ನಾಳೆ ಭಾರತ ತಂಡ ಪ್ರಕಟ; ಇಬ್ಬರು ಹೊಸ ಓಪನರ್​ಗಳು ವಿಂಡೀಸ್ ವಿರುದ್ಧದ ಸರಣಿಗೆ?

ಬಿಸಿಸಿಐಗೆ ಈ ಬಾರಿ ಆಯ್ಕೆ ಮಾಡಬೇಕಾದ ಆಟಗಾರರ ಬಗ್ಗೆ ತಲೆನೋವು ಶುರುವಾಗಿದೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಬೇಕಿದೆ. ಇತ್ತ ಮತ್ತೊಬ್ಬ ಓಪನರ್ ಶಿಖರ್ ಧವನ್ ಸಂಪೂರ್ಣ ಫಾರ್ಮ್​ ಕಳೆದುಕೊಂಡಿದ್ದಾರೆ.

ಟೀಂ ಇಂಡಿಯಾ ಆಟಗಾರರು

ಟೀಂ ಇಂಡಿಯಾ ಆಟಗಾರರು

  • Share this:
ಬೆಂಗಳೂರು (ನ. 20): ಟೀಂ ಇಂಡಿಯಾ ಸದ್ಯ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಬ್ಯುಸಿಯಾಗಿದೆ. ಅಂತಿಮ ಎರಡನೇ ಟೆಸ್ಟ್​ ನ. 22 ರಂದು ಆರಂಭವಾಗಲಿದ್ದು ಡೇ ನೈಟ್ ಪಂದ್ಯ ಆಗಿರಲಿದೆ. ಬಾಂಗ್ಲಾ ಸರಣಿ ಮುಗಿದ ಬೆನ್ನಲ್ಲೆ ಭಾರತ ತವರಿನಲ್ಲೆ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಗೆ ಸಜ್ಜಾಗಬೇಕಿದೆ.

ನಾಳೆ ಕೆರಿಬಿಯನ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ. ಎಂಎಸ್​ಕೆ ಪ್ರಸಾದ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ 15 ಆಟಗಾರರ ಹೆಸರನ್ನು ನಾಳೆ ತಿಳಿಸಲಿದೆ. ಇದು ಪ್ರಸಾದ್ ಅವರ ಕೊನೆಯ ಆಯ್ಕೆ ಪ್ರಕ್ರಿಯೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಆದರೆ, ಬಿಸಿಸಿಐಗೆ ಈ ಬಾರಿ ಆಯ್ಕೆ ಮಾಡಬೇಕಾದ ಆಟಗಾರರ ಬಗ್ಗೆ ತಲೆನೋವು ಶುರುವಾಗಿದೆ. ಟೀಂ ಇಂಡಿಯಾದ ಓಪನರ್ ಆಯ್ಕೆ ಪ್ರಸಾದ್​ಗೆ ಕಬ್ಬಿಣದ ಕಡಲೆಯಂತಾಗಿದೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಬೇಕಿದೆ. ಇತ್ತ ಮತ್ತೊಬ್ಬ ಓಪನರ್ ಶಿಖರ್ ಧವನ್ ಸಂಪೂರ್ಣ ಫಾರ್ಮ್​ ಕಳೆದುಕೊಂಡಿದ್ದಾರೆ.

ಕಾಡಿನ ರಾಣಿ ಸಾಕ್ಷಿ ಧೋನಿಗೆ ಜನುಮದಿನದ ಶುಭಾಶಯ; ವೈರಲ್ ಆಗುತ್ತಿದೆ CSK ಟ್ವೀಟ್

ರೋಹಿತ್ ಶರ್ಮಾ ಈ ವರ್ಷ ಐಪಿಎಲ್​ ಸೇರಿ ಒಟ್ಟು 60 ಪಂದ್ಯಗಳನ್ನು ವಿಶ್ರಾಂತಿ ಇಲ್ಲದೆ ಆಡಿದ್ದಾರೆ. 25 ಏಕದಿನ, 11 ಅಂತರಾಷ್ಟ್ರೀಯ ಟಿ-20 ಸೇರಿ ನಾಯಕ ವಿರಾಟ್ ಕೊಹ್ಲಿಗಿಂತಲೂ ಅಧಿಕ ಪಂದ್ಯದಲ್ಲಿ ಹಿಟ್​ಮ್ಯಾನ್ ಈ ವರ್ಷ ಕಣಕ್ಕಿಳಿದಿದ್ದಾರೆ.

ಅಲ್ಲದೆ ಮುಂದಿನ ವರ್ಷದ ಆರಂಭದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಬೆಳೆಸಲಿದೆ. ಕಿವೀಸ್ ವಿರುದ್ಧ 5 ಟಿ-20, ಮೂರು ಏಕದಿನ ಹಾಗೂ ಎರಡು ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಹೀಗಾಗಿ ವಿಂಡೀಸ್ ವಿರುದ್ಧದ ಸರಣಿಯಿಂದ ರೋಹಿತ್ ವಿಶ್ರಾಂತಿ ಪಡೆಯಲಿದ್ದಾರೆ.

ಇತ್ತ ಶಿಖರ್ ಧವನ್ ವಿಶ್ವಕಪ್ ಬಳಿಕ ಸಂಪೂರ್ಣ ಫಾರ್ಮ್​ ಕಳೆದುಕೊಂಡಿದ್ದಾರೆ. ದೇಶೀಯ ಪಂದ್ಯಗಳಲ್ಲಿ ಆಡುತ್ತಿರುವ ಇವರು, ಅಲ್ಲಿಯೂ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ.

ಬಾಂಗ್ಲಾ ವಿರುದ್ಧದ ಟಿ-20 ಸರಣಿಯಲ್ಲೂ ಧವನ್ 41, 31 ಹಾಗೂ 19 ರನ್ ಕಲೆಹಾಕಿದ್ದರಷ್ಟೆ. ದೇಶೀಯ ಕ್ರಿಕೆಟ್​​ನಲ್ಲಿ ಇತ್ತೀಚೆಗಿನ ಧವನ್ ಪ್ರದರ್ಶನ 0, 9, 19, 35 ಈ ರೀತಿ ಇದೆ. ಹೀಗಾಗಿ ವಿಂಡೀಸ್ ಸರಣಿಗೆ ಆರಂಭಿಕರಾಗಿ ಯಾರನ್ನು ಆಯ್ಕೆ ಮಾಡುವುದು ಎಂಬ ದೊಡ್ಡ ಪ್ರಶ್ನೆ ಆಯ್ಕೆ ಸಮಿತಿಗೆ ಎದುರಾಗಿದೆ.

ಡೇ ನೈಟ್ ಟೆಸ್ಟ್​​ನಲ್ಲಿ ಕೊಹ್ಲಿ 32 ರನ್ ಗಳಿಸಿದರೆ ಅದು ಭಾರತ ಪರ ಯಾರೂ ಮಾಡಿರದ ಸಾಧನೆ!

ಈ ನಡುವೆ ರೋಹಿತ್ ವಿಶ್ರಾಂತಿ ಪಡೆಯುತ್ತಿರುವ ಕಾರಣ ಟೆಸ್ಟ್​ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿ ಮಿಂಚಿರುವ ಮಯಾಂಕ್ ಅಗರ್ವಾಲ್​​ಗೆ ಅವಕಾಶ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ನಿಂತು ಆಡುವುದುಕ್ಕೂ, ಹೊಡಿಬಡಿ ಆಟಕ್ಕೂ ಸೈ ಎನಿಸಿಕೊಂಡಿರುವ ಮಯಾಂಕ್​ನನ್ನು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಯೋಚನೆ ಬಿಸಿಸಿಐ ಹೊಂದಿದೆ.

ಇನ್ನು ಮತ್ತೊಬ್ಬ ಓಪನರ್ ಆಗಿ ಸಂಜು ಸ್ಯಾಮ್ಸನ್ ಆಯ್ಕೆ ಆಗಲಿದ್ದಾರೆ ಎಂದು ಹೇಳಲಾಗಿದೆ. ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾದರು ಸ್ಯಾಮ್ಸನ್ ಬೆಂಚ್ ಕಾಯಬೇಕಾಗಿ ಬಂತು. ಹೀಗಾಗಿ ವಿಂಡೀಸ್ ವಿರುದ್ಧದ ಸರಣಿಗೆ ಸ್ಯಾಮ್ಸನ್ ಆಯ್ಕೆಯಾಗಲಿದ್ದಾರಂತೆ. ಇನ್ನು ಬ್ಯಾಕ್​ಅಪ್ ಓಪನರ್ ಆಗಿ ಕೆ ಎಲ್ ರಾಹುಲ್ ಇರಲಿದ್ದಾರೆ.

ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಹನಿಟ್ರ್ಯಾಪ್‌ ಮೂಲಕ ಆಟಗಾರರಿಗೆ ಬ್ಲ್ಯಾಕ್‌ಮೇಲ್

ವೆಸ್ಟ್​ ಇಂಡೀಸ್ ವಿರುದ್ಧ ಭಾರತ ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿ ಆಡಲಿದೆ. ಮೊದಲ ಟಿ-20 ಪಂದ್ಯ ಡಿ. 6 ರಂದು ಮುಂಬೈನಲ್ಲಿ ನಡೆದರೆ, ಎರಡನೇ ಟಿ-20 ಡಿ. 8, ತಿರುವನಂತಪುರಂ ಹಾಗೂ ಅಂತಿಮ ಟಿ-20 ಡಿ. 11ರಂದು ಹೈದರಾಬಾದ್​ನಲ್ಲಿ ಆಯೋಜಿಸಲಾಗಿದೆ. ಇನ್ನು ಮೊದಲ ಏಕದಿನ ಡಿ. 15 ಚೆನ್ನೈನಲ್ಲಿ, ಎರಡನೇ ಪಂದ್ಯ ಡಿ. 18 ವಿಶಾಖಪಟ್ಣಣಂ ಹಾಗೂ ಮೂರನೇ ಏಕದಿನ ಡಿ. 22 ಕತಕ್​​ನಲ್ಲಿ ನಡೆಯಲಿದೆ.

First published: