ಥರ್ಡ್ ಅಂಪೈರ್​ನಿಂದ ಫ್ರಂಟ್ ಫೂಟ್ ನೋಬಾಲ್ ನಿರ್ಧಾರ: ಭಾರತ-ವಿಂಡೀಸ್ ಸರಣಿಯಲ್ಲಿ ಪ್ರಯೋಗ

ವಾಸ್ತವವಾಗಿ, ಫ್ರಂಟ್ ಫೂಟ್ ನೋಬಾಲ್ ಪತ್ತೆಹಚ್ಚುವ ಹೊಣೆಯನ್ನು ಥರ್ಡ್ ಅಂಪೈರ್​ಗೆ ವಹಿಸುವ ಪ್ರಯೋಗ 2016ರಲ್ಲೇ ನಡೆದಿತ್ತು. ಆ ವರ್ಷ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಏಕದಿನ ಪಂದ್ಯಗಳ ಸರಣಿಯಲ್ಲಿ ಪ್ರಯೋಗ ಮಾಡಲಾಗಿತ್ತು.

news18
Updated:December 5, 2019, 4:55 PM IST
ಥರ್ಡ್ ಅಂಪೈರ್​ನಿಂದ ಫ್ರಂಟ್ ಫೂಟ್ ನೋಬಾಲ್ ನಿರ್ಧಾರ: ಭಾರತ-ವಿಂಡೀಸ್ ಸರಣಿಯಲ್ಲಿ ಪ್ರಯೋಗ
ವಿರಾಟ್ ಕೊಹ್ಲಿ
  • News18
  • Last Updated: December 5, 2019, 4:55 PM IST
  • Share this:
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗಳಲ್ಲಿ ಫ್ರಂಟ್ ಫೂಟ್ ನೋಬಾಲ್​ಗಳನ್ನು ಥರ್ಡ್ ಅಂಪೈರ್ ಅವರೇ ನಿರ್ಧರಿಸಲಿದ್ದಾರೆ. ಫ್ರಂಟ್ ಫೂಟ್ ನೋಬಾಲ್​ಗಳನ್ನು ಆನ್​-ಫೀಲ್ಡ್ ಅಂಪೈರ್ ಬದಲು ಮೂರನೇ ಅಂಪೈರ್ ನಿರ್ಧಾರಕ್ಕೆ ಬಿಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಘೋಷಿಸಿದೆ.

ಈ ಪ್ರಯೋಗವು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಮತ್ತು ಟಿ20 ಕ್ರಿಕೆಟ್ ಸರಣಿಯಲ್ಲಿ ಜಾರಿಗೆ ಬರಲಿದೆ. ಇದೇ ಶುಕ್ರವಾರದಿಂದ ನಡೆಯುವ ಈ ಎರಡು ಸರಣಿಯಲ್ಲಿನ ಪಂದ್ಯಗಳಲ್ಲಿ ನೋಬಾಲ್ ಗುರುತಿಸುವ ತಂತ್ರಜ್ಞಾನವನ್ನು ಪ್ರಯೋಗಾರ್ಥವಾಗಿ ಅಳವಡಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಇದನ್ನೂ ಓದಿ: ‘ಬುಮ್ರಾ ಬೇಬಿ ಬೌಲರ್’ ಎಂದ ಪಾಕ್ ಕ್ರಿಕೆಟಿಗನಿಗೆ ಮೈಚಳಿ ಬಿಡಿಸಿದ ಜಸ್​ಪ್ರೀತ್ ಅಭಿಮಾನಿಗಳು!

“ಈ ಪ್ರಯೋಗ ಚಾಲನೆಯಲ್ಲಿರುವವರೆಗೂ ಪಂದ್ಯದ ಪ್ರತಿಯೊಂದು ಎಸೆತವನ್ನು ಥರ್ಡ್ ಅಂಪೈರ್ ಗಮನಿಸಬೇಕು. ಬೌಲರ್​ನ ಮುಂಗಾಲು ನಿಯಮ ಮೀರಿ ಹೆಜ್ಜೆ ಇಟ್ಟಿದೆಯಾ ಎಂಬುದನ್ನು ಗುರುತಿಸಬೇಕು. ಬೌಲರ್​ನ ಫ್ರಂಟ್ ಫುಟ್​ನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಥರ್ಡ್ ಅಂಪೈರ್ ಅವರು ಕೂಡಲೇ ಆನ್​-ಫೀಲ್ಡ್ ಅಂಪೈರ್​ಗೆ ಅದನ್ನು ತಿಳಿಸಬೇಕು. ಆಗ ಆನ್-ಫೀಲ್ಡ್ ಅಂಪೈರ್ ನೋಬಾಲ್ ಕೊಡುತ್ತಾರೆ. ಒಟ್ಟಾರೆಯಾಗಿ, ಫ್ರಂಟ್ ಫುಟ್ ನೋಬಾಲ್ ವಿಚಾರದಲ್ಲಿ ಆನ್-ಫೀಲ್ಡ್ ಅಂಪೈರ್ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ” ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಒಂದು ವೇಳೆ, ಬ್ಯಾಟ್ಸ್​ಮ್ಯಾನ್ ಔಟಾದ ಬಳಿಕ ಥರ್ಡ್ ಅಂಪೈರ್ ನೋಬಾಲ್ ನಿರ್ಧಾರ ತಿಳಿಸಿದಾಗ, ಆನ್-ಫೀಲ್ಡ್ ಅಂಪೈರ್ ಆ ಬ್ಯಾಟ್ಸ್​ಮ್ಯಾನ್ ಅನ್ನು ವಾಪಸ್ ಕರೆಸಿ ನೋಬಾಲ್ ಪ್ರಕಟಿಸಬಹುದು. ಸದ್ಯಕ್ಕೆ, ಐಸಿಸಿ ಪ್ರಕಟಿಸಿದ ಹೊಸ ಬದಲಾವಣೆಯಲ್ಲಿ ಫ್ರಂಟ್ ಫೂಟ್ ನೋಬಾಲ್ ವಿಚಾರ ಬಿಟ್ಟರೆ ಉಳಿದಂತೆ ಆನ್-ಫೀಲ್ಡ್ ಅಂಪೈರ್ ಅವರ ಕಾರ್ಯಗಳಲ್ಲಿ ಬೇರಾವುದೇ ಬದಲಾವಣೆ ಇರುವುದಿಲ್ಲ ಎಂದು ಐಸಿಸಿ ತಿಳಿಸಿದೆ.

ಇದನ್ನೂ ಓದಿ: 10 ವರ್ಷ, 500 ಪಂದ್ಯಗಳು...ಆದರೆ ಭಾರತ ಕ್ರಿಕೆಟ್ ಮಂಡಳಿ ಬಿಡಿಗಾಸು ನೀಡಿಲ್ಲ..!

ಕ್ರಿಕೆಟ್ ಪಂದ್ಯಗಳ ವೇಳೆ ಹೆಚ್ಚು ಗೊಂದಲಗೊಳಗಾಗುವ ವಿಚಾರಗಳಲ್ಲಿ ನೋಬಾಲ್​ಗಳೂ ಒಂದು. ಬೌಲರ್​ಗಳು ನೋಬಾಲ್ ಹಾಕಿದರೂ ಅಂಪೈರ್ ಗಮನಕ್ಕೆ ಬಾರದೇ ಹೋಗಿರುವ ಪ್ರಕರಣಗಳು ಹೆಚ್ಚೇ ಇರುತ್ತವೆ. ಈ ಹಿನ್ನೆಲೆಯಲ್ಲಿ ನೋಬಾಲ್​ಗಳನ್ನ ಥರ್ಡ್ ಅಂಪೈರ್​ಗಳ ನಿರ್ಧಾರಕ್ಕೆ ಬಿಡಬೇಕೆಂಬ ಕೂಗು ಹಲವಾರು ದಿನಗಳಿಂದ ಕೇಳಿಬರುತ್ತಿತ್ತು. ಐಸಿಸಿ ಈಗ ಈ ಕೂಗಿಗೆ ಸ್ಪಂದಿಸಿದೆ. ಇದೇ ವರ್ಷ ಆಗಸ್ಟ್ ತಿಂಗಳಲ್ಲೇ ಐಸಿಸಿ ನಿರ್ಧಾರ ಕೈಗೊಂಡಿತ್ತು.ವಾಸ್ತವವಾಗಿ, ಫ್ರಂಟ್ ಫೂಟ್ ನೋಬಾಲ್ ಪತ್ತೆಹಚ್ಚುವ ಹೊಣೆಯನ್ನು ಥರ್ಡ್ ಅಂಪೈರ್​ಗೆ ವಹಿಸುವ ಪ್ರಯೋಗ 2016ರಲ್ಲೇ ನಡೆದಿತ್ತು. ಆ ವರ್ಷ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಏಕದಿನ ಪಂದ್ಯಗಳ ಸರಣಿಯಲ್ಲಿ ಪ್ರಯೋಗ ಮಾಡಲಾಗಿತ್ತು. ಆ ನಂತರ ಮತ್ಯಾವುದೇ ಪಂದ್ಯಗಳಲ್ಲಿ ಇದು ಬಳಕೆಯಾಗಲಿಲ್ಲ. ಐಸಿಸಿಯ ಕ್ರಿಕೆಟ್ ಸಮಿತಿಯು ಈ ಪ್ರಯೋಗವನ್ನು ಹೆಚ್ಚೆಚ್ಚು ಮಾಡುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಐಸಿಸಿ ಈಗ ಭಾರತ-ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣಿಯಲ್ಲಿ ಇದಕ್ಕೆ ಮರುಚಾಲನೆ ನೀಡಿದೆ.

(ಪಿಟಿಐ ವರದಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 5, 2019, 4:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading