IND vs WI: ಮೊದಲ ಏಕದಿನ ಮಳೆಗೆ ಆಹುತಿ; ಬೇಸರ ವ್ಯಕ್ತ ಪಡಿಸಿದ ಕೊಹ್ಲಿ

ವೆಸ್ಟ್​ ಇಂಡೀಸ್ 13 ಓವರ್​ಗೆ 54 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದ ವೇಳೆ ಮತ್ತೆ ಪುನಃ ಮಳೆಯದ್ದೇ ಆಟ ಮುಂದುವರೆಯಿತು. ಪರಿಣಾಮ ಆಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು.

Vinay Bhat | news18
Updated:August 9, 2019, 8:55 AM IST
IND vs WI: ಮೊದಲ ಏಕದಿನ ಮಳೆಗೆ ಆಹುತಿ; ಬೇಸರ ವ್ಯಕ್ತ ಪಡಿಸಿದ ಕೊಹ್ಲಿ
ಟೀಂ ಇಂಡಿಯಾ
Vinay Bhat | news18
Updated: August 9, 2019, 8:55 AM IST
ಬೆಂಗಳೂರು (ಆ. 09): ಗಯಾನದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿದೆ.

ಪಂದ್ಯ ಆರಂಭಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಓವರ್ ಕಡಿತಗೊಳಿಸಿ ತಲಾ 43 ಓವರ್​​ಗಳ ಪಂದ್ಯವನ್ನು ನಿಗದಿ ಪಡಿಸಲಾಯಿತು. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಅಂತೆಯೆ ಬ್ಯಾಟಿಂಗ್ ಆರಂಭಿಸಿದ ವೆಸ್ಟ್​ ಇಂಡೀಸ್ 5 ಓವರ್ ಆಗುವ ಹೊತ್ತಿಗೆ ಮತ್ತೆ ವರುಣನ ಕಾಟ ಆರಂಭವಾಯಿತು. ಇನ್ನೊಂದಿಷ್ಟು ಹೊತ್ತು ಕಾದು ಡಕ್ವರ್ತ್​​ ಲೂಯಿಸ್ ನಿಯಮದ ಪ್ರಕಾರ 34 ಓವರ್​ಗಳ ಪಂದ್ಯವನ್ನಾಡಲು ನಿರ್ಧಾರ ಮಾಡಲಾಯಿತು.

ಬಳಿಕ ವೆಸ್ಟ್​ ಇಂಡೀಸ್ 13 ಓವರ್​ಗೆ 54 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದ ವೇಳೆ ಮತ್ತೆ ಪುನಃ ಮಳೆಯದ್ದೇ ಆಟ ಮುಂದುವರೆಯಿತು. ಪರಿಣಾಮ ಆಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಕ್ರಿಸ್ ಗೇಲ್ 41 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿದ್ದಾಗ ಕುಲ್ದೀಪ್ ಯಾದವ್ ಬೌಲಿಂಗ್​ನಲ್ಲಿ ಬೌಲ್ಡ್​ ಆಗಿ ಒಂದು ವಿಕೆಟ್ ಪಡೆದುಕೊಂಡರು.

ಎವಿನ್ ಲೆವಿಸ್ 40 ಹಾಗೂ ವಿಕೆಟ್ ಕೀಪರ್ ಶಾಯ್ ಹೋಪ್ 6 ರನ್ ಗಳಿಸಿ ಅಜೇಯರಾಗಿ ಉಳಿದರು.

ಪಂದ್ಯ ರದ್ದಾದ ಬಗ್ಗೆ ಬೇಸರ ವ್ಯಕ್ತ ಪಡಿಸಿದ ನಾಯಕ ಕೊಹ್ಲಿ, ‘ಪಿಚ್ ಹಸಿಯಾಗಿರುವುದರಿಂದ ಬ್ಯಾಟಿಂಗ್ ಮಾಡುವುದು ತುಂಬಾನೇ ಕಷ್ಟ. ಹೀಗಾಗಿ ಟಾಸ್ ಗೆದ್ದ ನಾವು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿಲ್ಲ. ನಮ್ಮ ಬೌಲರ್‌ಗಳು ಎದುರಾಳಿ ತಂಡವನ್ನು ಸಣ್ಣಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸವಿತ್ತು. ಆದರೆ, ಪಂದ್ಯ ರದ್ದಾಗುವುದು ಕ್ರಿಕೆಟ್​ನಲ್ಲಿ ಅತ್ಯಂತ ಕೆಟ್ಟ ವಿಚಾರ. ಆಟ ಆಡುವುದು-ನಿಲ್ಲಿಸುವುದು ಉತ್ತಮವಾಗಿರುವುದಿಲ್ಲ' ಎಂದು ಹೇಳಿದ್ದಾರೆ.

ಭಾರತ-ವಿಂಡೀಸ್ ನಡುವಣ ಎರಡನೇ ಏಕದಿನ ಪಂದ್ಯ ಆಗಸ್ಟ್​ 11 ರಂದು ಟ್ರಿನಿಡಾಡ್​ನಲ್ಲಿ ನಡೆಯಲಿದೆ.

First published:August 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...