ಇದು ಅಂತರಾಷ್ಟ್ರೀಯ ಕ್ರಿಕೆಟ್, ಸ್ಕೂಲ್ ಪಂದ್ಯವಲ್ಲ; ಸ್ಯಾಮ್ಸನ್ ಹೊರಗಿಟ್ಟಿದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು!

ಕಳೆದ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೂ ಸ್ಯಾಮ್ಸನ್ ಆಯ್ಕೆಯಾಗಿದ್ದರು, ಆದರೆ, ಅಲ್ಲಿ ಬೆಂಚ್ ಕಾದಿದ್ದು ಬಿಟ್ಟರೆ ಇವರಿಗೆ ಒಂದು ಪಂದ್ಯದಲ್ಲೂ ಆಡಲು ಅವಕಾಶ ನೀಡಲಿಲ್ಲ.

Vinay Bhat | news18-kannada
Updated:December 6, 2019, 7:04 PM IST
ಇದು ಅಂತರಾಷ್ಟ್ರೀಯ ಕ್ರಿಕೆಟ್, ಸ್ಕೂಲ್ ಪಂದ್ಯವಲ್ಲ; ಸ್ಯಾಮ್ಸನ್ ಹೊರಗಿಟ್ಟಿದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು!
ಸಂಜು ಸ್ಯಾಮ್ಸನ್
  • Share this:
ಬೆಂಗಳೂರು (ಡಿ. 06): ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆಯಾದರು ಅವಕಾಶಕ್ಕಾಗಿ ಕಾಯುತ್ತಿರುವ ಸಂಜು ಸ್ಯಾಮ್ಸನ್​ರನ್ನು ಮಾತ್ರ ಹೊರಗಿಟ್ಟಿದೆ.

ಸ್ಯಾಮ್ಸನ್​ರನ್ನು ಈ ಬಾರಿಯೂ ಆಡುವ ಬಳಗಕ್ಕೆ ಆಯ್ಕೆ ಮಾಡದ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. "ಟಿ-20 ವಿಶ್ವಕಪ್​ಗೂ ಮುನ್ನ ಸ್ಯಾಮ್ಸನ್​ರನ್ನು ಆಡಿಸದಿರಲು ಕಾರಣವೇನು?, ನಂಬಿಕೆ ಉಳಿಸಿಕೊಳ್ಳಲು ಪಂತ್​ಗೆ ಎಷ್ಟು ಅವಕಾಶ ನೀಡುತ್ತೀರಿ?, ಇದು ಅಂತರಾಷ್ಟ್ರೀಯ ಕ್ರಿಕೆಟ್, ಸ್ಕೂಲ್ ಪಂದ್ಯವಲ್ಲ" ಎಂದು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

 India vs West Indies Live Score: ಟಾಸ್ ಗೆದ್ದ ಭಾರತ; ಆಡುವ ಬಳಗಕ್ಕೆ ಆಯ್ಕೆಯಾಗದ ಸ್ಯಾಮ್ಸನ್!

ವಿಂಡೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಶಿಖರ್ ಧವನ್ ಇಂಜುರಿಗೆ ತುತ್ತಾದ ಪರಿಣಾಮ ಬದಲಿ ಆಟಗಾರನಾಗಿ ಸಂಜು ಸ್ಯಾಮ್ಸನ್​ರನ್ನು ಆಯ್ಕೆ ಮಾಡಿತ್ತು. ಹೀಗಾಗಿ ಮೊದಲ ಪಂದ್ಯದಲ್ಲಿ ಸ್ಯಾಮ್ಸನ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತು.

ಅಲ್ಲದೆ ಕಳೆದ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೂ ಸ್ಯಾಮ್ಸನ್ ಆಯ್ಕೆಯಾಗಿದ್ದರು, ಆದರೆ, ಅಲ್ಲಿ ಬೆಂಚ್ ಕಾದಿದ್ದು ಬಿಟ್ಟರೆ ಇವರಿಗೆ ಒಂದು ಪಂದ್ಯದಲ್ಲೂ ಆಡಲು ಅವಕಾಶ ನೀಡಲಿಲ್ಲ.

 

ಇಂದಿನ ಪಂದ್ಯಕ್ಕೆ ಸ್ಯಾಮ್ಸನ್ ಜೊತೆ ಮನೀಶ್ ಪಾಂಡೆಯನ್ನೂ ಕಣಕ್ಕಿಳಿಸಿಲ್ಲ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ ಪಾಂಡೆ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಆದರೂ ಪಾಂಡೆಯನ್ನು ಆಡುವ ಬಳಗಕ್ಕೆ ಆಯ್ಕೆ ಮಾಡಿಕೊಂಡಿಲ್ಲ.

 U19 World Cup: ಹಾಲು ಮಾರುವವನ ಮಗ ಈಗ ಟೀಂ ಇಂಡಿಯಾ ನಾಯಕ

ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ಸೇರಿ ಒಟ್ಟು ಮೂರು ಜನ ಆಲ್ರೌಂಡರ್​​ಗಳು ತಂಡದಲ್ಲಿದ್ದಾರೆ. ರೋಹಿತ್ ಶರ್ಮಾ ಜೊತೆ ಕೆ ಎಲ್ ರಾಹುಲ್ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು ಯಜುವೇಂದ್ರ ಚಹಾಲ್ ಸ್ಥಾನ ಪಡೆದುಕೊಂಡಿದ್ದಾರೆ.

First published:December 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ