India vs West Indies: ವಿರಾಟ್ ಕೊಹ್ಲಿ ವಿಶ್ವದಾಖಲೆ; ಸಚಿನ್-ಲಾರಾ ದಾಖಲೆ ಉಡೀಸ್..!

Virat Kohli: ಈ ಅಪರೂಪದ ಸಾಧನೆ ಮಾಡಿದ ಭಾರತದ 3ನೇ ಹಾಗೂ ವಿಶ್ವದ 12ನೇ ಆಟಗಾರ ಎಂಬ ಶ್ರೇಯಕ್ಕೆ ಕೊಹ್ಲಿ ಪಾತ್ರರಾಗಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • News18
  • Last Updated :
  • Share this:
ಬೆಂಗಳೂರು (ಜೂ. 27): ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ (ಮೂರು ಮಾಧರಿಯ ಕ್ರಿಕೆಟ್) ಅತ್ಯಂತ ವೇಗವಾಗಿ ಕಡಿಮೆ ಇನ್ನಿಂಗ್ಸ್​ನಲ್ಲಿ ಒಟ್ಟು 20 ಸಾವಿರ ರನ್ ಕಲೆಹಾಕಿದ ಸಾಧನೆ ವಿರಾಟ್ ಮಾಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಶ್ರೇಯಕ್ಕೆ ಕೊಹ್ಲಿ ಪಾತ್ರರಾಗಲಿದ್ದಾರೆ.

ಇಂದಿನ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಈ ದಾಖಲೆ ಮಾಡಲು 37 ರನ್​ಗಳ ಅವಶ್ಯಕತೆಯಿತ್ತು. ಸದ್ಯ ವಿಡೀಸ್ ವಿರುದ್ಧ ಕೊಹ್ಲಿ 37 ರನ್ ಬಾರಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ.

ಈ ಅಪರೂಪದ ಸಾಧನೆ ಮಾಡಿದ ಭಾರತದ 3ನೇ ಹಾಗೂ ವಿಶ್ವದ 12ನೇ ಆಟಗಾರ ಎಂಬ ಶ್ರೇಯಕ್ಕೆ ಕೊಹ್ಲಿ ಪಾತ್ರರಾಗಲಿದ್ದಾರೆ. ಅಲ್ಲದೆ ಅತ್ಯಂತ ವೇಗವಾಗಿ ಕಡಿಮೆ ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಸಾಧನೆಯನ್ನೂ ಮಾಡಿ ಸಚಿನ್ ತೆಂಡೂಲ್ಕರ್ ಹಾಗೂ ಲಾರಾ ದಾಖಲೆಯನ್ನೂ ಪುಡಿ ಮಾಡಿದ್ದಾರೆ.

Cricket World Cup 2019, Ind vs WI: ಭಾರತದ 2ನೇ ವಿಕೆಟ್ ಪತನ: ಅರ್ಧಶತಕದ ಅಂಚಿನಲ್ಲಿ ಎಡವಿದ ಕನ್ನಡಿಗ

ಅತ್ಯಂತ ವೇಗವಾಗಿ 20,000 ರನ್​ ಗಡಿದಾಟಿದ ದಾಖಲೆಯನ್ನು ಸಚಿನ್ ಮತ್ತು ಲಾರಾ ಜಂಟಿಯಾಗಿ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. ಇಷ್ಟು ರನ್ ಗಳಿಸಲು ಈ ಇಬ್ಬರೂ ಆಟಗಾರರೂ 453 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. ಸದ್ಯ ಕೊಹ್ಲಿ ಒಟ್ಟು 417 ಇನ್ನಿಂಗ್ಸ್​ನಲ್ಲೇ ಈ ದಾಖಲೆಯನ್ನು ಮುರಿದಿದ್ದಾರೆ.

 ಭಾರತದ ಸಚಿನ್​ ತೆಂಡೂಲ್ಕರ್​ (34,357) ಹಾಗೂ ರಾಹುಲ್ ದ್ರಾವಿಡ್​ (24,208) ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಗಳಿಸಿದ ಭಾರತದ ಆಟಗಾರರಾಗಿದ್ದಾರೆ.

First published: