ರೋಹಿತ್ ಸಿಕ್ಸರ್ ದಾಖಲೆ; ವಿರಾಟ್ 100ನೇ 50; ಭಾರತದ ಮೂರನೇ ಅತಿ ದೊಡ್ಡ ಮೊತ್ತ!

13ನೇ ಓವರ್ ಹೊತ್ತಿಗೆ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ರಾಹುಲ್ ಮನಬಂದಂತೆ ಬ್ಯಾಟ್ ಬೀಸಿದರು. ವಿಂಡೀಸ್ ಬೌಲರ್​ಗಳ ಬೆಂಡೆತ್ತಿದರು. ಅದರಲ್ಲು ಕೊನೆಯ 4 ಓವರ್​​ನಲ್ಲಿ 64 ರನ್ ಹರಿದುಬಂತು.

Vinay Bhat | news18-kannada
Updated:December 11, 2019, 10:09 PM IST
ರೋಹಿತ್ ಸಿಕ್ಸರ್ ದಾಖಲೆ; ವಿರಾಟ್ 100ನೇ 50; ಭಾರತದ ಮೂರನೇ ಅತಿ ದೊಡ್ಡ ಮೊತ್ತ!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
  • Share this:
ಮುಂಬೈ (ಡಿ. 11): ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಗೆಲ್ಲಲೇ ಬೇಕಾಗಿರುವ ಪಂದ್ಯವಾಗಿರುವುದರಿಂದ ಭಾರತೀಯ ಬ್ಯಾಟ್ಸ್​ಮನ್​ಗಳು ಬೃಹತ್ ಮೊತ್ತ ಪೇರಿಸಿ ವೆಸ್ಟ್​ ಇಂಡೀಸ್​ಗೆ ಸವಾಲೆಸೆದಿದ್ದಾರೆ. ಕೆ ಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್​ ನೆರವಿನಿಂದ ಭಾರತ 240 ರನ್ ಕಲೆಹಾಕಿದೆ.

ಮೊದಲ ಓವರ್​ನಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ರೋಹಿತ್-ರಾಹುಲ್ ಮೊದಲ ವಿಕೆಟ್​ಗೆ 135 ರನ್​ಗಳ ಅಮೋಘ ಜೊತೆಯಾಟ ಆಡಿದರು. ಅದುಕೂಡ 11.4 ಓವರ್​ನಲ್ಲಿ. ರೋಹಿತ್ ಕೇವಲ 34 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಬಾರಿಸಿ 71 ರನ್ ಗಳಿಸಿದರು.

 
ಈ ಮೂಲಕ ಹಿಟ್​ಮ್ಯಾನ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 400 ಸಿಕ್ಸರ್‌ಗಳ ದಾಖಲೆ ಬರೆದರು. ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ಒಟ್ಟಾರೆಯಾಗಿ ಮೂರನೇ ಬ್ಯಾಟ್ಸ್‌ಮನ್ ಎಂಬ ವಿನೂತನ ಸಾಧನೆ ಮಾಡಿದ್ದಾರೆ.

India vs West Indies Live: 241 ಟಾರ್ಗೆಟ್; ವೆಸ್ಟ್​ ಇಂಡೀಸ್​ನ 4 ವಿಕೆಟ್ ಪತನ

ಇನ್ನು ವಿರಾಟ್ ಕೊಹ್ಲಿ ವಿಂಡೀಸ್ ಬೌಲರ್​ಗಳ ಬೆಂಡೆತ್ತಿ 29 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್ ಸಿಡಿಸಿ ಅಜೇಯ 70 ರನ್ ಚಚ್ಚಿದರು. ಇದು ವಿರಾಟ್ ಕೊಹ್ಲಿ ಬ್ಯಾಟ್​ನಿಂದ ಬಂದ 100ನೇ ಶತಕವಾಗಿದೆ. ಟೆಸ್ಟ್​ನಲ್ಲಿ 22, ಏಕದಿನದಲ್ಲಿ 54 ಹಾಗೂ ಟಿ-20 ಯಲ್ಲಿ 24 ಅರ್ಧಶತಕ ಬಾರಿಸಿ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 100 ಹಾಫ್ ಸೆಂಚುರಿ ಕೊಹ್ಲಿ ಬ್ಯಾಟ್​ನಿಂದ ಸಿಡಿದಿದೆ.

ಅಲ್ಲದೆ ತವರಿನಲ್ಲಿ ನಡೆದ ಅಂತಾರಾಷ್ಟ್ರೀಯ ಟಿ- 20 ಪಂದ್ಯಗಳಲ್ಲಿ ಒಂದು ಸಾವಿರ ರನ್ ಗಳಸಿದ ಮೊದಲ ಭಾರತೀಯ ಎಂಬ ಮನ್ನಣೆಗೆ ಪಾತ್ರರಾಗಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಕೊಹ್ಲಿ ಆಗಿದ್ದಾರೆ.

 13ನೇ ಓವರ್ ಹೊತ್ತಿಗೆ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ರಾಹುಲ್ ಮನಬಂದಂತೆ ಬ್ಯಾಟ್ ಬೀಸಿದರು. ವಿಂಡೀಸ್ ಬೌಲರ್​ಗಳ ಬೆಂಡೆತ್ತಿದರು. ಅದರಲ್ಲು ಕೊನೆಯ 4 ಓವರ್​​ನಲ್ಲಿ 64 ರನ್ ಹರಿದುಬಂತು.

Ranji Trophy: ಪೃಥ್ವಿ ಶಾ ದ್ವಿಶತಕ; ಮುಂಬೈ ಭರ್ಜರಿ ಮೊತ್ತ; ಸಂಕಷ್ಟದಲ್ಲಿ ಕರ್ನಾಟಕ!

ರಾಹುಲ್ ಜೊತೆಗೂಡಿ ಕೊಹ್ಲಿ 95 ರನ್​ಗಳ ಅಮೋಘ ಜೊತೆಯಾಟ ಆಡಿದರು. ರಾಹುಲ್ ಶತಕ ವಂಚಿತರಾಗಿ 56 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್​ನೊಂದಿಗೆ 91 ರನ್ ಗಳಿಸಿದರು. ಭಾರತ 20 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 240 ರನ್ ಬಾರಿಸಿತು.

ಇನ್ನು ಭಾರತ ಇಷ್ಟು ದೊಡ್ಡ ಮೊತ್ತ ಕಲೆಹಾಕಿದ್ದು ಟಿ-20 ಕ್ರಿಕೆಟ್​ನಲ್ಲಿ ಇದು ಮೂರನೇ ಅತಿ ದೊಡ್ಡ  ಮೊತ್ತವಾಗಿದೆ. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧ 260 (2017) ಹಾಗೂ ವೆಸ್ಟ್‌ಇಂಡೀಸ್ ವಿರುದ್ಧವೇ 244 ರನ್ (2016) ಪೇರಿಸಿತ್ತು.

First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ