ಇಶಾಂತ್ ಶರ್ಮಾ ಚೊಚ್ಚಲ ಅರ್ಧಶತಕ; ಡ್ರೆಸ್ಸಿಂಗ್ ರೂಮ್​ನಲ್ಲಿ ಕೊಹ್ಲಿ ಮಾಡಿದ್ದೇನು ನೋಡಿ!

Ishant Sharma: ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಹನುಮಾ ವಿಹಾರಿಯ 111 ಹಾಗೂ ಇಶಾಂತ್ ಶರ್ಮಾರ 57 ರನ್​ಗಳ ನೆರವಿನಿಂದ 416 ರನ್ ಕಲೆಹಾಕಿದೆ.

ವಿರಾಟ್ ಕೊಹ್ಲಿ ಹಾಗೂ ಇಶಾಂತ್ ಶರ್ಮಾ

ವಿರಾಟ್ ಕೊಹ್ಲಿ ಹಾಗೂ ಇಶಾಂತ್ ಶರ್ಮಾ

  • Share this:
ಬೆಂಗಳೂರು (ಸೆ. 01): ವೇಗಿ ಇಶಾಂತ್ ಶರ್ಮಾ ಅವರ ಅಮೋಘ ಅರ್ಧಶತಕದ ನೆರವಿನಿಂದಲೇ ವೆಸ್ಟ್​ ಇಂಡೀಸ್ ವಿರುದ್ಧದ 2ನೇ ಟೆಸ್ಟ್​​ನಲ್ಲಿ ಭಾರತ 400 ರನ್​ಗಳ ಗಡಿ ದಾಟಲು ನೆರವಾಯಿತು ಎಂದರೆ ತಪ್ಪಾಗಲಾರದು. ಶತಕ ಗಳಿಸಿದ ಹನುಮಾ ವಿಹಾರಿಗೆ ಉತ್ತಮ ಸಾತ್ ನೀಡಿದ ಇಶಾಂತ್ ತಮ್ಮ 126ನೇ ಇನ್ನಿಂಗ್ಸ್​ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದರು.

69 ಎಸೆತಗಳಲ್ಲಿ ಟೆಸ್ಟ್​​ ಕ್ರಿಕೆಟ್​ನ ಮೊದಲ ಅರ್ಧಶತಕ ಗಳಿಸಿದ ಇಶಾಂತ್ ಶರ್ಮಾ ವಿಶೇಷವಾಗಿ ಸಂಭ್ರಮಿಸಿದರು. ಡ್ರೆಸ್ಸಿಂಗ್ ರೂಂ ಕಡೆ ಮುಖಮಾಡಿ ಬ್ಯಾಟ್​ ಮೂಲಕ ವಿಭಿನ್ನ ಶೈಲಿಯಲ್ಲಿ ಸಂತೋಷ ಹಂಚಿಕೊಂಡರು.

  
View this post on Instagram
 

Sharmaji please explain this celebration style 😁😄 #TeamIndia #WIvIND


A post shared by Team India (@indiancricketteam) on


IND vs WI: ವಿಹಾರಿ ಚೊಚ್ಚಲ ಶತಕ, ಬುಮ್ರಾ ಹ್ಯಾಟ್ರಿಕ್ ಮ್ಯಾಜಿಕ್; ಭಾರತ ಸೇಫ್!

ಇದೇವೇಳೆ ಡ್ರೆಸ್ಸಿಂಗ್ ರೂಂ ನಿಂದ ನಾಯಕ ವಿರಾಟ್ ಕೊಹ್ಲಿ ಚಪ್ಪಾಳೆ ತಟ್ಟುತ್ತ  ಕುಣಿದು ಪ್ರತಿಕ್ರಿಯಿಸಿದರು. ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಭಾರತ ಕ್ರಿಕೆಟ್ ತಂಡ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ 'ಇಶಾಂತ್ ಶರ್ಮಾ, ನೀವು ಸಂಭ್ರಮಿಸಿದ ಶೈಲಿ ಬಗ್ಗೆ ನಮಗೆ ವಿವರಿಸಿ' ಎಂದು ಫೋಟೋ ಹಂಚಿಕೊಂಡಿದೆ.

 ಮೊದಲ ಟೆಸ್ಟ್​ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ, ಎರಡನೇ ಟೆಸ್ಟ್​ನಲ್ಲೂ ಗೆಲುವಿನತ್ತ ಮುಖಮಾಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಹನುಮಾ ವಿಹಾರಿಯ 111 ಹಾಗೂ ಇಶಾಂತ್ ಶರ್ಮಾರ 57 ರನ್​ಗಳ ನೆರವಿನಿಂದ 416 ರನ್ ಕಲೆಹಾಕಿದೆ.

ಬಳಿಕ ಮೊದಲ ಇನ್ನಿಂಗ್ಸ್​ ಆರಂಭಿಸಿರುವ ವೆಸ್ಟ್​ ಇಂಡೀಸ್ ಜಸ್​ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 87 ರನ್​ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

First published: