ಬೆಂಗಳೂರು (ನ. 27): ಅಂದುಕೊಂಡಂತೆ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಿಂದ ಶಿಖರ್ ಧವನ್ ಅವರನ್ನು ಕೈಬಿಡಲಾಗಿದೆ. ಇವರ ಬದಲು ವಿಕೆಟ್ ಕೀಪರ್- ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.
ಮೊಣಕಾಲು ನೋವಿನಿಂದ ಬಳಲುತ್ತಿರುವ
ಧವನ್ ಸದ್ಯ ಸಾಗುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಿಂದಲೂ ಹೊರ ನಡೆದಿದ್ದರು. ಬಿಸಿಸಿಐ ವೈದ್ಯಾಧಿಕಾರಿಗಳು ಧವನ್ರನ್ನು ಪರೀಕ್ಷೆ ನಡೆಸಿದ್ದು, ಇನ್ನೊಂದಿಷ್ಟು ದಿನ ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
MS Dhoni: ಟಿ-20 ವಿಶ್ವಕಪ್ಗೆ ಧೋನಿ ಬೇಕೋ- ಬೇಡವೋ?; ಕೋಚ್ ರವಿಶಾಸ್ತ್ರಿ ಹೇಳಿದ್ದೇನು ಗೊತ್ತಾ?
ಇದಕ್ಕೂ ಮುನ್ನ ಸ್ಯಾಮ್ಸನ್ ಅವರು ವಿಂಡೀಸ್ ಸರಣಿಗೆ ಆಯ್ಕೆಯಾಗದೆ ಇರುವುದುಕ್ಕೆ ಕ್ರೀಡಾ ವಲಯದಿಂದಲೇ ಆಯ್ಕೆ ಸಮಿತಿ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಸದ್ಯ ಬಿಸಿಸಿಐ ಆಯ್ಕೆ ಸಮಿತಿ ಧವನ್ ಬದಲು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
![India vs West Indies: Shikhar Dhawan a doubtful starter for West Indies T20Is Chance to Sanju Samson]()
ಸಂಜು ಸ್ಯಾಮ್ಸನ್
ಶಿಖದರ್ ಧವನ್ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿ ವೇಳೆ ರನ್ ಕದಿಯುವಾಗ ಡೈವ್ ಹೊಡೆದಿದ್ದು, ಸಣ್ಣ ಮರದ ತುಂಡು ಮಂಡಿಯ ಭಾಗಕ್ಕೆ ತಾಗಿ ಭಾರಿ ಪ್ರಮಾಣ ರಕ್ತ ಸೋರಿದೆ. ಪೆವಿಲಿಯನ್ ಸೇರುತ್ತಲೇ ಧವನ್ ಆಸ್ಪತ್ರೆಗೆ ತೆರಳಿದ್ದರು. ಸದ್ಯ ಇದರಿಂದ ಗುಣಮುಖರಾಗಲು ಕೆಲ ದಿನಗಳ ವಿಶ್ರಾಂತಿ ಬೇಕಾಗಿದೆಯಂತೆ.
ಕಳೆದ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಅವಕಾಶ ಪಡೆದುಕೊಂಡರೂ ಸ್ಯಾಮ್ಸನ್ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೂರು ಪಂದ್ಯಗಳಲ್ಲೂ ಬೆಂಚ್ ಕಾದಿದ್ದ ಇವರು ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಮೂಲಕ ಕಣಕ್ಕಿಳಿಯಲಿದ್ದಾರೆ ಬಹತೇಕ ಖಚಿತವಾಗಿದೆ.
ಏಕದಿನ ಸರಣಿಯಿಂದ ಗೇಲ್ ಔಟ್:
ಭಾರತ ವಿರುದ್ಧದ ಏಕದಿನ ಸರಣಿಯಿಂದ ವೆಸ್ಟ್ ಇಂಡೀಸ್ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹೊರಗುಳಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಗೇಲ್, "ಆಯ್ಕೆಗಾರರು ನಾನು ಭಾರತ ಪ್ರವಾಸಕ್ಕೆ ತೆರಳಬೇಕು ಎಂದು ಬಯಸುತ್ತಿದ್ದಾರೆ. ಆದರೆ ನಾನು ಭಾರತದ ವಿರುದ್ಧ ಆಡುತ್ತಿಲ್ಲ. ಕ್ರಿಕೆಟ್ನಿಂದ ಕೊಂಚ ವಿರಾಮ ತೆಗೆದುಕೊಂಡು 2020ರಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ20 ಗಳ ಪಂದ್ಯಗಳತ್ತ ಗಮನಹರಿಸಬೇಕಿದೆ" ಎಂದು ಹೇಳಿದ್ದಾರೆ. ಜೊತೆಗೆ ಬಿಗ್ ಬ್ಯಾಷ್ ಲೀಗ್ ಹಾಗೂ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲೂ ಆಡಲ್ಲ ಎಂದು ಗೇಲ್ ಹೇಳಿದ್ದಾರೆ.
Happy Birthday Suresh Raina: 33ನೇ ವಸಂತಕ್ಕೆ ಕಾಲಿಟ್ಟ ಚಿನ್ನ ತಲ ಸುರೇಶ್ ರೈನಾ
ವೆಸ್ಟ್ ಇಂಡೀಸ್ ಸರಣಿಗೆ ಈ ಹಿಂದೆ ಬಿಸಿಸಿಐ ಪ್ರಕಟಿಸಿರುವ ಭಾರತ ತಂಡ:
ಟಿ-20 ಪಂದ್ಯ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್ ರಾಹುಲ್, ರಿಷಭ್ ಪಂತ್, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ದೀಪಕ್ ಚಹರ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ಶಿವಂ ದುಬೇ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಸಂಜು ಸ್ಯಾಮ್ಸನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ