India vs West Indies: ಟಿ20 ಕದನ ಕುತೂಹಲ: ಇಂದು ಭಾರತ-ವಿಂಡೀಸ್ ನಡುವೆ ಫೈನಲ್ ಫೈಟ್

ರೆನ್ ಪೊಲಾರ್ಡ್, ಸಿಮೆನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಈ ಆಟಗಾರರು ಇಂದು ತವರಿನ ಪಿಚ್​ನಲ್ಲಿ ಆಡುತ್ತಿರುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಕದನದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.

zahir | news18-kannada
Updated:December 11, 2019, 1:23 PM IST
India vs West Indies: ಟಿ20 ಕದನ ಕುತೂಹಲ: ಇಂದು ಭಾರತ-ವಿಂಡೀಸ್ ನಡುವೆ ಫೈನಲ್ ಫೈಟ್
Ind vs Wi
  • Share this:
ಭಾರತ-ವೆಸ್ಟ್ ಇಂಡೀಸ್ ನಡುವೆ ಅಂತಿಮ ಟಿ20 ಪಂದ್ಯ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ಪಂದ್ಯಕ್ಕೆ ಫೈನಲ್ ಫೈಟ್ ಕುತೂಹಲ ಹುಟ್ಟುಹಾಕಿದ್ದಾರೆ.

ಉಭಯ ತಂಡಗಳು ಗೆಲುವಿನ ಲೆಕ್ಕಾಚಾರದಲ್ಲಿದ್ದು, ಇನ್ನು ತವರಿನಲ್ಲಿ ನಡೆಯುವ ಜಿದ್ದಾಜಿದ್ದಿಯಲ್ಲಿ ಗೆಲ್ಲುವ ಫೇವರೇಟ್ ತಂಡ ಭಾರತ. ಅದಾಗ್ಯೂ 2ನೇ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾಗೆ ಟಕ್ಕರ್ ನೀಡುವಲ್ಲಿ ಯಶಸ್ವಿಯಾಗಿದೆ.

ಹೀಗಾಗಿ ಅಂತಿಮ ಹಣಾಹಣಿಯಲ್ಲಿ ಸಮಬಲ ಹೋರಾಟವನ್ನು ನಿರೀಕ್ಷಿಸಬಹುದು. ಉಭಯ ತಂಡಗಳಿಗೂ ಓಪನಿಂಗ್ ವೈಫಲ್ಯ ಕಾಡುತ್ತಿದ್ದು, ರೋಹಿತ್ ಶರ್ಮಾ ದೊಡ್ಡ ಇನಿಂಗ್ಸ್ ಆಡದಿರುವುದು ಭಾರತದ ಪಾಲಿನ ಚಿಂತೆಗೆ ಕಾರಣವಾಗಿದೆ. ಇನ್ನು ಕಳೆದ ಪಂದ್ಯದ ಸೋಲಿಗೆ ಪ್ರಮುಖ ಕಾರಣವಾಗಿದ್ದು ಕಳಪೆ ಫೀಲ್ಡಿಂಗ್. ಈ ಬಗ್ಗೆ ಫೈನಲ್ ಪಂದ್ಯದಲ್ಲಿ ಮತ್ತಷ್ಟು ಎಚ್ಚರಿಕೆವಹಿಸುವತ್ತ ಗಮನ ಹರಿಸಬೇಕಿದೆ.

ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ವಿನ್ನರ್ ಶಶಿ ಕುಮಾರ್ ಈಗೇನು ಮಾಡುತ್ತಿದ್ದಾರೆ?

ಇನ್ನು ವೆಸ್ಟ್​ ಇಂಡೀಸ್ ತಂಡದ ಒಂದಷ್ಟು ಆಟಗಾರರು ಐಪಿಎಲ್​ನಲ್ಲಿ ಆಡಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಅದರಲ್ಲೂ ಕಿರೆನ್ ಪೊಲಾರ್ಡ್, ಸಿಮೆನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಈ ಆಟಗಾರರು ಇಂದು ತವರಿನ ಪಿಚ್​ನಲ್ಲಿ ಆಡುತ್ತಿರುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಕದನದಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ.

ಟೀಂ ಇಂಡಿಯಾ ಸಂಭಾವ್ಯ ಪಟ್ಟಿ:
ವಿರಾಟ್ ಕೊಹ್ಲಿ ( ನಾಯಕ ), ರೋಹಿತ್ ಶರ್ಮಾ , ಕೆ . ಎಲ್ . ರಾಹುಲ್ , ಶ್ರೇಯಸ್ ಅಯ್ಯರ್ , ಶಿವಂ ದುಬೆ , ರಿಷಭ್ ಪಂತ್ / ಸಂಜು ಸ್ಯಾಮ್ಸನ್ , ರವೀಂದ್ರ ಜಡೇಜಾ , ಯಜುವಿಂದ್ರ ಚಹಲ್ , ಕುಲ್​ದೀಪ್ ಯಾದವ್ , ಮೊಹಮ್ಮದ್ ಶಮಿ , ದೀಪಕ್ ಚಹರ್ಪಂದ್ಯ ಸಮಯ: ಸಂಜೆ 7 ಗಂಟೆ

ಚಾನೆಲ್: ಸ್ಟಾರ್ ಸ್ಪೋರ್ಟ್ಸ್/ ಹಾಟ್​ಸ್ಟಾರ್

 

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

First published: December 11, 2019, 1:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading