ಟಿ-20 ಯಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿದರೆ ಸೋಲು ಖಚಿತ; ಯಾಕೆ ಗೊತ್ತಾ?

ಭಾರತ ಟಿ-20 ಕ್ರಿಕೆಟ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದರೆ ಸೋಲು ಖಚಿತ ಎಂಬ ಮಾತು ನಿಜವಾಗುತ್ತಿದೆ. ಚೇಸಿಂಗ್​ನಲ್ಲಿ ಕೊಹ್ಲಿ ಪಡೆಯನ್ನು ಮುಟ್ಟುವರಿಲ್ಲ. ಆದರೆ, ಮೊದಲು ಬ್ಯಾಟಿಂಗ್ ಎಂಬ ಪ್ರಶ್ನೆ ಬಂದರೆ ಭಾರತ ದಾಖಲೆ ತುಂಬಾ ಕೆಟ್ಟದಾಗಿದೆ.

ಆದರ, ಇವರು ಔಟ್ ಆದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಅದರಲ್ಲು ವಿರಾಟ್ ಕೊಹ್ಲಿ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು.

ಆದರ, ಇವರು ಔಟ್ ಆದ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಅದರಲ್ಲು ವಿರಾಟ್ ಕೊಹ್ಲಿ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು.

  • Share this:
ಬೆಂಗಳೂರು (ಡಿ. 09): ವೆಸ್ಟ್​ ಇಂಡೀಸ್ ವಿರುದ್ಧ ನಿನ್ನೆ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ವೈಫಲ್ಯ ಅನುಭವಿಸಿದ ಭಾರತ 8 ವಿಕೆಟ್​ಗಳ ಸೋಲು ಅನುಭವಿಸಿತು. ಗೆದ್ದ ವಿಂಡೀಸ್ ಸರಣಿ ಸಮಬಲ ಮಾಡಿಕೊಂಡಿದೆ. ಹೀಗಾಗಿ ಡಿ. 11 ರಂದು ಮುಂಬೈನಲ್ಲಿ ನಡೆಯಲಿರುವ ಅಂತಿಮ ಕದನ ನಿರ್ಣಾಯಕವಾಗಲಿದೆ.

ಮೊದಲ ಇನ್ನಿಂಗ್ಸ್​: ಟೀಂ ಇಂಡಿಯಾ ಓಪವರ್​ಗಳಾದ ಕೆ ಎಲ್ ರಾಹುಲ್(11) ಮತ್ತು ರೋಹಿತ್ ಶರ್ಮಾ(15) ಆರಂಭದಲ್ಲೇ ವೈಫಲ್ಯ ಅನುಭವಿಸಿದರು. ಆದರೆ, ಅಚ್ಚರಿ ಎಂದರೆೆ 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬದಲು ಶಿವಂ ದುಬೆ ಕಣಕ್ಕಿಳಿದಿದ್ದು. ಸೂಕ್ತ ಸಮಯದಲ್ಲಿ ತಂಡಕ್ಕೆ ಬೇಕಾದ ಆಟವಾಡಿದ ದುಬೆ 30 ಎಸೆತಗಳಲ್ಲಿ 54 ರನ್ ಚಚ್ಚಿದರು.

ಆತ ತಂಡದಲ್ಲಿ ಯಾಕಿಲ್ಲ? ಕೇಳಿದ್ದಕ್ಕೆ, ನನ್ನ ತಂಗಿಯೊಂದಿಗೆ ಬೆಡ್​ನಲ್ಲಿ ಮಲಗಿದ್ದ ಎಂದ ಡುಪ್ಲೆಸಿಸ್!

 ವಿರಾಟ್ ಕೊಹ್ಲಿ(19) ಬೇಗನೆ ನಿರ್ಗಮಿಸಿದರೆ, ರಿಷಭ್ ಪಂತ್(33) ಅಜೇಯ ಆಟ ತಂಡದ ರನ್ ಗತಿ ಏರಿಸಿತು. ಭಾರತ 20 ಓವರ್​ಗೆ 7 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು.

2ನೇ ಇನ್ನಿಂಗ್ಸ್​: 171 ರನ್​ಗಳ ಟಾರ್ಗೆಟ್ ಕೆರಿಬಿಯನ್ನರಿಗೆ ಸವಾಲಾಗಿಯೇ ಪರಿಣಮಿಸಿಲ್ಲ. ಫೀಲ್ಡಿಂಗ್​ನಲ್ಲಿ ಅನೇಕ ಕ್ಯಾಚ್ ಕೈಚೆಲ್ಲಿದ ಕೊಹ್ಲಿ ಹುಡುಗರು, ರನ್​ಗಳನ್ನು ಕೂಡ ಹರಿಯಬಿಟ್ಟರು.

ಮೊದಲ ವಿಕೆಟ್​ಗನೇ ವಿಂಡೀಸ್ ಆರಂಭಿಕರು 73 ರನ್​ಗಳ ಕಾಣಿಕೆ ನೀಡಿದರು. ಎವಿನ್ ಲೆವಿಸ್(40), ಲೆಂಡ್ ಸಿಮಾನ್ಸ್​(67*) ಮತ್ತು ನಿಕೋಲಸ್ ಪೂರನ್(38*) ಆಟವನ್ನು ಭಾರತೀಯ ಬೌಲರ್​ಗಳು ತಡೆಯಲು ವಿಫಲರಾದರು. ವಿಂಡೀಸ್ 18.3 ಓವರ್​ನಲ್ಲೇ ಗೆಲುವು ಕಂಡಿತು.

Virat Kohli: ಅನುಷ್ಕಾ ರೀತಿಯೇ ವಿರಾಟ್ ಕೊಹ್ಲಿಯನ್ನೂ ಟ್ರೋಲ್ ಮಾಡಿದ ನೆಟ್ಟಿಗರು!

 ಈ ಮೂಲಕ ಭಾರತ ಟಿ-20 ಕ್ರಿಕೆಟ್​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದರೆ ಸೋಲು ಖಚಿತ ಎಂಬ ಮಾತು ನಿಜವಾಗುತ್ತಿದೆ. ಚೇಸಿಂಗ್​ನಲ್ಲಿ ಕೊಹ್ಲಿ ಪಡೆಯನ್ನು ಮುಟ್ಟುವರಿಲ್ಲ. ಆದರೆ, ಮೊದಲು ಬ್ಯಾಟಿಂಗ್ ಎಂಬ ಪ್ರಶ್ನೆ ಬಂದರೆ ಭಾರತ ದಾಖಲೆ ತುಂಬಾ ಕೆಟ್ಟದಾಗಿದೆ.

2018 ಜನವರಿಯಿಂದ ಈ ವರೆಗೆ ಟಿ-20 ಕ್ರಿಕೆಟ್​ನಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 16 ಪಂದ್ಯಗಳನ್ನು ಆಡಿದೆ. ಇದರಲ್ಲಿ 8 ಪಂದ್ಯದಲ್ಲಿ ಗೆದ್ದರೆ, ಉಳಿದೆಂಟು ಪಂದ್ಯದಲ್ಲಿ ಸೋಲುಂಡಿದೆ. ಅಂತೆಯೆ ಚೇಸಿಂಗ್ ಪಡೆದುಕೊಂಡು ಭಾರತ 18 ಪಂದ್ಯಗಳನ್ನಾಡಿದೆ. ಇದರಲ್ಲಿ 14 ಪಂದ್ಯ ಗೆದ್ದರೆ, ಕೇವಲ 3 ಪಂದ್ಯಗಳಲ್ಲಿ ಮಾತ್ರ ಸೋಲುಂಡಿದೆ.

India vs West Indies: ವಿಂಡೀಸ್ ಬ್ಯಾಟ್ಸ್​ಮನ್​ಗಳ ಅಬ್ಬರಕ್ಕೆ ತಲೆಬಾಗಿದ ಭಾರತ; ಸರಣಿ ಸಮಬಲ

ಅಂಕಿ-ಅಂಶಗಳನ್ನು ಗಮನಿಸಿದರೆ ಭಾರತ ಚೇಸಿಂಗ್​ನಲ್ಲಿ ಮಾತ್ರ ಬಲಿಷ್ಠ ಎಂಬಂತಿದೆ. ಮುಂದಿನ ವರ್ಷ ಟಿ-20 ವಿಶ್ವಕಪ್ ನಡೆಯಲಿದೆ. ಇದಕ್ಕೂ ಮುನ್ನ ಕೊಹ್ಲಿ ಪಡೆ ಯಾವುದೆ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಲು ತಯಾರಿರಬೇಕಿದೆ. ಅಲ್ಲದೆ ಪ್ರಮುಖ ಬೌಲರ್​ಗಳು ವಿಕೆಟ್ ಕೀಳುವಲ್ಲಿ ವೈಫಲ್ಯ ಅನುಭವಿಸಿದ್ದು, ಫೀಲ್ಡಿಂಗ್​ನಲ್ಲೂ ಶಕ್ತಿ ಪ್ರದರ್ಶಿಸಬೇಕಿದೆ.

First published: