'ನಾನು ನಾಟೌಟ್' ಎಂದು ಟ್ವೀಟ್ ಮಾಡಿದ ರೋಹಿತ್; ವಿಶ್ವಕಪ್​ನಲ್ಲಿ ಮತ್ತೊಂದು ವಿವಾದಾತ್ಮಕ ತೀರ್ಪು!

ರೋಹಿತ್​ ಶರ್ಮಾ ವಿರುದ್ಧ ನೀಡಿದ ವಿವಾದಾತ್ಮಕ ತೀರ್ಪಿನ ಕುರಿತು ಸಾಮಾಜಿಕ ತಾಣಗಳಲ್ಲಿ ಅಷ್ಟೇ ಅಲ್ಲದೆ ಮಾಜಿ ಕ್ರಿಕೆಟಿಗರು, ಕಾಮೆಂಟೇಟರ್​​ಗಳು ನೇರವಾಗೇ ಕಿಡಿಕಾರಿದ್ದಾರೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

  • News18
  • Last Updated :
  • Share this:
ಬೆಂಗಳೂರು (ಜೂ. 28): ವಿಶ್ವಕಪ್​ನಲ್ಲಿ ನಿನ್ನೆ ಭಾರತ-ವೆಸ್ಟ್ ಇಂಡೀಸ್​​ ಪಂದ್ಯ​ದ ಆರಂಭದಲ್ಲೇ ವಿವಾದಾತ್ಮಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಭರ್ಜರಿ ಫಾರ್ಮ್​ನಲ್ಲಿದ್ದ ರೋಹಿತ್​ ಶರ್ಮಾ ಔಟಾದ ರೀತಿ ಗೊಂದಲವನ್ನೇ ಸೃಷ್ಠಿಸಿಬಿಟ್ಟಿತು. ತೀರ್ಪು ನೀಡಬೇಕಾದ ಅಂಪೈರ್​​​ ಗೊಂದಲಕ್ಕೀಡಾಗಿ ತಪ್ಪು ನಿರ್ಧಾರ ನೀಡಿದರು. ಪರಿಣಾಮ ಅಂಪೈರ್ ನಿರ್ಧಾರದ ವಿರುದ್ಧ ಭಾರೀ ಟೀಕೆಗಳು ಕೇಳಿಬಂದ್ದವು.

ಕಳಪೆ ಗುಣಮಟ್ಟದ ಅಂಪೈರಿಂಗ್ ಕಾರಣದಿಂದ ಐಸಿಸಿ ಈಗಾಗಲೇ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ನಡುವೆ ಭಾರತ- ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಥರ್ಡ್ ಅಂಪೈರ್ ನೀಡಿರುವ ತೀರ್ಪು ಮಾಜಿ ಕ್ರಿಕೆಟಿಗರು ಹಾಗೂ ನೆಟ್ಟಿಗರಿಗೆ ಅಚ್ಚರಿ, ಆಕ್ರೋಶಗಳನ್ನು ಮೂಡಿಸಿದೆ.

ರೋಹಿತ್​ ಶರ್ಮಾ ವೆಸ್ಟ್ ಇಂಡೀಸ್ ವಿರುದ್ಧ ಉತ್ತಮವಾಗೇ ಬ್ಯಾಟಿಂಗ್ ಆರಂಭಿಸಿದರು. 1 ಬೌಂಡರಿ 1 ಸಿಕ್ಸರ್ ಸಹಿತ 18 ರನ್​ ಕಲೆಹಾಕಿದರು. ಆದರೆ ಕೇಮರ್​ ರೋಚ್​​​ನ 6ನೇ ಓವರ್​ನ ಕೊನೆಯ ಎಸೆತದಲ್ಲಿ ರೋಹಿತ್ ಔಟಾದರು. ಆದರೆ ಈ ಔಟ್ ವಾಸ್ತವದಲ್ಲಿ ನಾಟ್ ಔಟ್ ಆಗಿತ್ತು. ಆದಾಗಿಯೂ ಥರ್ಡ್ ಅಂಪೈರ್ ತಪ್ಪಾಗಿ ತೀರ್ಪು ಪ್ರಕಟಿಸಿದ್ದು, ಮಾಜಿ ಕ್ರಿಕೆಟಿಗರು ನೆಟ್ಟಿಗರು ಈ ತೀರ್ಪನ್ನು ಶಾಕಿಂಗ್ ಎಂದು ಕಿಡಿಕಾರಿದರು.

ಪಾಕ್ ಸೆಮೀಸ್ ತಲುಪದಂತೆ ಮಾಡಲು ಭಾರತ ಮುಂದಿನ ಪಂದ್ಯ ಸೋಲಲೂ ತಯಾರಿದೆ

ಅಸಲಿಗೆ ಚೆಂಡು ಬ್ಯಾಟ್ ಹಾಗೂ ಪ್ಯಾಡ್ ಮಧ್ಯೆ ಸಾಗಿ ವಿಕೆಟ್ ಕೀಪರ್ ಕೈಸೇರಿತ್ತು. ಆನ್​ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಂಡೀಸ್ ಡಿಆರ್​ಎಸ್​​​ ಮೊರೆ ಹೋಗಿತ್ತು. ಡಿಆರ್​ಎಸ್​​ ಪರಿಶೀಲನೆ ವೇಳೆ ಬ್ಯಾಟ್​​ ಹಾಗೂ ಪ್ಯಾಟ್​ಗೆ ಒಂದೇ ಸಮಯದಲ್ಲಿ ಚೆಂಡು ತಾಗಿದ್ದನ್ನು ಗಮನಿಸಿದ ಥರ್ಡ್ ಅಂಪೈರ್ ರೋಹಿತ್ ಶರ್ಮಾ ಔಟ್ ಎಂಬ ತೀರ್ಪನ್ನು ಪ್ರಕಟಿಸಿದ್ದರು. ಥರ್ಡ್​ ಅಂಪೈರ್​ ತೀರ್ಪು ನೋಡಿ ರೋಹಿತ್​ ನಗುತ್ತಲ್ಲೇ ಪೆವಿಲಿಯನ್​​ನತ್ತ ಹೆಜ್ಜೆ ಹಾಕಿದರು.

ಸದ್ಯ ರೋಹಿತ್ ಶರ್ಮಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ತಾನು ನಾಟೌಟ್ ಎಂಬ ರೀತಿಯಲ್ಲಿ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

 ಇನ್ನು ರೋಹಿತ್​ ಶರ್ಮಾ ವಿರುದ್ಧ ನೀಡಿದ ವಿವಾದಾತ್ಮಕ ತೀರ್ಪಿನ ಕುರಿತು ಸಾಮಾಜಿಕ ತಾಣಗಳಲ್ಲಿ ಅಷ್ಟೇ ಅಲ್ಲದೆ ಮಾಜಿ ಕ್ರಿಕೆಟಿಗರು, ಕಾಮೆಂಟೇಟರ್​​ಗಳು ನೇರವಾಗೇ ಕಿಡಿಕಾರಿದರು.

ಇದೀಗ ಅಧಿಕೃತ; ಟೀಂ ಇಂಡಿಯಾ ಹೊಸ ಜೆರ್ಸಿ ಹೀಗಿದೆ ನೋಡಿ

 

First published: