ವಿರಾಟ್ ಕೊಹ್ಲಿ ಈ ಒಂದು ವಿಚಾರದಲ್ಲಿ ಸ್ಥಿರವಿಲ್ಲ ಎಂದ ಗಂಗೂಲಿ

ಆಟಗಾರರನ್ನು ಸ್ವಾತಂತ್ರ್ಯವಾಗಿ ಆಡಲು ಬಿಡಬೇಕು. ಈ ರೀತಿಯ ಕಾರ್ಯ ನಡೆದರೆ ಭಾರತ ತಂಡದಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬರುತ್ತಾರೆ- ಸೌರವ್ ಗಂಗೂಲಿ

Vinay Bhat | news18
Updated:August 24, 2019, 2:57 PM IST
ವಿರಾಟ್ ಕೊಹ್ಲಿ ಈ ಒಂದು ವಿಚಾರದಲ್ಲಿ ಸ್ಥಿರವಿಲ್ಲ ಎಂದ ಗಂಗೂಲಿ
ವಿರಾಟ್ ಕೊಹ್ಲಿ
  • News18
  • Last Updated: August 24, 2019, 2:57 PM IST
  • Share this:
ಬೆಂಗಳೂರು (ಆ. 24): ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದು ಒಂದು ವಿಚಾರದಲ್ಲಿ ಅವರು ಸ್ಥಿರವಿಲ್ಲ ಎಂದು ಹೇಳಿದ್ದಾರೆ. ಒಂದು ಪಂದ್ಯಕ್ಕೆ ಆಡುವ ಬಳಗವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕೊಹ್ಲಿ ಸ್ಥಿರವಾಗಿಲ್ಲ. ಅವರು ಇನ್ನಷ್ಟು ಇದರ ಬಗ್ಗೆ ಯೋಚಿಸಿ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕೆಂದು ಗಂಗೂಲಿ ಹೇಳಿದ್ದಾರೆ.

'ಆಟಗಾರರನ್ನು ಆಯ್ಕೆ ಮಾಡುವುದರಲ್ಲಿ ಮತ್ತು ಮತ್ತಷ್ಟು ಅವಕಾಶ ನೀಡುವುದರ ಬಗ್ಗೆ ಕೊಹ್ಲಿ ಹೆಚ್ಚು ಕಲಿಯಬೇಕಿದೆ. ಶ್ರೇಯಸ್ ಐಯರ್ ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಯಾವರೀತಿ ಪ್ರದರ್ಶನ ನೀಡಿದರು ಎಂಬುದನ್ನು ನೀವೇ ನೋಡಿದ್ದೀರಿ'.

'ಆಟಗಾರರನ್ನು ಸ್ವಾತಂತ್ರ್ಯವಾಗಿ ಆಡಲು ಬಿಡಬೇಕು. ಈ ರೀತಿಯ ಕಾರ್ಯ ನಡೆದರೆ ಭಾರತ ತಂಡದಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬರುತ್ತಾರೆ. ಮತ್ತು ಕೊಹ್ಲಿ ಇದನ್ನು ಖಂಡಿತವಾಗಿಯೂ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಯೂ-ಟರ್ನ್​ ಹೊಡೆದ ರಾಯುಡು; ನಿವೃತ್ತಿ ಹಿಂಪಡೆದು ಮತ್ತೆ ಐಪಿಎಲ್, ಟೀಂ ಇಂಡಿಯಾದತ್ತ ಚಿತ್ತ!

India vs West Indies: Sourav Ganguly points at one area where skipper Virat Kohli can be more consistent
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ


ಈಗಾಗಲೇ ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ಗೆ ಆಟಗಾರರನ್ನು ಆಯ್ಕೆ ಮಾಡಿದ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಆರ್. ಅಶ್ವಿನ್, ರೋಹಿತ್ ಶರ್ಮಾ ಹಾಗೂ ಕುಲ್ದೀಪ್ ಯಾದವ್​ರನ್ನು ಆಡುವ ಬಳಗದಿಂದ ಬಿಟ್ಟು ಓರ್ವ ಸ್ಪಿನ್ನರ್ ಜಡೇಜಾ ಜೊತೆ ಶಮಿ, ಇಶಾಂತ್ ಶರ್ಮಾ ಹಾಗೂ ಬುಮ್ರಾ ಅವಕಾಶ ಪಡೆದಿದ್ದರು.

ಈ ಬಗ್ಗೆ ಮಾತನಾಡಿದ ಗಂಗೂಲಿ, 'ಕುಲ್ದೀಪ್ ಯಾದವ್​ರನ್ನು ಕೈಬಿಟ್ಟಿದ್ದು ನಿಜಕ್ಕೂ ಆಘಾತಕಾರಿ ಸುದ್ದಿ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್​ನಲ್ಲಿ ಯಾದವ್ 5 ವಿಕೆಟ್ ಕಿತ್ತು ಮಿಂಚಿದ್ದರು. ಜಡೇಜಾ ಕೂಡ ಉತ್ತಮ ಫಾರ್ಮ್​ನಲ್ಲಿದ್ದಾರೆ.'24 ಆಗಸ್ಟ್ 1971: ಭಾರತ ಕ್ರಿಕೆಟ್ ತಂಡ ಆಂಗ್ಲರಿಗೆ ಮಣ್ಣು ಮುಕ್ಕಿಸಿ ಚೊಚ್ಚಲ ಟೆಸ್ಟ್​ ಗೆದ್ದ ದಿನ!

'ಸದ್ಯ ಸಾಗುತ್ತಿರುವ ಮೊದಲ ಇನ್ನಿಂಗ್ಸ್​​ನಲ್ಲಿ ಭಾರತೀಯ ಬೌಲರ್​ಗಳ ಪ್ರದರ್ಶನ ನೋಡುವುದಾದರೆ, ವೇಗಿಗಳು ಯಶಸ್ಸು ಸಾಧಿಸುತ್ತಿದ್ದಾರೆ. ಇನ್ನೂ ಕೆಲ ದಿನಗಳ ಆಟ ಬಾಕಿಯಿದ್ದು ಜಡೇಜಾರ ಸ್ಪಿನ್ ಮೇಲೆ ನಿರೀಕ್ಷೆಯಿದೆ' ಎಂದು ಗಂಗೂಲಿ ಹೇಳಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ