ಬೆಂಗಳೂರು (ಆ. 09): ಗಯಾನದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿದೆ.
ಬೆಂಬಿಡದೆ ಕಾಡಿದ ಮಳೆರಾಯ ವೆಸ್ಟ್ ಇಂಡೀಸ್ 13 ಓವರ್ಗೆ 54 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದ ವೇಳೆ ಆಟವನ್ನು ಸಂಪೂರ್ಣವಾಗಿ ಮುಟುಕುಗೊಳಿಸಲಾಯಿತು.
ಈ ಮಧ್ಯೆ ಮಳೆ ಬಂದ ಕಾರಣ ಎರಡು ಬಾರಿ ಪಂದ್ಯವನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿತ್ತು. ಈ ಬಿಡುವಿನ ವೇಳೆ ಟಿಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ ಮೈದಾನದಲ್ಲೇ ಡಿಜೆ ಸಾಂಗ್ಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಗೇಲ್ ಜೊತೆ
ಕೊಹ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಹಾಗೂ ಫೋಟೋ ಸಾಮಾಜಿಕ ತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.
ಸ್ವಾತಂತ್ರ್ಯ ದಿನದಂದು ಲಡಾಖ್ನಲ್ಲಿ ಎಂ ಎಸ್ ಧೋನಿ ದ್ವಜಾರೋಹಣ..?
ಕೊಹ್ಲಿ ಹಾಗೂ ಗೇಲ್ರ ಡ್ಯಾನ್ಸ್ ಜುಗಲ್ಬಂದಿ ನಡೆಯುತ್ತಿರುವುದು ಇದೆ ಮೊದಲೇನಲ್ಲ. ಈ ಹಿಂದೆ ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಗೇಲ್ ಆಡಿದ್ದಾಗ ಮೈದಾನದಲ್ಲೇ ಇವರಿಬ್ಬರು ಸಖತ್ ಸ್ಟೆಪ್ಸ್ ಹಾಕಿದ ನೆನಪು ಎಂದಿಗೂ ಮರೆಯುವಂತಿಲ್ಲ.
ಕೊಹ್ಲಿ ಬೇಸರ: ಪಂದ್ಯ ರದ್ದಾದ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ನಾಯಕ ಕೊಹ್ಲಿ, ‘ಪಿಚ್ ಹಸಿಯಾಗಿರುವುದರಿಂದ ಬ್ಯಾಟಿಂಗ್ ಮಾಡುವುದು ತುಂಬಾನೇ ಕಷ್ಟ. ಹೀಗಾಗಿ ಟಾಸ್ ಗೆದ್ದ ನಾವು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿಲ್ಲ. ನಮ್ಮ ಬೌಲರ್ಗಳು ಎದುರಾಳಿ ತಂಡವನ್ನು ಸಣ್ಣಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸವಿತ್ತು. ಆದರೆ, ಪಂದ್ಯ ರದ್ದಾಗುವುದು ಕ್ರಿಕೆಟ್ನಲ್ಲಿ ಅತ್ಯಂತ ಕೆಟ್ಟ ವಿಚಾರ. ಆಟ ಆಡುವುದು-ನಿಲ್ಲಿಸುವುದು ಉತ್ತಮವಾಗಿರುವುದಿಲ್ಲ' ಎಂದು ಹೇಳಿದ್ದಾರೆ.
ಭಾರತ-ವಿಂಡೀಸ್ ನಡುವಣ ಎರಡನೇ ಏಕದಿನ ಪಂದ್ಯ ಆಗಸ್ಟ್ 11 ರಂದು ಟ್ರಿನಿಡಾಡ್ನಲ್ಲಿ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ