ಬೆಂಗಳೂರು (ಡಿ. 08): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ತಿರುವನಂತಪುರಂನ ಗ್ರೀನ್ಪೀಲ್ಡ್ ಕ್ರೀಡಾಂಗಣ ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಕೊಹ್ಲಿ ಪಡೆ ಸರಣಿ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಈಗಾಗಲೇ ಉಭಯ ತಂಡಗಳು ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ.
ಈ ನಡುವೆ ಟೀಂ ಇಂಡಿಯಾ ಆಟಗಾರರು ಹೈದರಾಬಾದ್ನಿಂದ ತೆರಳಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು. ಅದರಲ್ಲು ತವರಿನ ಆಟಗಾರ
ಸಂಜು ಸ್ಯಾಮ್ಸನ್ ಬರುತ್ತಿದ್ದಂತೆ ಏರ್ಪೋರ್ಟ್ನಲ್ಲಿದ್ದ ಅನೇಕರು ಅವರ ಹೆಸರನ್ನು ಕೂಗಿ ಅದ್ದೂರಿಯಾಗಿ ಬರಮಾಡಿಕೊಂಡರು.
RCB: ಈವರೆಗೆ ಕ್ರಿಕೆಟ್ ಅನ್ನೇ ಆಡದ ಆಟಗಾರನನ್ನು ಖರೀದಿಸಲು ಮುಂದಾಗಿದೆ ಆರ್ಸಿಬಿ?
ಸಂಜು ಸ್ಯಾಮ್ಸನ್ ವಿಮಾನದಿಂದ ಇಳಿದು ಬಸ್ನತ್ತ ತೆರಳುತ್ತಿರುವಾಗ ಅಭಿಮಾನಿಗಳು "ಸಂಜು ಸಂಜು" ಎಂದು ಕೂಗಿದರು. ನಗುತ್ತಲೆ ಬಸ್ ಏರಿದ ಸ್ಯಾಮ್ಸನ್ ಬಳಿಕ ಅಭಿಮಾನಿಗಳಿಗೆ ಕೈ ಸನ್ನೆ ಮೂಲಕ ಧನ್ಯವಾದ ಎಂದರು. ಈ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಭಾರತಕ್ಕೆ ಸರಣಿ ಗೆಲುವಿನ ಗುರಿ; ವಿಂಡೀಸ್ಗೆ ಗೆಲ್ಲ ಬೇಕಾದ ಒತ್ತಡ; ಅಗ್ರಸ್ಥಾನಕ್ಕೆ ಕೊಹ್ಲಿ-ರೋಹಿತ್ ಹೋರಾಟ!
ಟೀಂ ಇಂಡಿಯಾಕ್ಕೆ ಆಯ್ಕೆಯಾದರು ಮಿಂಚಲು ಅವಕಾಶಕ್ಕಾಗಿ ಕಾಯುತ್ತಿರುವ ಸ್ಯಾಮ್ಸನ್ ಇಂದಿನ ಪಂದ್ಯದಲ್ಲಾದರು ಕಣಕ್ಕಿಳಿಯುತ್ತಾರ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಲ್ಲದೆ ಸ್ಯಾಮ್ಸನ್ಗೆ ಇದು ತವರಿನ ಮೈದಾನವಾಗಿದ್ದು ಅವಕಾಶ ಸಿಕ್ಕರೆ ಅಬ್ಬರಿಸುವುದು ಕಂಡಿತ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ.
ಶಿಖರ್ ಧವನ್ ಇಂಜುರಿಗೆ ತುತ್ತಾದ ಪರಿಣಾಮ ವೆಸ್ಟ್ ಇಂಡೀಸ್ ವಿರುದ್ಧದ
ಟಿ-20 ಸರಣಿಗೆ ಆಯ್ಕೆಯಾದ ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಬೆಂಚ್ ಕಾಯಬೇಕಾಗಿ ಬಂತು. ಅಲ್ಲದೆ ಕಳೆದ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೂ ಸಂಜು ಆಯ್ಕೆಯಾಗಿದ್ದರು. ಆದರೆ, ಅಲ್ಲಿಯೂ ಮೂರು ಪಂದ್ಯಗಳಲ್ಲಿ ಇವರನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿರಲಿಲ್ಲ.
IND vs WI: ಇಂದು 2ನೇ ಟಿ-20 ಕದನ; ಟೀಂ ಇಂಡಿಯಾದಲ್ಲಿ ಇಂದು ಪ್ರಮುಖ ಬದಲಾವಣೆ ಸಾಧ್ಯತೆ!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ನಾಯಕ ವಿರಾಟ್ ಕೊಹ್ಲಿಯ ಅಜೇಯ 94 ರನ್ಗಳ ನೆರವಿನಿಂದ 6 ವಿಕೆಟ್ಗಳ ಭರ್ಜರಿ ಗೆಲುವು ಕಂಡಿತ್ತು. 200+ ರನ್ ಚೇಸ್ ಮಾಡಿ ದಾಖಲೆ ಬರೆದಿತ್ತು. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇಂದಿನ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ.
ಭಾರತ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಕೆರಿಬಿಯನ್ನರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಹೀಗಾಗಿ ತಿರುವನಂತಪುರಂನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ