6 ರನ್ ಗಳಿಸಲು ಕೆಎಲ್ ರಾಹುಲ್ ತೆಗೆದುಕೊಂಡ ಬಾಲ್ ಅಷ್ಟಿಷ್ಟಲ್ಲ; ಟ್ರೋಲ್ ಆದ ಕನ್ನಡಿಗ

ರಾಹುಲ್​ ಈ ಆಟ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಓಪನರ್ ಆಗಿ ರಾಹುಲ್ ಕಣಕ್ಕಿಳಿಸುವ ಬದಲು ಇಶಾಂತ್ ಶರ್ಮಾರನ್ನು ಆಡಿಸಿ ಎಂದು ಟ್ರೋಲ್ ಮಾಡಿದ್ದಾರೆ.

ಕೆ ಎಲ್ ರಾಹುಲ್

ಕೆ ಎಲ್ ರಾಹುಲ್

  • Share this:
ಬೆಂಗಳೂರು (ಸೆ. 02): ವೆಸ್ಟ್​ ಇಂಡೀಸ್ ವಿರುದ್ಧ ಸಾಗುತ್ತಿರುವ ಎರಡನೇ ಟೆಸ್ಟ್​​ನಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಕೆರಿಬಿಯನ್ನರಿಗೆ ಗೆಲ್ಲಲು 468 ರನ್​ಗಳ ಟಾರ್ಗೆಟ್ ನೀಡಿದೆ. ಆದರೆ ಮೂರನೇ ದಿನದಾಟದ ಅಂತ್ಯಕ್ಕೆ ವಿಂಡೀಸ್ 2 ವಿಕೆಟ್ ಕಳೆದುಕೊಂಡು 45 ರನ್ ಕಲೆಹಾಕಿದೆ. ಈ ಮೂಲಕ ಕೊಹ್ಲಿ ಪಡೆ ಕ್ಲೀನ್ ಸ್ವೀಪ್​ನತ್ತ ದಾಪುಗಾಲಿಡುತ್ತಿದೆ.

ಭಾರತ ಅತ್ಯುತ್ತಮ ಬ್ಯಾಟಿಂಗ್ ನಿರ್ವಹಿಸಿದೆಯಾದರು, ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವುತ್ತಲೇ ಇದೆ. ಕೆ ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪದೇಪದೇ ವೈಫಲ್ಯ ಅನುಭವಿಸುತ್ತಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ರಾಹುಲ್​ಗೆ ಅಷ್ಟೇನು ಯಶಸ್ಸು ಸಿಗಲಿಲ್ಲ. ಆದರೂ ಕೊಹ್ಲಿ ಕನ್ನಡಿಗನಿಗೆ ಅವಕಾಶ ನೀಡುತ್ತಿದ್ದಾರೆ. ರಾಹುಲ್ ಎಡವುತ್ತಿದ್ದಾರೆ. ಇದು ವಿಂಡೀಸ್ ವಿರುದ್ಧದ ಟೆಸ್ಟ್​ ಸರಣಿಯಲ್ಲೂ ಮುಂದುವರೆದಿದೆ. ಅದರಲ್ಲು ಎರಡನೇ ಟೆಸ್ಟ್​​ನ 2ನೇ ಇನ್ನಿಂಗ್ಸ್​ನಲ್ಲಿ ರಾಹುಲ್ ನೀಡಿದ ಪ್ರದರ್ಶನ ಭಾರೀ ಟೀಕೆಗೆ ಗುರಿಯಾಗಿದೆ.

ಬುಮ್ರಾ ಹ್ಯಾಟ್ರಿಕ್ ಸಾಧನೆ ಆಶ್ಚರ್ಯವೆನಿಸಿಲ್ಲ; ಯಾರ್ಕರ್ ಸ್ಪೆಷಲಿಸ್ಟ್​ ಬಗ್ಗೆ ಯುವರಾಜ್ ಹೀಗೆ ಹೇಳಿದ್ದೇಕೆ?

ವೆಸ್ಟ್​ ಇಂಡೀಸ್ ಅನ್ನು 117 ರನ್​ಗೆ ಆಲೌಟ್ ಮಾಡಿ 2ನೇ ಇನ್ನಿಂಗ್ಸ್​ ಆರಂಭಿಸಿದ ಭಾರತ ಆರಂಭದಲ್ಲೇ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಳ್ಳುವ ಜೊತೆಗೆ ನಿಧಾನಗತಿಯ ಆಟ ಪ್ರದರ್ಶಿಸಿತು. ನಂತರದಲ್ಲಿ ರಾಹುಲ್ ಒಂದು ಬೌಂಡರಿ ಬಾರಿಸಿ 6 ರನ್​ಗೆ ಔಟ್ ಆದರು. ಆದರೆ ರಾಹುಲ್ ಕೇವಲ 6 ರನ್ ಕಲೆಹಾಕಲು ತೆಗೆದುಕೊಂಡ ಬಾಲ್ ಬರೋಬ್ಬರಿ 63 ಎಸೆತ.

ರಾಹುಲ್​ ಈ ಆಟ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಓಪನರ್ ಆಗಿ ರಾಹುಲ್ ಕಣಕ್ಕಿಳಿಸುವ ಬದಲು ಇಶಾಂತ್ ಶರ್ಮಾರನ್ನು ಆಡಿಸಿ ಎಂದು ಟ್ರೋಲ್ ಮಾಡಿದ್ದಾರೆ.

 First published: