿಯ ಈ ಟ್ವೀಟ್!

ಏಕದಿನ ವಿಶ್ವಕಪ್ ಅಂತ್ಯಕಂಡ ಬಳಿಕ ಧೋನಿ ಕ್ರಿಕೆಟ್ ಆಡಲು ಮೈದಾನಕ್ಕಿಳಿಯಲಿಲ್ಲ. ಸುಮಾರು 4 ತಿಂಗಳು ಬಳಿಕ ಸದ್ಯ ಧೋನಿ ಅಭ್ಯಾಸಕ್ಕಾಗಿ ಮೈದಾನಕ್ಕಿಳಿದಿದ್ದಾರೆ.

ಇನ್ನು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ದಾಖಲೆ ಮೇಲೂ ಕೊಹ್ಲಿ ಕಣ್ಣಿಟ್ಟಿದ್ದಾರೆ.

ಇನ್ನು ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ದಾಖಲೆ ಮೇಲೂ ಕೊಹ್ಲಿ ಕಣ್ಣಿಟ್ಟಿದ್ದಾರೆ.

  • Share this:
ಬೆಂಗಳೂರು (ನ. 21): ಡಿಸೆಂಬರ್​ನಲ್ಲಿ ಆರಂಭವಾಗಲಿರುವ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಗೆ ಇಂದು ಟೀಂ ಇಂಡಿಯಾ ಪ್ರಕಟವಾಗಲಿದೆ. ಈಗಾಗಲೇ ರೋಹಿತ್ ಶರ್ಮಾ ಈ ಸರಣಿಯಿಂದ ವಿಶ್ರಾಂತಿ ಬಯಸಿದ್ದರೆ, ಶಿಖರ್ ಧವನ್ ಕಳಪೆ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಇಬ್ಬರು ಹೊಸ ಓಪನರ್​ಗಳು ಆಯ್ಕೆಯಾಗುವ ಅಂದಾಜಿದೆ.

ಈ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಡಿರುವ ಒಂದು ಟ್ವೀಟ್ ಭಾರೀ ಸದ್ದು ಮಾಡುತ್ತಿದೆ. ಅನೇಕ ತಿಂಗಳುಗಳಿಂದ ಕ್ರಿಕೆಟ್​ನಿಂದ ದೂರವಿರುವ ಎಂಎಸ್ ಧೋನಿ ವಿಂಡೀಸ್ ಸರಣಿ ಮೂಲಕ ಕಮ್​ಬ್ಯಾಕ್ ಮಾಡುತ್ತಾರ? ಎಂಬ ಪ್ರಶ್ನೆ ಹುಟ್ಟಿದೆ.

ಇಂದು ಭಾರತ ತಂಡ ಪ್ರಕಟ; ಇಬ್ಬರು ಹೊಸ ಓಪನರ್​ಗಳು ವಿಂಡೀಸ್ ವಿರುದ್ಧದ ಸರಣಿಗೆ?

ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಒಂದು ಹಂಚಿಕೊಂಡಿದ್ದು, "ಅಪರಾಧದಲ್ಲಿ ಪಾಲುದಾರರು, ಬೌಂಡರಿ ಬಳಿ ನಿಂತ ಫೀಲ್ಡರ್ಸ್​​ನಿಂದ ಡಬಲ್ಸ್ ಕದಿಯುವ ಅಪರಾಧ" ಎಂದು ಹೇಳಿದ್ದಾರೆ. ಈ ಫೋಟೋದಲ್ಲಿ ಧೋನಿ ಹಿಮ್ಮುಖವಾಗಿದ್ದು ಕೊಹ್ಲಿ ಜೊತೆ ಮಳೆಯ ನಡುವೆ ಅಭ್ಯಾಸದಲ್ಲಿ ತೊಡಗಿಕೊಂಡಿದ್ದು, "ಇವರು ಯಾರೆಂದು ಊಹಿಸಬಲ್ಲಿರ" ಎಂದು ಬರೆದುಕೊಂಡಿದ್ದಾರೆ.

 



ಕೊಹ್ಲಿ ಈ ಟ್ವಿಟ್ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ಕಮೆಂಟ್ ಬಂದಿದ್ದು, ಎಂಎಸ್ ಧೋನಿ ಎಂದು ಸುಲಭವಾಗಿ ಗುರುತಿಸಿದ್ದಾರೆ. ಇದೀಗ ಕೊಹ್ಲಿ ಮಾಡಿರುವ ಟ್ವೀಟ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇಂದು ವಿಂಡೀಸ್ ಸರಣಿಗೆ ಭಾರತ ತಂಡ ಆಯ್ಕೆಯಾಗಲಿದೆ. ಇದಕ್ಕೂ ಮುನ್ನ ಕೊಹ್ಲಿ ಈ ರೀತಿ ಟ್ವೀಟ್ ಮಾಡಿದ್ದು, ಧೋನಿ ವಿಂಡೀಸ್ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂಬ ಸೂಚನೆ ನೀಡಿದಂತಿದೆ.

ಕೊಹ್ಲಿ, ರಾಹುಲ್, ರೋಹಿತ್, ರೈನಾಗೆ ಈ ನಟಿಯರ ಮೇಲೆ ಪ್ಯಾರ್​ಗೆ ಆಗಿತ್ತಂತೆ..!

 





ಕೊಹ್ಲಿ ಹಾಗೂ ಧೋನಿ ಕೇವಲ ಮೈದಾನದಲ್ಲಷ್ಟೆ ಅಲ್ಲದೆ ಹೊರಗಡೆಯೂ ಉತ್ತಮ ಸ್ನೇಹಿತರಾಗಿದ್ದಾರೆ. ಕೊಹ್ಲಿ ತಮ್ಮ ಕ್ರಿಕೆಟ್ ಕೆರಿಯರ್ ಆರಂಭಿಸಿದಾಗ ಧೋನಿ ಇವರಿಗೆ ಬೆನ್ನೆಲುಬಾಗಿ ನಿಂತಿದ್ದದರು. ಧೋನಿ ಬಗ್ಗೆ ಕೊಹ್ಲಿ ಅಪಾರ ಪ್ರೀತಿ ಹಾಗೂ ಗೌರವ ಹೊಂದಿದ್ದಾರೆ.

ಏಕದಿನ ವಿಶ್ವಕಪ್ ಅಂತ್ಯಕಂಡ ಬಳಿಕ ಧೋನಿ ಕ್ರಿಕೆಟ್ ಆಡಲು ಮೈದಾನಕ್ಕಿಳಿಯಲಿಲ್ಲ. ಸುಮಾರು 4 ತಿಂಗಳು ಬಳಿಕ ಸದ್ಯ ಧೋನಿ ಅಭ್ಯಾಸಕ್ಕಾಗಿ ಮೈದಾನಕ್ಕಿಳಿದಿದ್ದಾರೆ. ಇದನ್ನೆಲ್ಲ ಗಮನಿಸಿದಾದ ಕೂಲ್ ಕ್ಯಾಪ್ಟನ್ ವಿಂಡೀಸ್ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂಬುದು ದಟ್ಟವಾಗಿದೆ. ಅಲ್ಲದೆ ರಿಷಭ್ ಪಂತ್ ಪದೇಪದೇ ವೈಫಲ್ಯ ಅನುಭವಿಸುತ್ತಿದ್ದು ಧೋನಿ ಅವಶ್ಯಕತೆ ಭಾರತಕ್ಕಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

 





First published: