ಪಂತ್ ಕ್ಯಾಚ್ ಬಿಟ್ಟಾಗ ಮತ್ತೆ ಧೋನಿ.. ಧೋನಿ ಕೂಗು; ಕೋಪಗೊಂಡ ಕೊಹ್ಲಿ ಮಾಡಿದ್ದೇನು ಗೊತ್ತಾ?

ಒಂದು ಕ್ಷಣ ಚೆಂಡು ಪಂತ್ ಕೈಯಲ್ಲಿ ಸೆರೆಯಾಗಿತ್ತಾದರು, ಅದನ್ನು ಸಂಪೂರ್ಣವಾಗಿ ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಂದರ್ಭ 17 ರನ್ ಗಳಿಸಿದ್ದ ಲೆವಿಸ್ ಬಳಿಕ 40 ರನ್ ಚಚ್ಚುವಂತಾಯಿತು.

Vinay Bhat | news18-kannada
Updated:December 9, 2019, 12:25 PM IST
ಪಂತ್ ಕ್ಯಾಚ್ ಬಿಟ್ಟಾಗ ಮತ್ತೆ ಧೋನಿ.. ಧೋನಿ ಕೂಗು; ಕೋಪಗೊಂಡ ಕೊಹ್ಲಿ ಮಾಡಿದ್ದೇನು ಗೊತ್ತಾ?
ವಿರಾಟ್ ಕೊಹ್ಲಿ, ಟೀಂ ಇಂಡಿಯಾ ನಾಯಕ
  • Share this:
ಬೆಂಗಳೂರು (ಡಿ. 09): ತಿರುವನಂತಪುರಂನ ಗ್ರೀನ್​ಫೀಲ್ಡ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿತು. ಭಾರತೀಯ ಬೌಲರ್​ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಂಡೀಸ್ ಬ್ಯಾಟ್ಸ್​ಮನ್​ಗಳು ಭರ್ಜರಿ ಜಯ ಸಾಧಿಸಿತು.

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಭಾರತ 8 ವಿಕೆಟ್​ಗಳ ಸೋಲು ಅನುಭವಿಸಿತು. ಗೆದ್ದ ವಿಂಡೀಸ್ ಸರಣಿ ಸಮಬಲ ಮಾಡಿಕೊಂಡಿದೆ. ಹೀಗಾಗಿ ಡಿ. 11 ರಂದು ಮುಂಬೈನಲ್ಲಿ ನಡೆಯಲಿರುವ ಅಂತಿಮ ಕದನ ನಿರ್ಣಾಯಕವಾಗಲಿದೆ.

ಟಿ-20 ಯಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿದರೆ ಸೋಲು ಖಚಿತ; ಯಾಕೆ ಗೊತ್ತಾ?

ಟೀಂ ಇಂಡಿಯಾ ಸೋಲಿಗೆ ಒಂದು ಕಾರಣ ಕಳಪೆ ಫೀಲ್ಡಿಂಗ್ ಕೂಡ ಹೌದು. ಅನೇಕ ಕ್ಯಾಚ್​ಗಳನ್ನು ಕೈಚೆಲ್ಲುವುದರ ಜೊತೆಗೆ ಮಿಸ್ ಫೀಲ್ಡ್​ನಿಂದ ರನ್ ಹರಿಯಬಿಟ್ಟರು. ಅದರಲ್ಲು ವಿಕೆಟ್ ಕೀಪರ್ ರಿಷಭ್ ಪಂತ್ ಬಿಟ್ಟ ಕ್ಯಾಚ್​ಗೆ​ ಭಾರೀ ಬೆಲೆತೆತ್ತ ಬೇಕಾಯಿತು.

ಭವನೇಶ್ವರ್ ಕುಮಾರ್ ಬೌಲಿಂಗ್​ನಲ್ಲಿ ಎವಿನ್ ಲೆವಿಸ್ ಕಟ್ ಶಾಟ್ ಹೊಡೆಯಲು ಯತ್ನಿಸಿದರು. ಚೆಂಡು ಬ್ಯಾಟ್​ನ ಎಡ್ಜ್​ಗೆ ತಾಗಿ ಕೀಪರ್ ಪಂತ್ ಬಳಿ ಬಂತು. ಆದರೆ, ಪಂತ್ ಇದನ್ನು ಕ್ಯಾಚ್ ಆಗಿ ಪರಿವರ್ತಿಸಲು ವಿಫಲರಾದರು.

ಒಂದು ಕ್ಷಣ ಚೆಂಡು ಪಂತ್ ಕೈಯಲ್ಲಿ ಸೆರೆಯಾಗಿತ್ತಾದರು, ಅದನ್ನು ಸಂಪೂರ್ಣವಾಗಿ ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಂದರ್ಭ 17 ರನ್ ಗಳಿಸಿದ್ದ ಲೆವಿಸ್ ಬಳಿಕ 40 ರನ್ ಚಚ್ಚುವಂತಾಯಿತು.

 


Virat Kohli: ಅನುಷ್ಕಾ ರೀತಿಯೇ ವಿರಾಟ್ ಕೊಹ್ಲಿಯನ್ನೂ ಟ್ರೋಲ್ ಮಾಡಿದ ನೆಟ್ಟಿಗರು!

ರಿಷಭ್ ಪಂತ್ ಕ್ಯಾಚ್ ಬಿಟ್ಟ ವೇಳೆ ಸ್ಟೇಡಿಯಂನಲ್ಲಿದ್ದ ಕೆಲವು ಪ್ರೇಕ್ಷಕರು ಧೋನಿ.. ಧೋನಿ ಎಂದು ಘೋಷಣೆ ಕೂಗಿದರು. ಇದರಿಂದ ಕೋಪಗೊಂಡ ಕೊಹ್ಲಿ, ಪ್ರೇಕ್ಷಕರತ್ತ ಕೈ ಸನ್ನೆ ಮೂಲಕ ಆರೀತಿ ಕೂಗಬೇಡಿ ಎಂದು ತಿಳಿಸಿದರು. ಈ ಬಗ್ಗೆ ಟ್ವಿಟ್ಟರ್​ನಲ್ಲಿ ಸಾಕಷ್ಟು ಟ್ವೀಟ್​ಗಳು ಹರಿದಾಡುತ್ತಿದೆ.

 ಟೀಂ ಇಂಡಿಯಾ ಓಪವರ್​ಗಳಾದ ಕೆ ಎಲ್ ರಾಹುಲ್(11) ಮತ್ತು ರೋಹಿತ್ ಶರ್ಮಾ(15) ಆರಂಭದಲ್ಲೇ ವೈಫಲ್ಯ ಅನುಭವಿಸಿದರು. ಆದರೆ, ಅಚ್ಚರಿ ಎಂದರೆೆ 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲು ಶಿವಂ ದುಬೆ ಕಣಕ್ಕಿಳಿದಿದ್ದು. ಸೂಕ್ತ ಸಮಯದಲ್ಲಿ ತಂಡಕ್ಕೆ ಬೇಕಾದ ಆಟವಾಡಿದ ದುಬೆ 30 ಎಸೆತಗಳಲ್ಲಿ 54 ರನ್ ಚಚ್ಚಿದರು. ವಿರಾಟ್ ಕೊಹ್ಲಿ(19) ಬೇಗನೆ ನಿರ್ಗಮಿಸಿದರೆ, ರಿಷಭ್ ಪಂತ್(33) ಅಜೇಯ ಆಟ ತಂಡದ ರನ್ ಗತಿ ಏರಿಸಿತು. ಭಾರತ 20 ಓವರ್​ಗೆ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು.

ಭಾರತ vs ವೆಸ್ಟ್​ ಇಂಡೀಸ್ 2ನೇ ಟಿ-20 ಕದನದ ಕೆಲ ರೋಚಕ ಕ್ಷಣಗಳು ಇಲ್ಲಿವೆ!

171 ರನ್​ಗಳ ಟಾರ್ಗೆಟ್ ಕೆರಿಬಿಯನ್ನರಿಗೆ ಸವಾಲಾಗಿಯೇ ಪರಿಣಮಿಸಿಲ್ಲ. ಫೀಲ್ಡಿಂಗ್​ನಲ್ಲಿ ಅನೇಕ ಕ್ಯಾಚ್ ಕೈಚೆಲ್ಲಿದ ಕೊಹ್ಲಿ ಹುಡುಗರು, ರನ್​ಗಳನ್ನು ಕೂಡ ಹರಿಯಬಿಟ್ಟರು.

ಮೊದಲ ವಿಕೆಟ್​ಗನೇ ವಿಂಡೀಸ್ ಆರಂಭಿಕರು 73 ರನ್​ಗಳ ಕಾಣಿಕೆ ನೀಡಿದರು. ಎವಿನ್ ಲೆವಿಸ್(40), ಲೆಂಡ್ ಸಿಮಾನ್ಸ್​(67*) ಮತ್ತು ನಿಕೋಲಸ್ ಪೂರನ್(38*) ಆಟವನ್ನು ಭಾರತೀಯ ಬೌಲರ್​ಗಳು ತಡೆಯಲು ವಿಫಲರಾದರು. ವಿಂಡೀಸ್ 18.3 ಓವರ್​ನಲ್ಲೇ ಗೆಲುವು ಕಂಡಿತು.

First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ