ಎರಡೂ ಟೆಸ್ಟ್​ನಲ್ಲಿ ಅವಕಾಶ ವಂಚಿತ; ಪಂದ್ಯ ಮುಗಿದ ಬಳಿಕ ರೋಹಿತ್ ಮಾಡಿದ್ದೇನು ಗೊತ್ತಾ?

ರೋಹಿತ್ ಶರ್ಮಾ ಹೆಸರಿರುವ ಟಿ-20 ಜೆರ್ಸಿ ಧರಿಸಿ ಜಮೈಕಾದ ಇಬ್ಬರು ಅಭಿಮಾನಿಗಳು ರೋಹಿತ್​ರನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಸ್ಟೇಡಿಯಂನಲ್ಲಿ ರೋಹಿತ್​ ಎದುರು ಡಿಜೆ ಬ್ರಾವೋ ಅವರ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

Vinay Bhat | news18-kannada
Updated:September 3, 2019, 1:02 PM IST
ಎರಡೂ ಟೆಸ್ಟ್​ನಲ್ಲಿ ಅವಕಾಶ ವಂಚಿತ; ಪಂದ್ಯ ಮುಗಿದ ಬಳಿಕ ರೋಹಿತ್ ಮಾಡಿದ್ದೇನು ಗೊತ್ತಾ?
ರೋಹಿತ್ ಶರ್ಮಾ
  • Share this:
ಬೆಂಗಳೂರು (ಸೆ. 03): ಟೀಂ ಇಂಡಿಯಾ ಏಕದಿನ ಕ್ರಿಕೆಟ್​ನ ಉಪ ನಾಯಕ ರೋಹಿತ್ ಶರ್ಮಾ ವೆಸ್ಟ್​ ಇಂಡೀಸ್ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆಯಾದರು ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿಲ್ಲ. ಆದರೂ ಕೊಹ್ಲಿ ಪಡೆ ಟೆಸ್ಟ್​ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ 257 ರನ್​ಗಳಿಂದ ಗೆದ್ದು ಬೀಗಿತು. 120 ಅಂಕದೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಅಗ್ರಸ್ಥಾನಕ್ಕೇರಿತು.

ಟೆಸ್ಟ್​ ಸರಣಿಯಲ್ಲಿ ತನ್ನನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ ಎಂದಾದರು ಅದನ್ನು ಸ್ವೀಕರಿಸಿ ರೋಹಿತ್ ಆಟಗಾರರಿಗೆ ಸ್ಫೂರ್ತಿ ತುಂಬಿದರು. ಅಲ್ಲದೆ ಪಂದ್ಯ ಗೆದ್ದ ಬಳಿಕ ವೆಸ್ಟ್​ ಇಂಡೀಸ್​ನಲ್ಲಿರುವ ತನ್ನ ಅಭಿಮಾನಿಗಳೊಂದಿಗೆ ಹಿಟ್​ಮ್ಯಾನ್​​ ಮಸ್ತ್​ ಮಜಾ ಮಾಡಿದ್ದಾರೆ.

ರೋಹಿತ್ ಶರ್ಮಾ ಹೆಸರಿರುವ ಟಿ-20 ಜೆರ್ಸಿ ಧರಿಸಿ ಜಮೈಕಾದ ಇಬ್ಬರು ಅಭಿಮಾನಿಗಳು ರೋಹಿತ್​ರನ್ನು ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲದೆ ಸ್ಟೇಡಿಯಂನಲ್ಲಿ ರೋಹಿತ್​ ಎದುರು ಡಿಜೆ ಬ್ರಾವೋ ಅವರ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ಬಿಸಿಸಿಐ ಈ ವಿಡಿಯೋ ಅನ್ನು ತನ್ನ ಅಧಿಕೃತ ಟ್ವಿಟ್ಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ.

ಕ್ರೀಸ್ ಕಚ್ಚಿ ನಿಂತಿದ್ದ ವಿಂಡೀಸ್ ಆಟಗಾರನನ್ನು ಕೊಹ್ಲಿ ಪೆವಿಲಿಯನ್​ಗೆ ಅಟ್ಟಿದ್ದು ಈಗ ವೈರಲ್!

 ವೆಸ್ಟ್​ ಇಂಡೀಸ್ ಪ್ರವಾಸವನ್ನು ಭರ್ಜರಿ ಆಗಿ ಅಂತ್ಯಗೊಳಿಸಿರುವ ಭಾರತ ಟಿ-20, ಏಕದಿನ ಮತ್ತು ಟೆಸ್ಟ್​ ಸರಣಿಯನ್ನು ವಶ ಪಡಿಸಿಕೊಂಡಿದೆ.

ಶಮಿ ವಿರುದ್ಧ ಅರೆಸ್ಟ್​ ವಾರೆಂಟ್; ಬಿಸಿಸಿಐ ಮುಂದಿನ ನಡೆಯೇ ಕುತೂಹಲ!

ಈ ಗೆಲುವಿನಿಂದ ನಾಯಕ ವಿರಾಟ್ ಕೊಹ್ಲಿ ಕೂಡ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಮುರಿದಿದ್ದು, ಅತ್ಯಧಿಕ 28 ಟೆಸ್ಟ್ ಗೆಲುವಿನೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.

First published: September 3, 2019, 1:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading