6,6, 4, 6, 6: ಭಾರತ ಪರ ನೂತನ ದಾಖಲೆ ಬರೆದ ರಿಷಭ್ ಪಂತ್- ಶ್ರೇಯಸ್ ಐಯರ್!

ಈ ಪಂದ್ಯದ 46ನೇ ಓವರ್​ನಲ್ಲೂ ಶೆಲ್ಡನ್ ಕಾಟ್ರೆಲ್ ಬೌಲಿಂಗ್​ನಲ್ಲಿ ಪಂತ್ ಮೂರು ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 24 ರನ್ ಬಾರಿಸಿದರು. ಪಂತ್ ಹಾಗೂ ಐಯರ್ ಕೇವಲ 24 ಎಸೆತಗಳಲ್ಲಿ ಬರೋಬ್ಬರು 73 ರನ್ ಗಳಿಸಿದರು.

Vinay Bhat | news18-kannada
Updated:December 18, 2019, 7:10 PM IST
6,6, 4, 6, 6: ಭಾರತ ಪರ ನೂತನ ದಾಖಲೆ ಬರೆದ ರಿಷಭ್ ಪಂತ್- ಶ್ರೇಯಸ್ ಐಯರ್!
ರಿಷಭ್ ಪಂತ್ ಹಾಗೂ ಶ್ರೇಯಸ್ ಐಯರ್
  • Share this:
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಆರ್ಭಟಿಸಿದರು. ಅದರಲ್ಲು ಡೆತ್ ಓವರ್​ನಲ್ಲಿ ಶ್ರೇಯಸ್ ಐಯರ್ ಹಾಗೂ ರಿಷಭ್ ಪಂತ್ ಸ್ಪೋಟಕ ಆಟವಾಡಿ ನೂತನ ದಾಖಲೆಯನ್ನೇ ಬರೆದರು.

ಪಂತ್ ಹಾಗೂ ಐಯರ್ ಏಕದಿನ ಕ್ರಿಕೆಟ್​ನ ಒಂದೇ ಓವರ್​ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಸಿಡಿಸಿ ದಾಖಲೆ ಬರೆದಿದ್ದಾರೆ. 47ನೇ ಓವರ್​ನ​ ರಾಸ್ಟನ್ ಚೇಸ್ ಓವರ್​ನಲ್ಲಿ ಭಾರತ ಬರೋಬ್ಬರಿ 31 ರನ್ ಚಚ್ಚಿತು. ಶ್ರೇಯಸ್ 4 ಸಿಕ್ಸ್​ ಹಾಗೂ 1 ಬೌಂಡರಿ ಸಿಡಿಸಿದರೆ, ಪಂತ್ 1 ರನ್ ಕಲೆಹಾಕಿದರು. ಜೊತೆಗೆ ಈ ಓವರ್​ನಲ್ಲಿ ನೋ ಬಾಲ್ ಕೂಡ ಮೂಡಿಬಂತು.

(VIDEO): ತಾನೇ ಬಾರಿಸಿದ ಸಿಕ್ಸ್​ ನೋಡಿ ಶಾಕ್ ಆದ ರೋಹಿತ್ ಶರ್ಮಾ!; ಹಿಟ್​ಮ್ಯಾನ್​ನಿಂದ ದಾಖಲೆಯ ಆಟ!

 ಹೀಗಾಗಿ ಪಂತ್- ಐಯರ್ ಜೋಡಿ 31 ರನ್ ಗಳಿಸಿ ಭಾರತ ಪರ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ದಾಖಲೆ ಬರೆದರು. ಇದಕ್ಕೂ ಮೊದಲು 1999 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಹೈದರಾಬಾದ್​ನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಅಜಯ್ ಜಡೇಜಾ ಓವರ್ ಒಂದರಲ್ಲಿ 28 ರನ್ ಗಳಿಸಿದ್ದು ದಾಖಲೆಯಾಗಿತ್ತು. ಸದ್ಯ ಈ ಸಾಧನೆಯನ್ನು ಪಂತ್- ಐಯರ್ ಮುರಿದಿದ್ದಾರೆ.India vs West Indies Live: ರೋಹಿತ್-ರಾಹುಲ್ ಶತಕ, ಪಂತ್-ಐಯರ್ ಸ್ಫೋಟಕ ಆಟ; ಭಾರತ: 387/5

ಇನ್ನು ಪಂತ್- ಐಯರ್ 31 ರನ್ ಗಳಿಸಿದ್ದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ 7ನೇ ಅತಿ ಹೆಚ್ಚು ಸ್ಕೋರ್ ಆಗಿದೆ. ಒಂದು ಓವರ್​ನಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ದ. ಆಫ್ರಿಕಾ ಮಾಜಿ ಆಟಗಾರ ಹರ್ಷೆಲ್ ಗಿಬ್ಸ್ ಹೆಸರಿನಲ್ಲಿದೆ. ಅವರು 2003ರ ವಿಶ್ವಕಪ್​ನಲ್ಲಿ ನೆದರ್​ಲೆಂಡ್ ವಿರುದ್ಧ ಒಂದು ಓವರ್​ನ 6 ಎಸೆದಲ್ಲಿ 6 ಸಿಕ್ಸ್ ಚಚ್ಚಿದ್ದರು.ಈ ಪಂದ್ಯದ 46ನೇ ಓವರ್​ನಲ್ಲೂ ಶೆಲ್ಡನ್ ಕಾಟ್ರೆಲ್ ಬೌಲಿಂಗ್​ನಲ್ಲಿ ಪಂತ್ ಮೂರು ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 24 ರನ್ ಬಾರಿಸಿದರು. ಪಂತ್ ಹಾಗೂ ಐಯರ್ ಕೇವಲ 24 ಎಸೆತಗಳಲ್ಲಿ ಬರೋಬ್ಬರು 73 ರನ್ ಗಳಿಸಿದರು. ಭಾರತ 50 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳಿಸಿತು.
First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ