ವಿಂಡೀಸ್ ವಿರುದ್ಧದ ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ಆಟಗಾರ ಔಟ್?; ಹೊಸ ವಿಕೆಟ್ ಕೀಪರ್​ಗೆ ಸ್ಥಾನ!

ಕಳೆದ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಅವಕಾಶ​ ಪಡೆದುಕೊಂಡರೂ ಸ್ಯಾಮ್ಸನ್​ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೂರು ಪಂದ್ಯಗಳಲ್ಲೂ ಬೆಂಚ್​ ಕಾದಿದ್ದ ಇವರು​ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿ ಮೂಲಕ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

Vinay Bhat | news18-kannada
Updated:November 27, 2019, 8:22 AM IST
ವಿಂಡೀಸ್ ವಿರುದ್ಧದ ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ಆಟಗಾರ ಔಟ್?; ಹೊಸ ವಿಕೆಟ್ ಕೀಪರ್​ಗೆ ಸ್ಥಾನ!
ಟೀಂ ಇಂಡಿಯಾ ಆಟಗಾರರು
  • Share this:
ಬೆಂಗಳೂರು (ನ. 27): ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಗೆ ಈಗಾಗಲೇ ಟೀಂ ಇಂಡಿಯಾ ಪ್ರಕಟವಾಗಿದೆ. ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಡಿ. 6 ರಂದು ಮೊದಲ ಪಂದ್ಯ ನಡೆಯಲಿದೆ. ಆದರೆ, ಟಿ-20 ಸರಣಿಯಿಂದ ಭಾರತದ ಪ್ರಮುಖ ಆರಂಭಿಕ ಆಟಗಾರ ಶಿಖರ್ ಧವನ್ ಹೊರಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಮೊಣಕಾಲು ನೋವಿನಿಂದ ಬಳಲುತ್ತಿರುವ ಧವನ್ ಸದ್ಯ ಸಾಗುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಯಿಂದಲೂ ಹೊರ ನಡೆದಿದ್ದರು. ಇಂಗ್ಲಿಷ್ ಪತ್ರಕೆಯೊಂದರ ವರದಿ ಪ್ರಕಾರ ಧವನ್ ವೆಸ್ಟ್​ ಇಂಡೀಸ್ ವಿರುದ್ಧದ ಟಿ-20 ಸರಣಿಯಿಂದಲೂ ಹೊರಗುಳಿದಿದ್ದಾರಂತೆ.

 

ನಾನು ಕಲಿತಿದ್ದೇ ನಿಮ್ಮಿಂದ: ಸೌರವ್ ಗಂಗೂಲಿಯ ಕಾಲೆಳೆದ ಮಗಳು ಸನಾ

ಧವನ್ ಜಾಗಕ್ಕೆ ಹೊಸ ಆಟಗಾರನಾಗಿ ವಿಕೆಟ್ ಕೀಪರ್- ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್ ಆಯ್ಕೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಸ್ಯಾಮ್ಸನ್ ಅವರು ವಿಂಡೀಸ್ ಸರಣಿಗೆ ಆಯ್ಕೆಯಾಗದೆ ಇರುವುದುಕ್ಕೆ ಕ್ರೀಡಾ ವಲಯದಿಂದಲೇ ಆಯ್ಕೆ ಸಮಿತಿ ವಿರುದ್ಧ ಟೀಕೆಗಳು ಕೇಳಿಬಂದಿದ್ದವು.

India vs West Indies: Shikhar Dhawan a doubtful starter for West Indies T20Is Chance to Sanju Samson
ಸಂಜು ಸ್ಯಾಮ್ಸನ್


ಕಳೆದ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಲ್ಲಿ ಅವಕಾಶ​ ಪಡೆದುಕೊಂಡರೂ ಸ್ಯಾಮ್ಸನ್​ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಮೂರು ಪಂದ್ಯಗಳಲ್ಲೂ ಬೆಂಚ್​ ಕಾದಿದ್ದ ಇವರು​ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿ ಮೂಲಕ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ಏಕದಿನ ಸರಣಿಯಿಂದ ಗೇಲ್ ಔಟ್:

ಭಾರತ ವಿರುದ್ಧದ ಏಕದಿನ ಸರಣಿಯಿಂದ ವೆಸ್ಟ್​ ಇಂಡೀಸ್​ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹೊರಗುಳಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಗೇಲ್, "ಆಯ್ಕೆಗಾರರು ನಾನು ಭಾರತ ಪ್ರವಾಸಕ್ಕೆ ತೆರಳಬೇಕು ಎಂದು ಬಯಸುತ್ತಿದ್ದಾರೆ. ಆದರೆ ನಾನು ಭಾರತದ ವಿರುದ್ಧ ಆಡುತ್ತಿಲ್ಲ. ಕ್ರಿಕೆಟ್​ನಿಂದ ಕೊಂಚ ವಿರಾಮ ತೆಗೆದುಕೊಂಡು 2020ರಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ20 ಗಳ ಪಂದ್ಯಗಳತ್ತ ಗಮನಹರಿಸಬೇಕಿದೆ" ಎಂದು ಹೇಳಿದ್ದಾರೆ. ಜೊತೆಗೆ ಬಿಗ್ ಬ್ಯಾಷ್​ ಲೀಗ್​ ಹಾಗೂ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನಲ್ಲೂ ಆಡಲ್ಲ ಎಂದು ಗೇಲ್ ಹೇಳಿದ್ದಾರೆ.

ನೂತನ ಟೆಸ್ಟ್​ ರ‍್ಯಾಂಕಿಂಗ್‌ ಪಟ್ಟಿ ಪ್ರಕಟ: ಕನ್ನಡಿಗನ ಸರ್ವಶ್ರೇಷ್ಠ ಸಾಧನೆ

ವೆಸ್ಟ್​ ಇಂಡೀಸ್ ಸರಣಿಗೆ ಈ ಹಿಂದೆ ಬಿಸಿಸಿಐ ಪ್ರಕಟಿಸಿರುವ ಭಾರತ ತಂಡ:

ಟಿ-20 ಪಂದ್ಯ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್ ರಾಹುಲ್‌, ಶಿಖರ್‌ ಧವನ್‌, ರಿಷಭ್‌ ಪಂತ್‌, ಯಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ದೀಪಕ್‌ ಚಹರ್‌, ಮನೀಶ್‌ ಪಾಂಡೆ, ಶ್ರೇಯಸ್‌ ಅಯ್ಯರ್‌, ಶಿವಂ ದುಬೇ, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ.

ಭಾರತ ಏಕದಿನ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಶ್ರೇಯಸ್‌ ಅಯ್ಯರ್‌, ಕೇದರ್‌ ಜಾಧವ್‌, ಶಿಖರ್‌ ಧವನ್‌, ಕೆ.ಎಲ್‌ ರಾಹುಲ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ರವೀಂದ್ರ ಜಡೇಜಾ, ಶಿವಂ ದುಬೇ, ಯಜುವೇಂದ್ರ ಚಹಲ್‌, ದೀಪಕ್‌ ಚಹರ್‌ ಮತ್ತು ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ.

First published: November 27, 2019, 8:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading